ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ ೯೧ ಮುಂತಾದ ಬ್ರಾಹ್ಮಣರ ಸಂಖ್ಯೆಯು ಹಿಂದು- ಹಿಂದೂವರೆ ಸಾವಿ ರದ ವರೆಗೆ ಇರಬಹುದು, ಸಂಕೇತಿಗಳೆಂಬ ಜಾತಿಯವರೂ ಕೆಲವರಿರುವರು; ಆದರೆ ಆ ಎಲ್ಲ ಭಿನ್ನ-ಭಿನ್ನ ಮತಸ್ಥರಲ್ಲಿ ಐಕ್ಯವಿ ರದ್ದರಿಂದ, ಅವರು ಒಬ್ಬರನ್ನೊಬ್ಬರು ಆಡಿಕೊಳ್ಳುವ' ಸಾಂಪ್ರದಾ ಯವು ಅಲ್ಲಿ ಬಿದ್ದಿರುತ್ತದೆ ನಮ್ಮ ದೇವಗಣಗಳು ಒಬ್ಬ ಕರ್ನಾ ಟಕ ನಲ್ಲಿ ಅಂದಿನ ರಾತ್ರಿಯ ಊಟವನ್ನು ತೀರಿಸಿಕೊಂಡು ರೇಲ್ವೆ ಸ್ಟೇಶನಿಗೆ ಬಂದು ಬಿಟ್ಟರು. ಮೈಸೂರ-ಅರಸೀಕೆರೆಯ ಲೋಹ ಮಾರ್ಗವು ಪ್ರಾರಂಭವಾಗಿ ೪-೮ ವರ್ಷಗಳಾಗಿದ್ದವು; ಆದರೆ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗಿದ್ದರಿಂದಲೂ, ರೇಲ್ವೆ ಕಂಪನಿಯ ಅವ್ಯವಸ್ಥೆಯಿಂದಲೂ ಅಲ್ಲಿ ಒಂದೇ ಒಂದು ಗಾಡಿಯು ಹೋಗಿ. ಬರುತ್ತಿತ್ತು ರಾತ್ರಿ ಹತ್ತು ಗಂಟೆಗೆ ದೇವಗಣಗಳು ಮೈಸೂರಿಂದ ಬಂದ ಲೋಹಯಾನವನ್ನು ಆರೋಹಿಸಿ ಆರ್ಸಿ ಕರೆಗೆ ನಡೆದರು. ವರುಣನು ಗಾಡಿಯಲ್ಲಿ ಅಡಾಗಿಯ ಹಾಸನ, ಹಳೆ ಬಿಡು, ಶ್ರಾವಣಬೆಳಗುಳ ಮುಂತಾದ ಊರುಗಳ ಪ್ರಾಚೀನ ಅರ್ವಾಚೀನ ಇತಿಹಾಸಗಳನ್ನೂ, ಅಲ್ಲಲ್ಲಿ ಹಿಂದೂ-ಜೈನರ ದೇವಸ್ಥಾನ .ಬಸ್ತಿ ಗಳನ್ನೂ ವರ್ಣಿಸಿ ಹೇಳಿದನು. ಸರಾಸರಿ ರಾತ್ರಿ ೨ ಗಂಟೆಗೆ ಆ ರೈಲು ಆರ್ಸಿ ಕರೆಯ ಸ್ಟೇಶ ೩ಗೆ ಬಂದು ಸೇರಿತು. ಕೂಡಲೆ ದೇವಗಣಗಳು ಇಳಿದು ಸ್ಟೇಶ ೩ಗೆ ಸಮೀಪದಲ್ಲಿರುವ ಛತ್ರದಲ್ಲಿಳಿದುಕೊಂಡು ಅಂದಿನ ರಾತ್ರಿ ಯನ್ನು ಕಳೆದರು. ಆ ರಾತ್ರಿ ಇಲ್ಲಿ ಯಾರಿಗೂ ನಿದ್ದೆ ಹತ್ತಲಿಲ್ಲ. ಯಾಕೆಂದರೆ, ಅಲ್ಲಿ ಕಳ್ಳರ ಉಪದ್ರವವು ಹಚ್ಚೆ೦ದೂ, ಅ೦ತೇ ಆ ಊರಿಗೆ ಕಳ್ಳ ಅರ್ಸಿ ಕರೆ ” ಎಂದೆನ್ನುವರೆಂದೂ ವರುಣನು ಮೊದಲೇ ಅವರಿಗೆ ಹೇಳಿದ್ದನು ಬೆಳಗಾದ ಮೇಲೆ ದೇವತೆಗಳು ಸಮೀಪದ ಬಾವಿಯಲ್ಲಿ ಸ್ನಾನ ಮಾಡಿ ಆತ್ಮಿಕ ಮುಗಿಸಿಕೊಂಡು ಊರಲ್ಲಿ ಅಡ್ಡಾಡ ಹೋದರು ಅರ್ಸಿಕರೆಯು ಅಷ್ಟೊಂದು ದೊಡ್ಡ ಪಟ್ಟಣವಾಗಿರದಿದ್ದರೂ ಅಲ್ಲಿಯ ವ್ಯಾಪಾರವು ಮಿಗಿಲಾದದ್ದು. ತೆಂಗು, ಅಕ್ಕಿ, ಸೀಮೆಯ ದನೆ ಇವುಗಳ ವಾಪಾರವೇ ಮುಖ್ಯವು, ಪ್ರತಿಸಂತೆಯ ದಿವಸ ಏನಿಲ್ಲೆಂದರೂ ಎರಡು ಸಾವಿರಗಳ ವರೆಗೆ ಎತ್ತಿನ ಗಾಡಿಗಳು ಅಲ್ಲಿಗೆ ಬರುತ್ತಿರುತ್ತವೆ, ಅದರ ಹೊರತು ಕೈಮರ್ಗದಿಂದ