ಈ ಪುಟವನ್ನು ಪರಿಶೀಲಿಸಲಾಗಿಲ್ಲ.
[ಕರ್ನಾಟಕಕ್ಕೆ ದಿರಲು, ಆ ಮಾನವು ಸರ್ವವಿದ್ಯಾವಿಶಾರದಳಾದ ಸರಸ್ವತಿಯ ಪಾಲಿಗೆ ಹೋಯಿತು. ಶ್ರೀಯುತ ಗಜಾನನು ಸಭೆಗೆ ಬಂದ ದೇವತೆಗಳನ್ನೂ, ಸಭೆಗೆ ಕಾರಣರಾದ ಬ್ರಹ್ಮ, ನಾರಾಯಣ, ಇಂದ್ರ, ವರುಣಾದಿ ಕಳನ ಆಭಿನಂದಿಸಿದನು, ನಂತರ ಅವನಿಂದಲೇ ಆವರಿಗೆ ಕೊಡ ಲ್ಪಡುವ ಮಾನಪತ್ರವು ಓದಲ್ಪಟ್ಟಿತು, ಆ ಮಾನಪತ್ರದಲ್ಲಿ ಬರೆ ದಿದ್ದ ಮುಖ್ಯ ಸಂಗತಿಗಳಾವವೆಂದರೆ:- ( ನಮ್ಮ ಈ ಇಂದಾದಿ ದೇವತೆಗಳು ಕರ್ಣಾಟಕದಲ್ಲಿ ಬಹು ಕಷ್ಟಪಟ್ಟು ಸಂಚರಿಸಿ, ಅಲ್ಲಿಯ ಅನೇಕ ಹೊಸ ಶೋಧ-ಸುಧಾರಣೆಗಳನ್ನು ಕಂಡುಕೊಂಡು ಬಂದಿ ರುವದರಿಂದ, ನಾವು ಅವರ ಸಾಹಸಕ್ಕೂ ಗುಣಗ್ರಾಹತಗೂ ಈ ಪ್ರಚಂಡ ಸಭೆಯ ಮುಖಾಂತರ ಅಭಿನಂದಿಸುವೆವಲ್ಲದೆ, ಇವರು ಅಲ್ಲಿ ನೋಡಿ ಬಂದ ಸುಧಾರಣೆಗಳನ್ನು ಬೇಗನೆ ಇಲ್ಲಿ ಅಮಲಿನಲ್ಲಿ ತರಬೇಕೆಂದು ಇಚ್ಚಿಸುತ್ತೆವೆ ” ಈ ಸಂಗತಿಯು ಸೆನೇರಿ ಅಕ್ಷರ ಗಳಿಂದ ಒಳ್ಳೆ ಆರ್ಟ ಪೇಪರಿನಲ್ಲಿ ಛಾಪಿಸಲ್ಪಟ್ಟಿದ್ದು, ಅದರ ಹಿಂ ದೊಂದು ಪ್ರತಿಯನ್ನು ಬೆಳ್ಳಿ-ಬಂಗಾರಗಳ ಕಟ್ಟುಗಳಲ್ಲಿಟ್ಟು ಶ್ರೀ ಸರಸ್ವತಿಯು ಬ್ರಹ್ಮ -ನಾರಾಯಣ- ಇಂದ್ರ-ವರುಣರಿಗೆ ಅರ್ಪಿಸಿದಳು!
- ಸಭಾಧ್ಯಕ್ಷರ ಹಾಗು ಸಭಿಕರ ಆಭಾರ ಮನ್ನಿಸುವದಕ್ಕಾಗಿ ಆ ನಾಲ್ವರ ವತಿಯಿಂದಲೂ ಶ್ರೀ ಮನ್ನಾರಾಯಣನು ಕೆಲ ನಿಮಿಷ ಗಳ ವರೆಗೆ ಮಾತಾಡಿ, ತಾವು ನೋಡಿ ಬಂದ ಕರ್ಣಾಟಕದೊಳಗಿನ ಎಲ್ಲ ಹೂಸ ಸುಧಾರಣೆಗಳನ್ನೂ ತಾರಾಯಂತ್ರ, ಟಪಾಲಖಾತೆ, ರೈಲುಖಾತ, ಕರೆನೋಟ, ದವಾಖಾನೆ, ಇತರ ಎಲ್ಲ ಕಾರಖಾನೆ ಮುಂತಾದವುಗಳನ್ನು -ಈ ಲೋಕದೊಳಗೆ ಬೇಗನೆ ಅಮಲಿನಲ್ಲಿ ತರ ಲಾಗುವದು, ಈ ವ್ಯವಸ್ಥೆಯಿಂದ ನಮ್ಮೆಲ್ಲರಿಗೂ ಅಖಂಡ ಸುಖ ವಾಗಲಿ! ಎಂದನು.
- ಸಂಪೂರ್ಣ, }
Exaಳು