ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೧ 16 ಸೇವತೆಗಳ ಆಗಮನ? ಮೈಸೂರ ಸಂಸ್ಥಾನದ ಉದ್ದೇಶವಾಗಿರುತ್ತದೆ ಇಷ್ಟು ದೊಡ್ಡ ಹಿಡನ್ನು ಮೈಸೂರ ಸರಕಾರದವರು ಕಟ್ಟಿ ಕಾವೇರಿಹಳಯನ್ನು ತರುಬಿದರೆ ಬೇಸಿಗೆಯಲ್ಲಿ ತಮ್ಮ ಪೈರುಗಳಿಗೂ ಇತರ ಬಳಿಕೆಗೂ ನೀರು ಸಾಲದೆಂದು ಮದ್ರಾಸ ಸೀಮೆಯವರು ನಮ್ಮ ಬಾದಶಹರ ವರೆಗೆ ತಕರಾರು ಹಿಯ್ದ ರು; ಆದರೆ ಅವರ ಆ ತಕರಾರು ಕಡೆಗೂ ನಡೆಯಲಿಲ್ಲ. ಅಲಿ ಅವು, ದೊಡ ಹಿಡು ಕಟ್ಟಿಹತಿ ದಂದಿನಿಂದ ಕಾವೇರಿಯು ನೀರು ಮುಂದಕ್ಕೆ ಹೋಗದಿರುವದು ಸ್ವಾಭಾವಿಕವಾಗಿದೆ; ಆದರೆ ಹಿಡಿಗೆ ಹನ್ನೆರಡು ಖಿಂಡಿಗಳನ್ನು ಕಲ್ಪಿಸಿದ್ದು, ಬೇಕಾದಾಗ ಬೇಕಾ ದಷ್ಟು ಖಿಂಡಿಗಳನ್ನು ತೆರೆದು ಸಾಕಷ್ಟು ನೀರನ್ನು ಮುಂದಕ್ಕೆ ಹರಿ . ಬಿಡಲು ಮಾಡಿದ ಯೋಜನೆಯು ಹಿಳ್ಳೆಕೂಗಳತಕ್ಕದ್ದಾಗಿರುತ್ತದೆ. ಬ್ರಹ್ಮಾದಿಗಳು ಆ ಕಟ್ಟೆಯ ಕಟ್ಟಡವನ್ನು ನೋಡಿ ಚಕಿತ ರಾದರು, ಕಾಕಂದರೆ, ಅಂಥ ದೊಡ್ಡ ಹಾಗು ವ್ಯವಸ್ಥಿತ ಕಟ್ಟಡ ವನ್ನು ಅವರು ಬರೇ ಕರ್ಣಾಟಕದಲ್ಲಿಯೇ ಏಕೆ, ಇಡಿ ಹಿಂದುಸ್ತಾನ ದಲ್ಲಿ ಕೂಡ ನೋಡಿರಲಿಲ್ಲ. ಇಂಥ ಜಂಗೀ ಕಟ್ಟಡವು ಈವರೆಗೆ ಜಗತ್ತಿನೊಳಗೆ ಇದೇ ಮೊದಲನೆಯದೆಂದು ಸರ್ವಗಾಮಿಯಾದ ವರುಣನು ಅವರಿಗೆ ತಿಳಿಸಿದನು. ಕೃಷ್ಣರಾಜಸಾಗರ ಕಟ್ಟೆಯ ಕಾಮಗಿರಿಯಲ್ಲಿ ಇನ್ನೊಂದು ಮಹತ್ವವೇನಂದರೆ, ಅದು ಪ್ರಾರಂಭ ದಿಂದಲೂ ನಮ್ಮ ದೇಶೀಯ, ವಿಶೇಷವಾಗಿ ಕರ್ಣಾಟಕಸ್ಥ ಎಂಜಿನಿ ಯರರಿಂದಲೇ * ಕಟ್ಟಲ್ಪಡುತ್ತಿರುವದು, ದೊಡ್ಡ ದೊಡ್ಡ ಬಂಡೆ ಗಳನ್ನು ಆ ಹಿಟ್ಟಿನ ಮೇಲೆ ಚೆಲ್ಲುವರು ಅವುಗಳ ಮೇಲೆ ಯಂತ್ರ ಸಹಾಯದಿಂದ ಮಾಡಿದ ಗಚ್ಚನ್ನು ಹಾಕುವರು; ಹಾಗು ಅವು ಗಳನ್ನು ವಿದ್ಯುಲ್ಲತೆಯಿಂದ ನಡೆಯುವ ಯಂತ್ರಗಳಿಂದ ಧುಮಸ ಮಾಡಿ ಸರಿಮಾಡುವರು. ಆ ಕೃಷ್ಣರಾಜಸಾಗರದ ಬಳಿಯಲ್ಲಿಯೇ ಕಾವೇರಿ ರಿಝರ್ವಾ ಯರ ಎಂಬಲ್ಲಿ ೩-೪ ಸಾವಿರ ಹಾರ್ವಪಾವರದ ಯಂತ್ರಗಳನ್ನು ಹಚ್ಚಿ ವಿದ್ಯುಲ್ಲತೆಯನ್ನುಂಟುಮಾಡಿ ಅದನ್ನು ಮೈಸೂರಿಗೂ, ಕನ್ನಂ ಬಾಡಿಯ ಕಟ್ಟಡಗಳ ಕಾಮಗಾರಿಗೂ ಪೂರೈಸುತ್ತಾರೆ. ದೇವಗಣಗಳು ಹಿಟ್ಟಿನ ಮೇಲೆ ಹತ್ತಿ ನೋಡುತ್ತಿರುವಾಗ ಸ್ಟೀವು ಲಾಂಚ' ಎಂಬ ಹೆಸರಿನ ಉಗೆಯಂತ್ರಗಳಿಂದ ನಡೆಯುವ