ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ [ಕರ್ನಾಟಕಕ್ಕೆ ಬರುವಷ್ಟರಲ್ಲಿ ಶ್ರೀರಂಗಪಟ್ಟಣದ ಕಡೆಗೆ ಹೋಗುವ ಶಟಲ್ (ಮಿಕ್ಕೆಡ)ಗಾಡಿಯು ಸ್ಟೇಶನ್ನಿನಲ್ಲಿ ಬಂದು ನಿಂತಿತ್ತು, ಕೂಡಲೆ ತಿಕೀಟುಗಳನ್ನು ಕೊಂಡುಕೊಂಡು ಅವರು ಆ ಗಾಡಿಯನ್ನು ಆರೋ ಹಿಸಿದರುಮುಂದೆ ಅರ್ಧಗಂಟೆಯೊಳಗೆ ಆ ಮಂದಗತಿಯ ರೈಲು ಪಟ್ಟಣದ ಸ್ಟೇಶನ್ನಿಗೆ ಬಂದಿತು. --- eybmvtkw ಶ್ರೀರಂಗಪಟ್ಟಣ. ಪಟ್ಟಣದ ಸ್ಟೇಶನ್ನಿನಲ್ಲಿ ಪ್ರತಿಯೊಂದು ಗಾಡಿಗೂ ಏರಿಳಿಯುವ ಪ್ಯಾಸೆಂಜರರ ಗದ್ದಲವು ವಿಶೇಷವಾಗಿರುತ್ತದೆ. ಆ ಮಾನದಿಂದ ಅಲ್ಲಿಯ ಸ್ಟೇಶನ್ನಿನ ಇಮಾರತು ಚಿಕ್ಕದೆಂದೇ ಹೇಳಬಹುದು, ದೇವ ಗಣಗಳು ಗಾಡಿಯಿಂದಿಳಿದ ಕೂಡಲೆ ವರುಣನು ಅವರನ್ನು ಊರೊ ಇಗ ಕರಕೊಂಡು ಹೋಗಹತ್ತಿದನು. ಅಷ್ಟರಲ್ಲಿ ಸಮೀಪದಲ್ಲಿಯೇ ತುಸ ಮುಂದಕ್ಕೆ ಕಾಣುವ ಭವ್ಯವಾದ ಮಂದಿರವನ್ನು ಕಂಡು ಬ್ರಹ್ಮನು:-ಇದೇನು? ಇಷ್ಟು ದೊಡ್ಡ ಈ ಮಂದಿರದಲ್ಲಿ ಯಾರು ವಾಸಿಸುತ್ತಿರುವರು ಎಂದು ಪ್ರಶ್ನೆ ಮಾಡಿದನು. ಕಡಲೆ ವರು ಣನು ಊರ ಕಡೆಗೆ ಹೋಗುವ ದಾರಿಯನ್ನು ಬಿಟ್ಟು ಕೊಟ್ಟು ಆ ಭವ್ಯವಾದ ಮಂದಿರದ ಕಡೆಗೆ ನಡೆದು:-ಅಜ್ಜಾ, ಇದು ಸುಪ್ರ ಸಿದ್ದ ಶ್ರೀರಂಗನಾಥಸ್ವಾಮಿಯ ಮಂದಿರವು, ಇಲ್ಲಿ ಶ್ರೀರಂಗನಾ ಥನು ಶೇಷಶಾಯಿಯಾಗಿದ್ದು, ಶ್ರೀಲಕ್ಷ್ಮಿ ಮಾತೆಯು ಆತನ ಪಾದ ದೆಡೆಯಲ್ಲಿ ಕುಳಿತು ಪಾದವಂದನೆಗಳನ್ನು ಮಾಡುತ್ತಿರುವಳು, ಎಂದು ಹೇಳುತ್ತಿರುವಷ್ಟರಲ್ಲಿ ಅವರೆಲ್ಲರೂ ಆ ಗುಡಿಯು ವಿಶಾಲವಾದ ಪ್ರಾಕಾರವನ್ನು ಸೇರಿದರು. ಉತ್ತರ ಕರ್ನಾಟಕಕ್ಕಿ೦ತ ದಕ್ಷಿಣ ಕರ್ನಾಟಕ, ಮೈಸೂರ, ಮದಾಸ ಸೀಮಗಳಲ್ಲಿಯ ಎಲ್ಲ ದೇವಸ್ಥಾನಗಳು ದೊಡ್ಡ ವೂ, ಉತ್ಪನ್ನಾದಿಗಳಿಂದ ಪುಷ್ಟ ವೂ ಆಗಿರುವವಲ್ಲದೆ, ಅವುಗಳಲ್ಲಿಯ ವ್ಯವಸ್ಥೆಯ ತಕ್ಕಮಟ್ಟಿಗೆ ಚೆನ್ನಾಗಿರುತ್ತದೆ. ಇನ್ನು ಮನುಷ್ಯ ಸ್ವಭಾವದ ವೈಚಿತ್ರದಂತೆ ಕೆಲಕೆಲವು ದೇವಸ್ಥಾನಗಳಲ್ಲಿಯ