ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಈಯೆರಡುಕರ್ಮದಿ ಸುಯೋಧನ ನಾಯುಷವದೈಶ್ವರ್ಯ ಕೆಡುವುದಿ ದಾಯವಾದರು ಮಾಡಲಾಗದು ಶಾಸ್ತ್ರ ನಿಶ್ಚಯಕೆ || ರಾಯ ನಿಮ್ಮಯ ಸತಿಯ ಭಾಗ್ಯದ ದಾಯದಲಿ ನಿಮಗಕ್ಕು ಲೋಕ ನ್ಯಾಯಸಂಪದ ಮೇಲೆ ಕೈವಲ್ಯಾದಿಫಲವೆಂದ | ೩೭ ಇನಿತು ಪೇಟ್ಟು ಮುರಾರಿ ಧರ್ಮಜ ಮುನಿಯು ಕರೆದು ಕುತುಪಕಾಲದ ನೆರೆಹ ನೋಡಲು ಕಾಲತಪ್ಪಿದೊಡದುವೆ ಫಲವಹುದೆ || ಎನಲು ಮುದದಿಂದೆದ್ದು ಕರಯುಗ ವನು ಶಿರದೊಳಾಂತನು ಹರುಷಮಿಗೆ ಮುನಿಯ ಹೊರೆಗೈದಿದನು ಮೆಚ್ಚಿಕ್ಕಿದನು ಭಕ್ತಿಯಲಿ | ೩V - ಧರ್ಮರಾಯನನ್ನು ಕುರಿತು ಜೈಮಿನಿಯ ಸ್ತುತಿ. ಮುನಿಪನಾಶೀರ್ವದಿಸುತಾಯಮ ತನಯ ಸರಿಯೇ ನಿನಗೆ ರಾಯರು ಘನತರದ ಪುಣ್ಯಾತ್ಮ ನೀನುಮಚರಿತನೆಲೆ | ದನುಜಮರ್ದನ ನಿಮ್ಮ ಸಹಚರ ನೆನಿಸಿಕೊಂಡೊಡನಾಡಿದನು ಘನ ಸನಕನಾರದಮುಖರಿಂಗಿನಿತಿಲ್ಲ ಸುಖವೆಂದ | ಈಸುದಿನ ನಾನಾತಪದಲಾ ಯಾಸ ಬಟ್ಟೆವು ಕಾಣೆವಾತನ ನೇಸು ಧನ್ಯನೊ ನೀನೆನುತ ಮುನಿಯೆದ್ದನಾಕ್ಷಣಕೆ || ಭೂಸುರನು ಕೈವಿಡಿದು ಧರ್ಮನ ಭಾವಿಸುತ ನಡತಂದು ಕಂಡನು ವಾಸುದೇವನನಂದು ಮೆಯ್ತಿಕ್ಕಿದನು ಭಕ್ತಿಯಲಿ || 8o