ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಕರ್ನಾಟಕಕ್ಕೆ ಚುಂಬಕನನ್ನು ಕೂರಿಸಿರುವರು. ಅದರಿಂದ ನಿನ್ನ ವಜ್ರವು(ಸಿಡ) ಆ ಊಹಚುಂಬಕದಿಂದ ಈಚೆಗೆ ಏನೂ ಅಪಾಯ ಮಾಡುವಂತಿಲ್ಲ. ಆದುದರಿಂದ ಆ೦ಥ ಲೋಹಚುಂಬಕದ ವಡಾಸದಿಂದ ತಯಾರಿಸಿದ ವಿಮಾನುಗಳುಳ್ಳವರೂ, ಲೋಹಚುಂಬಕ ಶಸ್ತ್ರಧಾರಿಗಳೂ ಆದ ಆ ಇಂಗ್ಲಿಷರು ಹಿಂದಾನೊಂದು ದಿನ ನಿನ್ನೆದುರಿಗೆ ಬಂದು ನಿಂತುಕೊಂ ಡರೆ ಅವರನ್ನು ನೀನೇನು ಮಾಡುವೆ? ಇಂದಾ, ನೀನು ಇ೦ಗ್ರ ಜರ ಯಂತ್ರ ಸಾಮರ್ಥ್ಯವನ್ನು ನೋಡಿರುವದಿಲ್ಲ. ಕೂಪಮಂಡೂ ಕದಂತೆ ನಿನ್ನ ಅಮರಾವತಿಯೇ ಸರ್ವಶ್ರೇಷ್ಠವೂ, ನಿನ್ನ ಪ್ರಜೆಗಳೇ ಸರ್ವವಿಶಾರದರೂ ಎಂದು ಭಾವಿಸಿಕೊಂಡು ಜಂಭ ಬಡಿಯುತ್ತಿ ರುವೆ; ಆದರೆ ಹಿಂದುವೇಳೆ ನೀನು ಕರ್ಣಾಟಕದೊಳಗಿನ ಬೆಂಗಳೂರ, ವಹಿಷ೧ರ ಪಟ್ಟಣಗಳನ್ನು ಕಣ್ಣಾರೆ ಕಂಡು ಬಂದರೆ, ಈ ನಿನ್ನ ತುಚ್ಛ ಅಮರಾವತಿಗ ತಿರುಗಿ ಬರಬೇಕಲಬ ವಾಸನೆಯು ಕೂಡ ನಿನ್ನಲ್ಲುಳಿ ಯಲಾರದು, ಸಾಮಾನ್ಯ ಸುಂದರಿಯಾದ ಶಚೀದೇವಿಯನ್ನ ಪರ ವಸುಂದರಿಯೆಂದು ನೀನು ಭಾವಿಸಿಕೊಂಡಿರುವೆ; ಆದರೆ ಬೆಂಗ ಊರಲ್ಲಿಯ ನಾನಾದೇಶದ ಸೊಬಗಿನ ಆ ನವಯುವತಿಯರನು ಕಂಡರೆ, ನೀನು ನಿನ್ನ ಈ ಶಚೀದೇವಿಯ ಕಡೆಗೆ ಹಣಿಕಿ ಕೂಡ ನೋಡುವಿಯೋ ಇಲ್ಲವೋ ಎಂಬುದು ಸಂಶಯಾಸ್ಪದದ ಮಾತೇ ಆಗ ಬಹುದು ಇಲ್ಲಿಯ ಸಾಧಾರಣ ವನಕ್ಕೆ ನಂದನವನವೆಂಬ ಶ್ರೇಷ್ಠ ಹೆಸರನ್ನಿಟ್ಟು ಕೊಂಡು, ಇದರಲ್ಲಿ ನೀನು ಎಷ್ಟೋ ರಾತ್ರಿಯ ವರೆಗೆ ವಿಹರಿಸುತ್ತಿರುತ್ತಿ ಆದರೆ ಬೆಂಗಳೂರಿಗೆ ಹೋಗಿ ಆ ಲಾಲಬಾಗಿ ನಲ್ಲಿ ಕ್ಷಣ ಕಾಲ ಅಡ್ಡಾಡಿದರೆ, ಅಲ್ಲಿಂದ ತಿರುಗಿ ಬರುವ ಇಚ್ಛೆಯ ಕೂಡ ನಿನಗುಳಿಯಲಾರದು ಈ ಸ್ವರ್ಗರಾಜ್ಯದೊಳಗಿನ "ಆಕಳ ಹಾಲಿಗೇ 'ಸುಧೆ' ಎಂದಂದ.ಕೊಂಡು ಗರ್ವಿ ಸುತ್ತಿ ; ಆದರೆ ಇಂಗ್ಲಿ ಷರ ರಾಜ್ಯಕ್ಕೆ ಹೋಗಿ ಸರಾಯಿ, ಚ್ಯಾಂಪಿಯನ್, ಬ್ರಾಂಡಿ, ವೈ ಗಳ ರುಚಿಯನ್ನು ಹಿಮ್ಮೆಯಾದರೂ ಸವಿದರೆ, ಬಳಿಕ ಈ ಸುಧೆ ಯನ್ನು ನೀನು ನಿನ್ನ ಹತ್ತಿರ ಕೂಡ ಬರಗೊಡಲಾರೆ. ಇಂಗ್ಲಿಷ ರಾಜ್ಯದಲ್ಲಿ ಎಣ್ಣೆ- ಬತ್ತಿಗಳಿಲ್ಲದ ಜೊತಿಗಳು ಬೆಳಗುವವು, ಲೋಹ ತಿ೦ತಿಗಳಿಂದ ಸುದ್ದಿಗಳು ತಿಳಿಯುವವು. ನಳಗಳಿಂದ ತೊಟ-ಪಟ್ಟಿ ಗಳಾಗುವವು ನಾಯಿನ್ನು ಎಲ್ಲ ರೋಗಗಳಿಗೂ ರಾಮಬಾಣ ಔಷಧವು, ಇಂಗ್ಲಿಷರಿಂದ ಶೋಧಿಸಲ್ಪಟ್ಟ ಆ ಕ್ವಿನಾಯಿ-ನ್ನಿನ ಸಹಾ