ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

312 ಮಹಾಭಾರತ [ಅರಣ್ಯಪರ್ವ ಫಡ ಯೆನುತ ನಾರಾಳದಲಿ ಬಲ ನೆಡನ ಕೀಲಿಸಿ ಪಿಂಗಡೆಯವುಂ ಗಡೆಯ ಕಟ್ಟದನಂಬಿನಲಿ ಖಚರಾಧಿಪನ ರಥವ | ನೂಕದಿರಲಾಹವಕ ಸಮ್ಮುಖ ವೇಕೆನುತ ಹತ್ತಿದನು ಗಗನವ ನಾಕಿರೀಟಯ ಗೆಲುವೆನೆಂದುಬ್ಬರದ ಗರ್ವ ದಲಿ ! | ನಾಕನಿಳಯರ ಮಾರ್ಗದಲಿ ಸ ವ್ಯಾಕುಳನು ಭಾವಿಸುತಿರೆ ಲೋ ಕೈಕವೀರನಲಾ ಧನಂಜಯನಡದನು ನಭವ || ಎಲವೊ ಕೌರವಸಹಿತ ಕಮಠನ ಕೆಳಗೆ ಧುವನಿಂ ಮೇಲೆ ಹೊಕ್ಕರೆ ಕೊಲುವೆನಲ್ಲದೆ ಬಿಡುವೆನೇ ಫಡ ನಿಲ್ಲು ನಿಲ್ಲೆನುತ | ತುಳುಕಿದನು ಕೆಂಗೊಲನಿನಮಂ ಡಲಕೆ ದಿಗ್ಮೆ ಯಾಯ್ತು ನಭದಲಿ ಸುಲಿವ ಸುರರ ವಿಮಾನತತಿ ಚೆಲ್ಲಿದುವು ದೆಸೆದೆಸೆಗೆ || ಚಿತ್ರಸೇನನು ಹೇಳಿದ ನೀತಿ, ತಿರುಗಿ ನಿಂದನು ಖಚರಪತಿ ನಿ ಪುರವಿದೇನೈ ಪಾರ್ಥ ನೀ ಕಡು ಮರುಳೂ ಮೂರ್ಖನೂ 2 ಜಡನೊ ಪಿತ್ತಭ್ರಾಂತಿವಿಲನೋ | ಧುರದ ಕೌತುಕಗರಳಮೂರ್ಛಾ೦ ತರಿತಹೃದಯನೊ ನಿಲ್ಲು ಚಾಪದ ಕರವನುಪಸಂಹರಿಸು ತನ್ನಯ ಮಾತ ಕೇಳಂದ || ಹುಲಿಯ ಮಣಿದೊತ್ತಿದರೆ ಪಶುಸಂ ಕುಲಕೆ ಸಂಕಟವೇನು ವಾಯಸ ಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ | 1 ಬೊಬೈಯಲಿ, ಚ, 2 ವಢನೊ ಜ,