ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ. ೧೧೧ ತು, ಆ ಕಾಳಗದಲ್ಲಿ ಇಂಗ್ಲಿಷರಿಗೆ ಜಯವಾಗಲು ಬಹುದೂರದ ವರೆಗೆ ಕಾಣುವಂಥ ಒಂದು ಎತ್ತರವಾದ ವಿಜಯ ಲಭವು ಆ ಫ್ರೆಂಚ ರಾಕ್ಷ= ಫ್ರೆಂಚರು ತಳವೂಗಿದ ಗುಡ್ಡದ ಬದಿಯಲ್ಲಿ (ಹಿರೋಡೆ ಯೆಂಬ ಗ್ರಾಮದ ಹತ್ತರ) ಇಂಗ್ಲಿಷರಿಂದ ನಿಲ್ಲಿಸಲ್ಪಟ್ಟಿರುತ್ತದೆ. ದೇವಗಣಗಳು ಛತ್ರದಲ್ಲಿ ಪ್ರಾತರ್ವಿಧಿ, ಸ್ನಾನ ಆಯ್ಕೆ ಕಗ. ಳನ್ನು ಮುಗಿಸಿಕೊ೦ಡರು: ಹಾಗು ಹತ್ತು ಗಂಟೆಯಾಗುವಷ್ಟರಲ್ಲಿ ಅಡಿಗ-ಊಟಗಳನ್ನೂ ತೀರಿಸಿಕೊಂಡರು, ನಂತರ ಅವರು ಆ ರಣ ಭೂಮಿಯ ನ್ನು ನೋಡಹೋದರು, ಆ ವಿಸ್ತಾರವಾದ ತಾಳು ರಣಭ ೧ಮಿಯಲ್ಲಿ ಈಗ ವಿಶೇಷವೇನೂ ಇರುವದಿಲ್ಲ. ಆ ವಿಜಯ ಸ೦ಭದ ಮೇಲೆ ( ಇಂಥ ಇಸವಿಯಲ್ಲಿ ಫ್ರೆಂಚರಿಗೂ ಇಂಗ್ಲಿಷರಿಗೂ ಇಲ್ಲಿ ದೊಡ್ಡ ಯುದ್ದ ವಾಯಿತು. ಫ್ರೆ೦ಚುಗೆ ಟೀಪೂ ಸುಲಾನನ ಪ್ರಚಂಡ ಸೈನ್ಯದ ಬೆಂಬಲವಿದ್ದರೂ ಇಂಗ್ಲಿಷವೀರರು ತಮ್ಮ ಅಲ್ಪ ಸೈನ್ಯದಿಂದಲೇ ಅವರನ್ನು ಹಣ್ಣುಗಾಯಿ.-ನೀರಗಾಯಿ ಮಾಡಿ ಬಿಟ್ಟ ರು; ಹಾಗು ರಣದೇವತೆಯು ಜಯಶಾಲಿಯಾದ ತಮಗೆ ಮಾಲೆ ಹಾಕಿದಳು, ಇತ್ಯಾದಿ ಸಂಗತಿಗಳು ಬರೆಯಲ್ಪಟ್ಟಿವೆಯಂತೆ! ಅವ ನೆಲ್ಲ ನೋಡಿಕೊಂಡು ಬರುತ್ತಿರುವಾಗ ಬ್ರಹ್ಮನ ಲಕ್ಷವು ನೈಋತ್ಯ ದಿಕ್ಕಿನ ಎತ್ತರವಾದ ಗುಡ್ಡದ ಕಡೆಗೆ ಹೋಗಲು, ಅಲ್ಲಿ ವಿಸ್ತಾರ ವಾಗಿ ಹಬ್ಬಿದ ನೀರು, ಆದರ ಸುತ್ತಲೂ ಎಷ್ಟೋ ರಾಹುಟ, ಚಿಕ್ಕೆ ಚಿಕ್ಕ ಗುಡಿಸಲು ಹಾಗು ಜನಸಮುದಾಯ ಇವುಗಳನ್ನು ನೋಡಿ ದನು. ಆಗ ಅವನು ವರುಣನನ್ನು ಕುರಿತು ಆ ವಿಷಯವಾಗಿ ಕೇಳಿ ಕೂಳ್ಳಲು, ವರುಣನು;-ಅಜ್ಜಾ, ಇಲ್ಲಿಂದ೪-೫ ಮೈಲುಗಳ ಮೇಲೆ ಕಾವೇರಿ ಹೊಳೆಗೆ ಕನ್ನಂಬಾಡಿಯ ಹತ್ತಿರ ಭದ್ರವಾದ ಕಟ್ಟು ಕಟ್ಟು ತಿರುವರು. ಆ ಕೆಲಸಕ್ಕೆ ಸಂಬಂಧಿಸಿದ ಉತ್ತರಕಡೆಯ (ನಾರ್ಥ ಬ್ರಾಂ)ನೋಟವೇ ಇದು ನಾವು ಹಾಗೂ ಇನ್ನು ಕೆಲದಿನಗಳಲ್ಲಿ ಅಲ್ಲಿಗೇ ಹೋಗಬೇಕಾಗಿದೆ, ನಡೆಯಿರಿ, ಎಂದನು. ಈ ಆಂದು ಸಾಯಂಕಾಲ ಅವರು ಅಲ್ಲಿಯ ಛತ್ರದಲ್ಲಿಯೇ ಭೋಜನಾದಿಗಳನ್ನು ಮಾಡಿಕೊಂಡು ಮಲಗಿದರು, ನಸುಕಿನಲ್ಲಿ ಎದ್ದು, ಹಿಂದು ಝಟಕಾಬಂಡಿಯನ್ನು ಮಾಡಿಕೊಂಡು, ಅಲ್ಲಿಗೆ ಸಮೀಪವಾಗಿರುವ ಮೇಲುಕೋಟೆ ಎಂಬಲ್ಲಿಗೆ ಹೋಗಿ ಅಲ್ಲಿಯ ದೇವಸ್ಥಾನಗಳನ್ನು ನೋಡಿಕೊಂಡು ಮಧ್ಯಾಹ್ನಕ್ಕೆ ಹಿರೋಡೆಗೆ