ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

243 ೨ ಸಂಧಿ ೧೬] ಮಾರ್ಕಂಡೇಯ ಸಮಾಖ್ಯಾಪರ್ವ ಧರಣಿಪತಿ ಕೇಳಾ ಮಹೀಸುರ ವರನು ವೇದಾಧ್ಯಯನಪರನನ ವರತವಿದ್ಯಾಭಾಸಶೀಲನು ವನದಲೊಂದುದಿನ | ಮರದ ಮೊದಲಲಿ ವೇದಪಾಠಕ ನಿರೆ ಮಹೀರುಹದಗ್ರದಲಿ ಸಂ ಚರಿಸುತಿಹ ಬಗವಿಪ್ಪೆ ಬಿದ್ದುದು ಮೇಲೆ ಭೂಸುರನ || ಮೇಲೆ ನೋಡಿದನಧಿಕರೋಪ ಜ್ವಾಲೆಯಲಿ ಗಣಿ ಸೀದು ಧರಣಿಯ ಮೇಲೆ ಬಿದ್ದುದು ವಿಹಗವೀತನ ಮುಂದೆ ತನು ಬೆಂದು | ಭಿಕ್ಷೆಯನ್ನಿಡುವವಳ ಉತ್ತರ. ಲೀಲೆಯಲಿ ಭೂದೇವನಲ್ಲಿಂ ಮೇಲೆ ಭಿಕ್ಷಾಟನಕೆ ಭೂಸುರ ರಾಲಯದ ಹಂತಿಯಲಿ ಹೊಕ್ಕನು ಭೂಪ ಕೇಳಂದ || ಒಂದು ಮನೆಯಲಿ ಭಿಕ್ಷೆಗೊಸುಗ ನಿಂದನಾಮನೆಯಾಕೆ ಭಿಕ್ಷವ ತಂದಪೆನು ನಿಲ್ಲೆನುತ ಪತಿಪರಿಚರ್ಯೆಯನ ಮಾಡಿ | ತಂದು ಭಿಕ್ಷೆಯ ಹಿಡಿಯೆನಲೆ ದೀಪ ನಂದು ಮುದಿದೀಕಿಸಿದೊಡಾಸತಿ ಯೆಂದಳಲೆ ಮರುಳ ಕುಜಗ್ರದ ವಿಹಗನಲ್ಲೆ೦ದು || ಬಳಿಕ ತನ್ನ ವರ್ತಮಾನವನ್ನು ಹೇಳಿ ಧರ್ಮವ್ಯಾಧನ ಬಳಿಗೆ ಕಳುಹಿಸಿದುದು ಬೆರಗಿನಲಿ ದ್ವಿಜನೆಂದ ನೀನೆಂ ತದೆ ಈಡನೆ ವಿಪ್ರ ನಿಗಮವ ನಖಿಯ ಧರ್ಮರಹಸ್ಯತತ್ವದ ಸಾರಸಂಗತಿಯು | ೪