ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ [ಕರ್ನಾಟಕಕ್ಕೆ ಹೋಗಿ ನಾನು ಕರೆಯುವೆನೆಂದು ಹೇಳಿ ನಾರಾಯಣನನ್ನು ಕರೆ ತನ್ನಿರಿ, ಆಧುನಿಕ ದೈತ್ಯರು ಅವನ ಪರಿವಾರದವರನ್ನು ಎಷ್ಟು •ಷ್ಯ ಪಡಿಸುತ್ತಿರುವರೆಂಬದರ ಸುದ್ದಿ ಕೂಡ ಆ “ದುಷ್ಟ ಸಂಹಾರಕ-ಶಿಷ್ಯ ಪರಿಪಾಲಕ'ನಾದ ನಾರಾಯಣನಿಗೆ ತಿಳಿದಿಲ್ಲೆಂಬಂತೆ ಕಾಣುತ್ತದೆ. ಹೀಗೆಂದ ಸಿತಾಮಹನ ಆಜ್ಞಾನುಸಾರವಾಗಿ ಇಂದ್ರ-ವರು ಣರು ಆಗಲೇ ರಥಾರೋಪಣವೆಂದು ವೈಕುಂಠಪುರಿಗಭಿಮುಖ ವಾಗಿ ಸಾಗಿದರು. ವೈಕುಂಠ. ಭಜನಾನಂತರ ಲಕ್ಷ್ಮಿಯು ತನ್ನ ಕೋಣೆಯಲ್ಲಿ ಕುಳಿ ತು ಪಿಯಪತಿಯ ಸಲುವಾಗಿ ಕೈ ರುಮಾಲ (ಹ್ಯಾಂಡಕರಚೀಪು ನ್ನು ಹಣೆಯುತ್ತಿದ್ದಳು. ಅವಳು ಅತ್ಯಂತ ನಯವಾದ ಮಧು ರೆಯ ಸೀರೆಯನ್ನುಟ್ಟಿದ್ದಳು, ಕೈಯಲ್ಲಿ ರಾಣೀಛಾಪಿನ ಬಿಲ್ಲಾ ವರದ ಬಳೆಗಳಿದ್ದವು.ಕಿವಿಗಳಲ್ಲಿ ಕೋರ್ಟ-ತಾಲೂಕಗಳೆಂಬ ಆಧು ನಿಕ ಯುಗದ ಸೂಕ್ಷಆಭರಣಗಳು ವಿನಗುತ್ತಿ ದ್ದವು, ಅವಳ ಸ್ವಾಭಾವಿಕ ರಕ್ತವರ್ಣದ ಬಿಂಬೋಷ್ಟಗಳು, ತ್ರಯೋದಶ ಗುಣ ತಾಂಬೂಲಚರ್ವಣದಿಂದ ಮತ್ತಿಷ್ಟು ಆರಕವಾಗಿ ಪ್ರಕಾಶಿಸುತ್ತಿ “ ವು. ಶ್ರೀಮನ್ನಾರಾಯಣನು ಅವಳ ಬಳಿಯಲ್ಲಿಯೇ ತೆಕ್ಕೆಗೆ ಆತು ಕುಳಿತು ಯಾವದೋ ಒಂದು ವೃತ್ತಪತ್ರವನ್ನು ಓದುತಲಿದ್ದ ನು; ಹಾಗು ನಡುನಡುವೆ ಪ್ರಿಯವಲ್ಲಭೆಯ ಲಾವಣ್ಯಮಯ ಮುಖಮಂ ಡಲವನ್ನು ಇಣಿಕಿ ನೋಡಿ, ಮನದಲ್ಲಿ ಏನೇನೂ ಭಾವಿಸುತಲಿ ದ್ವ ನು. ಇಂಥೀ ಸಮಯದಲ್ಲಿ ದ್ವಾರಪಾಲಕನಾದ ವಿಜಯನು ಒಂದು:-ಸ್ವಾಮೀ ನಾರಾಯಣಾ, ದೇವರಾಜನಾದ ಇಂದ್ರನತಿ ವರುಣನೊಡನೆ ನಿನ್ನ ಭೇಟಿಗಾಗಿ ಹೊರಗೆ ಕಾದಿದ್ದಾನೆ, ಎಂದನು. ಈ ವಾರ್ತೆಯನ್ನು ಕೇಳಿ, ನಾರಾಯಣನು ವಿಷಣ್ಣ ವದನ ದಿಂದ: -- ಪ್ರಿಯೇ, ಮಹಾಲಕ್ಷ್ಮಿ, ಸ್ವರ್ಗಲೋಕಕ್ಕೆ ಪುನಃ ದೈತ್ಯರ ಉಪಟಳವು ಪ್ರಾರಂಭವಾದಂತೆ ತೋರುತ್ತದೆ. ನೀನು ಇಲ್ಲಿಯೇ ಇರು. ನಾನು ಈಗ ಹೊರಗೆ ಹೋಗಿ ಸುದ್ದಿ ಯನೆಂಬ ದನ್ನು ವಿಚಾರಿಸಿಕೊಂಡು ಬರುವೆನೆಂದು ಹೆಂಡತಿಗೆ ಹೇಳಿ, ಹೊರಗೆ