ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ ೧೧೬ ಅಂದು ಮನೆಗೆ ಬರುತ್ತಿದ್ದ ರೋ ಇಲ್ಲವೋ ಯಾರಿಗೆ ಗೊತ್ತು? ಮರುದಿನ ಪಾತಕಾಲದಲ್ಲಿದ್ದು, ಅವರು ಅರಮನೆಯನ ನೋಡಹೋದರು, ಮೊದಲಿನ ದಿವಸ ಶ್ರೀಮನ್ನಾರಾಯಣನು ಯಾರ ವಶೀಲೆಯಿಂದಲೋ ಅರಮನೆಯ ಕಂಟ್ರೋಲರರಿಂದ ಒಳಗೆ ಹೋಗಿ ನೋಡುವ ಪ್ಲಾಸುಗಳನ್ನು ಸಂಪಾದಿಸಿದ್ದರಿಂದ ಇಂದು ಅವರಿಗೆ ಆ ರಾಜಭವನವನ್ನು ನೋಡಲಿಕ್ಕೆ ಯಾವ ತರದ ಅಂತಳವೂ ಆಗಲಿಲ್ಲ ಮೈಸೂರ ಪುರಾತನದ ಅರಮನೆಯು ಸರಾ ಸರಿ ೨೫-೩೦ ವರ್ಷಗಳ ಹಿಂದೆ ಯಾವ ಆಕಸ್ಮಿಕ ಕಾರಣದಿಂದಲೋ ಬೆಂಕಿ ಬಿದ್ದು, ಸಂಪೂರ್ಣವಾಗಿ ಸುಟ್ಟು ಹೋಯಿತು, ಅವಶೇಷ ವೇನೂ ಉಳಿಯಲಿಲ್ಲ. ಅಪವಾದಕ್ಕೆ ಅಂಬಾವಿಲಾಸ ತೊಟ್ಟ ಎಂಬ ಪ್ರಾಚೀನ ನೋಡತಕ್ಕ ಭಾಗವು ಉಳಿದಿರುತ್ತದೆ ದರ್ಬಾರ ಹಾಲ್ ಅಥವಾ ಸಭಾಮಂಟಪವು ಬಹು ರಮ್ಯವಾಗಿ ಕಟ್ಟಲ್ಪ ಟಿದ್ದು, ಅದರಲ್ಲಿ ಬೇರೆ ಬೇರೆ ದರ್ಜೆಯ ಜನರು ಕೊಡುವ ವ್ಯವ ಸ್ಥೆಯು ಬಹು ಚನ್ನಾಗಿ ಮಾಡಲ್ಪಟ್ಟಿರುತ್ತದೆ. ಮಹಾರಾಜರು ಕ್ರಡುವ ಸಿಂಹಾಸನವು ಒಳ್ಳೆ ಸ ಶೋಭಿತವಾಗಿರುತ್ತದೆ ಮೈಸೂರ ಅರಮನೆಯಂಥ ಭವ್ಯ ಹಾಗು ಸ೦ದರ ಕಟ್ಟಡವು ಇಡೀ ಕರ್ಣಾ ಟಕದಲ್ಲಿ ಅದೇಕ, ದಕ್ಷಿಣ ಹಿಂದುಸ್ತಾನದಲ್ಲಿ ಇಲ್ಲವೆಂದರೆ ಅತಿಶಯೋ ಕ್ರಿಯಾಗಲಾರದು, ಅಮೆರಿಕ, ಜರ್ಮನಿ, ಜಪಾನ ಮುಂತಾದ ದೇಶಗಳ ಪ್ರಸಿದ್ದ ಕಾರಾಗಿರರಿಂದ ಆ ಹೊಸ ಅರಮನಯು ಕಟ್ಟ ಲ್ಪಟ್ಟಿರುತ್ತದೆ. "ಸೋನೇರಿ ಮುಲಾವಿ ನ ಕೆಲಸಗಳಂತೆ ಬಹು ಉತ್ಕೃಷ್ಟವಾಗಿರುತ್ತವೆ ಅರಮನೆಯ ಸ್ವರ್ಣವರ್ಣದ ಭವ್ಯ ವಾದ ಶಿಖರವನ್ನೂ, ಅದನ್ನು ಸುತ್ತುವರಿದಿದ್ದ ನಾನಾ ವರ್ಣದ ವಿದ್ಯುದೀಪಗಳ ಗೋಲಕಾಕೃತಿಗಳನ್ನೂ ಕಣ್ಣಾರೆ ಕ೦ಡ ಜನರಿಗೆ ಆ ವೈಭವವನ್ನು ಎಷ್ಟು ಸಾರೆ ಹೇಳಿಕೊಂಡರೂ ಸಾಕಾಗುವದಿಲ್ಲ ನನ್ನ ದೇವತೆಗಳು ಆ ಅರಮನೆಯೊಳಗಿನ ಪ್ರತಿಯೊಂದು ಭಾಗವನ್ನು ಸೂಕ್ಷ್ಮ ದೃಷ್ಟಿಯಿಂದ ಅವಲೋಕಿಸಿದರು ತದನಂತರ ಕರುಹಟ್ಟಿ, ಅಶ್ವಶಾಲೆ, ಗಜಶಾಲೆ ಮುಂತಾದವುಗಳನ್ನು ನೋಡಹೋದರು. ಆ ಕರುಹಟ್ಟಿ (ಗೋಶಾಲೆ) ಯಲ್ಲಿಯ ನಾನಾ ದೇಶದ ನಾನಾ ವರ್ಣದ ವಿಚಿತ್ರ ಕಡು ಕೊಂಬುಗಳುಳ್ಳ ಅಕಕುಗಳನ್ನೂ ಕರಗಳನ್ನೂ ನೋಡಿದವರು ಧನ್ಯರೆಂತಲೇ ಹೇಳಲಾಗುವದು. ಪ್ರತಿಯೊಂದು