ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

224 ಮಹಾಭಾರತ [ಅರಣ್ಯಪರ್ವ ನಿಯತವೀಶೋತಾದಿಗಂಚೇಂ ದ್ರಿಯದ ನಿಗ್ರಹ ದಮವೆನಿಪ್ಪುದು ಭಯವನಿತರರಿಗಾಚರಿಸದಿಹುದೇ ಯಹಿಂಸೆ ಕಣ | ನಯವಿದನ ಚಿತ್ರವಿಸು ಲೋಕ ತ್ರಯವನೊಂದೇ ಸತ್ಯದಿಂದವೆ ಜಯಿಸಬಹುದಾಸತ್ಯವುಳನೆ ವಿಪ್ರನವನೆಂದ | ೫೪ ಸತ್ಯವೇ ಸ್ವಾಧ್ಯಾಯ ಸತ್ಯವೆ ನಿತ್ಯಕರ್ಮವಿಧಾನ ವೊಂದೇ ಸತ್ಯವೇ ಜಪ ಹೋಮ ಯಜ್ಞಧ್ಯಾನದಾನತಪ || ಸತ್ಯವುಳ್ಳರೆ ಶೂದ್ರ ಹರಿಂ ದತ್ಯಧಿಕನಾದ್ವಿಜರೊಳಗೆ ವರ ಸತ್ಯಹೀನನೆ ಹೀನಜಾತಿಗನೆಂದನಾಭೂಪ || | ೫೫ ಧೀರನಾವನು ಧಿಟ್ಟನಾರು ವಿ ಕಾರಿ ಯಾರು ವಿನೀತನಾರಾ ಚಾರಹೀನನದಾರು ಸುವ್ರತೆಯಾರು ಶಠನಾರು | ಕರನಾರತಿಕನಾರು ವಿ ಚಾರಿ ಯಾರು ವಿಮುಕ್ತನಾರು ವಿ ದೂರನಾರಿಹಪರಕೆ ಭೂಮಿಾಪಾಲ ಹೇಪಂದ || ೫೬ ನಾರಿಯರ ಕಡೆಗಣ ಹೊಯ್ಲಿನ ಧಾರೆಗಳುಕದ ನಾವನಾತನೆ ಧೀರನಾತನ ಧಿಟ್ಟನಬಲೆಯರುಬ್ಬುಗವಳದಲಿ | ಮೇರೆದಪ್ಪಿದವನೆ ವಿಕಾರಿ ವಿ ಚಾರಪರನೆ ವಿನೀತನನ್ನಾ ಚಾರಯುತನಾಚಾರಹೀನನು ಫಣಿಪ ಕೇಳಂದ | ೫೭