ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨ [ಕರ್ನಾಟಕಕ್ಕೆ ಸಾಗುವ ವ್ಯವಹಾರವು ಬೇರೆ ದೇವತೆಗಳು ಊರಲ್ಲೆಲ್ಲ ತಿರುಗಾ ಡಿದರು, ಅಲ್ಲಿಯ ಯಾವ ಬಾವಿಯಲ್ಲಿ ಮೊಹರಮ್ಮ ಹಬ್ಬದ ದಿವಸ ಪಂಜಾ (ಅಲ್ಲಾ ದೇವರ ಕೃ) ಏಳುವದೋ, ಆದನ್ನು ವರುಣನು ಬ್ರಹ್ಮಾದಿಗಳಿಗೆ ತೂರಿಸಿ ಅ ಸಂಗತಿಯನ್ನು ತಿಳಿಸಿದನು.

  • *ನಂತರ ದೇವಗಣಗಳು ಸಮೀಪದಲ್ಲಿಯೇ ಇರುವ ಚಿಕ್ಕತಿರು ಪತಿಯ ದೇವಸ್ಥಾನಕ್ಕೆ ಹೋದರು. ಅಲ್ಲಿಯ ದೇವಸ್ಥಾನವನ್ನು ನೋಡಿಕೊಂಡು ಅಲ್ಲಿಯೇ ಮಧ್ಯಾಹ್ನವನ್ನು ತೀರಿಸಿಕೊಂಡರು. ಸಾಯಂಕಾಲದಲ್ಲಿ ಅಲ್ಲಿಂದ ಬರುವಾಗ ಯಾವ ಒಬ್ಬ ಸಾಧಿಯು ದೇವರ ಪ್ರೀತ್ಯರ್ಥವಾಗಿ ತನ್ನ ಮನೆಯ ಕಂಬದಲ್ಲಿ “ಪ್ಪಳಾಗಿರು ವಳೋ, ಆ ಮನೆಗೆ ಹೋಗಿ, ಆ ಕಂಬಕ್ಕೆ ನಮಸ್ಕರಿಸಿ, ಅರ್ಸಿ ಕರೆಗೆ ಬಂದರು; ಹಾಗೂ ಮೂರೂಸಂಜೆಯ ರೈಲಿನಲ್ಲಿ ಕುಳಿತು, ತುಮಕೂರ ಕಡೆಗೆ ಸಾಗಿದರು.

ತುಮಕೂರ. (May ಅರ್ಸಿಕರೆಯಿಂದ ಎರಡನೇ ಸ್ಟೇಶನ್ನೇ ಕೊನೆಹಳ್ಳಿಯು, ಅದು ಹಿಂದಕ್ಕೆ ವೀರಪುಂಗವನೆಂದು ಆಗಿ ಹೋದ ಹೈದರನ ಜನ್ಮಸ್ಥಾನ ಎಂದೂ, ಹೈದರನ ಕಾಲಕ್ಕೆ ಮೈಸೂರ ದೇಶವು ಈ ಹಳ್ಳಿಯ ವರೆಗೇ ಹಬ್ಬಿತ್ತಾದ್ದರಿಂದ ಇದಕ್ಕೆ ಕೊನೇಹಳ್ಳಿಯೆಂಬ ನಾಮ ಧೇಯವು ಉಂಟಾಗಿರುವದಂದೂ ವರುಣನು ತಿಳಿಸಿದನು. ಕೊನೇ ಹಳ್ಳಿಯು ದಾಟಿದ ಮೇಲೆ ಹತ್ತುವ ಸ್ಟೇಶನ್ನು ತಿನ್ನೂರು, ತಿಪ್ಪ ರಲ್ಲಿ ತೆಂಗಿನ ವ್ಯಾಪಾರವೇ ಪ್ರಾಮುಖ್ಯವು ಮೈಸೂರ ಸೀಮೆ ಯಲ್ಲಿ, ಅದೇಕೆ? ಇಡಿ ಕರ್ನಾಟಕದಲ್ಲಿ ತಿಪ್ಪರಂಥ ಕಾಯಿವ್ಯಾಪಾ ರದ ಸ್ಥಳವು ಬೇರೊಂದಿಲ್ಲ. ಈ ಪ್ರಾಂತದ ಕಾಯಿಗಳು ತಾಳಿಕೆ ಯುಳ್ಳವುಗಳಾಗಿರುವಂತೆ ಹಿಳ್ಳೆ ರುಚಿಯುಳ್ಳವೂ ಆಗಿರುತ್ತವೆ. ತಿಪ್ಪರು ಸ್ಟೇಶನ್ನು ದಾಟುವಷ್ಟರಲ್ಲಿ ಬ್ರಹ್ಮಾದಿಗಳಿಗೆ ನಿದ್ರೆ ಹತ್ತಿತು, ಮುಂದೆ ಎರಡು ತಾಸುಗಳ ತರುವಾಯ ಜನಸ್ತೋಮದ ಕಲ ಕಲಾಟದಿಂದ ಅವರು ಎಚ್ಚತ್ತು ನೋಡುತ್ತಾರೆ, ಯಾವದೋ ಒಂದು ದೊಡ್ಡ ಸ್ಟೇಶನ್ನಿನಲ್ಲಿ ತಮ್ಮ ಬಂಡಿಯು ನಿಂತಿದ್ದು, ಅಲ್ಲಿಂದ ಏರುವ ಪ್ರಯಾಣಿಕರ ಸಂಖ್ಯೆಯು ಇಳಿಯುವವರಿಗಿಂತ ಹೆಚ್ಚಾದ್ದರಿಂದ ಆ