ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ದೇವತೆಗಳ ಆಗಮನ? ಬಂದು, ಇಂದ್ರ-ವರುಣರಿಂದ ಎಲ್ಲ ಸಂಗತಿಯನ್ನು ತಿಳಿದು ಪುನಃ ಅಂತಃಪುರಕ್ಕೆ ಹೋದನು; ಹಾಗು ಲಕ್ಷ್ಮಿಯನ್ನು ಕುರಿತು:- ಪ್ರಿಯಸಖೀ, ಕರ್ಣಾಟಕಕ್ಕೆ ಹೋಗಿ ಬರಲಿಕ್ಕೆ ನನಗೆ ಅನುಮತಿ ಯನ್ನು ಕೊಡು, ಎಂದು ಕೇಳಿಕೊಂಡನು ಅದಕ್ಕೆ ಲಕ್ಷ್ಮಿಯು;-ಪ್ರಿಯರೇ, ಈಗಲೀ ಆಸಮಯದಲ್ಲಿ ಕರ್ಣಾಟಕಕ್ಕೆ ಏಕೆ? ಕಲ್ಕಿರೂಪ ತಾಳಲಿಕ್ಕೆ ತಮಗಿನ್ನೂ ಅವ ಕಾಶವಿರುವದಷ್ಟೆ? ನಾರಾಯಣ:-ಒಮ್ಮ ಬೆಂಗಳರ-ವಹಿಷರ ನೋಡಬೇ ಕೆಂದೂ, ಉಗಿಬಂಡಿಯನ್ನು ಹತ್ತಬೇಕೆಂದೂ ಇಚ್ಛೆಯುಂಟಾದ್ದ ರಿಂದ ಹೋಗಿ ಬರುವನು. “ನೀವು ಹಿತಾಳಿಯ ಕಿವಿಯವರೆಂಬದೇಸೂ ಸುಳ್ಳಲ್ಲ. ಇಷ್ಟಾನಿಷ್ಟ ವಿಚಾರ ಮಾಡದ ಮಂದಿಯ ಮಾತಿಗೆ ಹಿನ್ನಲೆ ತಲೆ ಹಾಕುತ್ತಿರುತ್ತೀರಿ. ನಿಮ್ಮ ಸಂಸಾರದ, ನಿಮ್ಮ ಆದಾಯ-ವ್ಯಯ ಗಳ ಪರಿವೆಯನ್ನು ನೀವು ಕೊಂಚವೂ ಮಾಡುವದಿಲ್ಲ ಛೇ, ನಿಮ್ಮ ಕರೇ ಮುಸುಡಿಗೆ........! ಆ ಕರ್ಣಾ೬ ಕದ ಹೆಸರು ತೆಗೆಯಲಿಕ್ಕೂ ಅಲ್ಲಿಗೆ ಹೋಗಲಿಕ್ಕೂ ನಿಮಗ ನಾಚಿಕ-ಅಂಜಿಕೆಗಳು ಬರುವದಿಲ್ಲವೆ? ತಿಳಿದು ನೋಡಿರಿ, ಕೃತ-ಪ್ರೇತ-ದ್ಯಾಪರ ಯುಗಗಳಲ್ಲಿ ಅಲ್ಲಿಗೆ ಹೂದಾಗ ನಿಮಗೂ, ನನಗೂ ಎಷ್ಟು ಅಸಹ್ಯ ಕಷ್ಟವೇದನಗಳಾದ ಎಂಬದನ್ನು ! ಆ ಮರ್ತ್ಯಭೂಮಿಯೊಳಗಿನ ನಿಮ್ಮ ಆ ಪರಮಭಕಭ್ರಗುಋಷಿಯು ತನ್ನ ಪಾದದಿಂದ ಪೂಜೆ ಮಾಡಿ ಕಳಿಸಿದ್ದು ಸಾಕಾ ಗಲಿಲ್ಲವೆ? ಎಂದಂದು, ನಾರಾಯಣಿಯು ದೋತರ-ಪಂಚೆಗಳನ್ನು ಬಗಲಲ್ಲಿ ಹಿಡಕೊಂಡು ನಡೆದಿದ್ದ ನಾರಾಯಣನನ್ನು ತರುಬಿ, ಪುನಃ --ಸ್ವಲ್ಪ ತಡೆಯಿರಿ, ಸುಟ್ಟಿತು, ಆ ನಿಮ್ಮ ಹಾಳು ಇಚ್ಚೆಯು! ಹಾಗೂ ತುಸ ದಿನಗಳಲ್ಲಿಯೇ ನೀವು ಕಲ್ಕಿ ಅವತಾರವನ್ನು ತಾಳಲೇ ಬೇಕಾಗಿರುತ್ತದೆ. ಆಗ ಅಲ್ಲಿಗೆ ಹೋಗಿ, ಎಷ್ಟು ಸಾರೆ ಬೆಂಗಳೂರಮಹಿಷರುಗಳನ್ನು ನೋಡುವಿರೋ, ಎಷ್ಟು ಸಾರೆ ಉಗಬಂಡಿ ಯಲ್ಲಿ ಕೂರುವಿರೋ ಕೂರಿರಂತೆ' ಎಂದಳು. (ಅದು ಅನಂತರದ ಕಾರ್ಯಕ್ರಮವ, ಸದ್ಯಕ್ಕೆ ಮೂರೇ ದಿನಗಳಲ್ಲಿ ಹೋಗಿ ಬರುವೆನು” ಎಂದು ಹೇಳಿ, ೨ ಹರಿಯು ಹೊರ ಡಲುದ್ಯುಕ್ತನಾಗಲು,