ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

238 ಮಹಾಭಾರತ [ಅರಣ್ಯಪರ್ವ ವೊಮದಲಿ ತದಹಂಮಹತ್ತು ವಿ ರಾಮವಾಪ್ರಕೃತಿಯಲಿ ಮಾಯಾ ಕಾಮಿನಿಗೆ ಪರಮಾತ್ಮನಲ್ಲಿ ಲಯವೆಂದನಾಮುನಿಪ || ೩೦ ಏಸುದಿನ ಬೀಜಗದ ಬಾಳುವೆ ಯೇಸುದಿನ ವೀಪ್ರಳಯಮಯ ಪರಿ ಭಾಸಮಾನಬ್ರಹ್ಮತೇಜೋರೂಪ ವೇಸುದಿನ | ಆಸದಾನಂದೈಕರಸವೆ ಪ್ರ ಕಾಶಿತವವಿದ್ಯಾಪ್ರಪಂಚವಿ ಲಾಸವಾಯು ವಿಭಾಗಸೈವಿಧಾನಚಿಂತೆಯಲಿ || ತಿರುಗಿ ಸೃಷ್ಟಿಕ್ರಮ ನಿರೂಪಣ ಏಕಮೇವಾದ್ವಿತಿಯವೆಂಬ ನಿ ರಾಕುಳಿತತೇಜೋನಿಧಿಗೆ ಮಾ ಯಾಕಳತ್ರದೊಳಾಯ್ತು ನಿಜಗುಣಭೇದವದಖಿಂದ | ಆಕಮಲಭವನೀಮುಕುಂದಪಿ ನಾಕಿಯೆಂಬಭಿಧಾನದಲಿ ತ್ರಿಗು ಣಾಕೃತಿಯ ಕೈಕೊಂಡನುರುಲೀಲಾವಿನೋದದಲಿ || ಆರಜೋಗುಣಕಬುಜಭವನ ವಿ ಕಾರಿ ತನ್ನ ಶರೀರದರ್ಧವ ನಾರಿಯನು ಮಾಡಿದನು ಶತರೂಪಾಭಿಧಾನದಲಿ | ಸೇರಿಸಿದನರ್ಧದಲಿ ಮನುವನು ದಾರಚರಿತನು ಸಕಲಧರ್ಮದ ಸಾರವನು ವಿಸ್ತರಿಸಿದನು ಮನು ಭುವನವಿಭುವಾಗಿ || ೩ ಭ್ರಗುಪುಲಸ್ಕೃವಸಿಷ್ಠ ದಕ್ಷಾ ದಿಗಳನಿಪ್ಪನವಪ್ರಜೇಶ್ವರ ರೊಗುಮಿಗೆಯ ಮಾಡಿದರು ಸೃಷ್ಟಿಗೆ ಬೇರೆ ಬೇಅವರು | ೩೪