ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

193 ಸಂಧಿ ೧೩] ನಿವಾತಕವಚರುದ್ಧ ಪರ್ವ ಅರ್ಜ್‌'ನನನ್ನು ಕುರಿತು ಇಂದ್ರನು ಸ್ವರ್ಗದ ತೊಂದರೆಯನ್ನು ಹೇಳಿದುದು, ಶಿವನ ಕೃಪೆ ನಿನಗಾಯ್ತು ನಿರ್ಜರ ನಿವಹವಿದೆ ನಾಕದಲಿ ಬಲುದಾ ನವರ ವಿಲಗದಿ ಬೆಚ್ಚು ವೋದುದು ಸ್ವರ್ಗಸಾಖ್ಯಫಲ ! ಜವನ ಭಯ ಜೀವರಿಗೆ ದುರ್ಜನ ರವಗಡವು ಸುಜನರಿಗೆ ತಮ ಶಶಿ ರವಿಗಳಿಗೆ ಮುನಿವಂತೆ ಖಳದೆ ಯೆಂದನಮರೇಂದ್ರ || ೩ ಮುದದ ನೆಲೆ ಶುಭದಿಕ್ಕೆ ಸೊಗಸಿನ ಸದನ ಸಖ್ಯದ ಗರುಡಿ ಸೋಂಪಿನ ಪದವಿ ಲೀಲೆಯ ತಾಣ ತಾಯ್ತನೆ ಖೇಳಮೇಳವದ | ಮ'ದದ ಮಡು ಭೋಗ್ಯಕನಿಧಿ ಸಂ ಪದದ ಜನ್ಮಸ್ಥಲ ಮನೋರಥ ದುವಯಗಿರಿ ಹಿಂದೀಸುದಿನವಮರಾವತೀನಗರ | ಕಳವಳದ ನೆಲೆ ಭಯದ ಜನ್ನ ಸ್ಥಲ ವಿಷಾದದ ಸೇವೆ ಖಾತಿಯ ನಿಳಯ ಖೋಡಿಯ ಕಟಕ ಭಂಗದ ಸಂಭವಸ್ಥಾನ | ಅಳುಕಿನಂಗಡಿ ಹಳಿವಿನಾಡುಂ ಬೋಲ ನಿರೋಧದ ಕಾಲ ದುಗುಡದ ಕಳವೆನಿಸಿತೀನಗರಿ ಯಾಗಳು ಪರ್ಥ ಕೇಳಂದ !! ಸಿಡಿಲಕಾಲದೊಳಗುವಂತಿರೆ ಕಡಲು ಕಲ್ಪದೊಳುಕ್ಕುವಂತಿರೆ ಪೊಡವಿಯಾಕಸ್ಮಿಕದೊಳಿತವಂತಿರೆ ರಸಾತಳಕೆ | ARANYA PARVA 26