ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ [ಕರ್ನಾಟಕಕ್ಕೆ ಲಕ್ಷ್ಮಿಯು ಅವನ ಉತ್ತರೀಯವನ್ನು ಹಿಡಿದು ನಿಲ್ಲಿಸಿ:- ನಾಥ, ಹೀಗೇಕೆ ಈ ದಾಸಿಯನ್ನು ತಿರಸ್ಕರಿಸಿ ನಡೆದಿರುವಿರಿ? ನೀವು ಕರ್ಣಾಟಕಕ್ಕೆ ಒಮ್ಮೆ ಹೋದಿರೆಂದರೆ, ಮರು ದಿನಗ ಳಿಗೇಕ, ಮೂರುಸಾವಿರ ವರ್ಷಗಳಾದರೂ ತಿರುಗಿ ಬರಲಾರಿರಿ; ಯಾಕಂದರೆ, ಆ ಬೆಂಗಳೂರಲ್ಲಿಯ ಲಾವಣ್ಯವತಿ ಲಲನೆಯರನ್ನು ನೋಡಿದಿರೆಂದರೆ, ನಿಮಗೆ ನನ್ನ ನೆನಪಾದರೆ, ತಾನೆ ನೀವು ಇಲ್ಲಿಗೆ ತಿರುಗಿ ಬರುವದು? ಅವರೊಡನೆ ಬೆರೆತು ಮದ್ಯ-ಮಾಂಸ, ರೋಟಬಿಸ್ಕೂಟುಗಳನ್ನು ಭಕ್ಷಿಸಲಿಕ್ಕೂ, ಜಾತಿ-ಕು೬ಭ್ರಷ್ಟರಾಗಲಿಕ್ಕೂ ನಿಮ್ಮ ಗಂಡಸರಜಾತಿಯು ಹಿಂದುಮುಂದು ನೋಡಲಾರದು, ಅಷ್ಟೇ ಅಲ್ಲ; ಅಲ್ಲಿಗೆ ಹೋಗಿ ನೀವು ಪತಿತೋದ್ದಾರಕಪಂಥದಲ್ಲಿ ಸೇರಿ, ಅಗಣ ಹೀನಜಾತಿಯ ಹಾಗು ವಿಧವಾ ಸ್ತ್ರೀಯರನ್ನು ಕೂಡ ವರಿ ಸುವಿರಿ; ಮತ್ತು ಕೆಲ ಜನ ವಿದೂಷಿಯರೊಡನೆ ಬೆರೆತು, ನಾಟಕಸಿನೇಮಾಗಳಲ್ಲಿ ವೇಷಗಳನ್ನು ಕಟ್ಟಿ ಕೊಂಡು ಮೆರೆಯುವಿರಿ, ಆದ್ದ ರಿಂದ ಭಗವಾನ್, ಇಂಥ ಅನರ್ಥಕೊಳಪಡಿಸುವದಕ್ಕಾಗಿ ಯಾವ ಪತಿಯು ತನ್ನ ಪತಿಯನ್ನು ಹೋಗಗೊಟ್ಟಾನು? ಎಂದು ನುಡಿದಳು. ಆಗ ನಾರಾಯಣನು ಮನದಲ್ಲಿ ಆಲೋಚಿಸದನೇನಂದರೆ:- C«ನಾನು ಇವಳೊಬ್ಬಳ ಪ್ರೇಮಪಾಶದಲ್ಲಿ ಸಿಕ್ಕು, ಕೃತನಿಶ್ಚಯದಿಂದ ಪರಾಜುಖನಾದರೆ ನನಗೆ ಇಂಥ ಹದಿನಾರು ಸಾವಿರ ಹೆಂಗಸರಿರು ವರು. ಅವರೆಲ್ಲರ ಇಷ್ಟಾನುಸಾರ ನಡೆಯಲಿಕ್ಕೆ ನಾನು ಟೊಂಕ ಕಟ್ಟಿದರೆ, ನನ್ನ ಲೋಕೋದ್ಧಾರದ ಮುಖ್ಯ ಕಾರ್ಯವು ನಿಂತೇ ಹದೀತ್ತು ಆದ್ದರಿಂದ ಈಗ ನಾನು ಇವಳ ಪ್ರಾರ್ಥನೆಗೆ ಲಕ್ಷ ಗೂಂದೆ ನನ್ನ ಕೆಲಸಕ್ಕೆ ಹತ್ತು ವೆನು ” ಕೂಡಲೆ ಅವನು ಲಕ್ಷ್ಮಿಯು ಕಸುವಿನಿಂದ ಹಿಡಿದ ತನ್ನ ಆ ಉತ್ತರೀಯವನ್ನು ಅವಳ ಕೈಯ ಲ್ಲಿಯೇ ಬಿಟ್ಟು, ಹೊರಗೆ ಬಂದು ತನ್ನ ಸೇವರ್ಕದ ಗರುಡ-ಶೇಷ ಹಾಗು ಜಯ-ವಿಜಯರಿಗೆ ಮನೆಯ ಕಡೆಗೆ ಎಚ್ಚನಿಕೆಯಿಂದ ನೋಡ ಹೇಳಿ, ತನು ಹರಟು ನಡೆಯಲು, ನಾರಾಯಣಿಯು ಬಾಗಿಲ ವರಗೆ ಬಂದು ಗದ್ದ ದಕಂಠದಿಂದ:-(ನಾಥ! ಶೀಘ್ರವಾಗಿ ತಿರುಗಿ ಬನ್ನಿರಿ, ಬಹು ಜಾಗರೂಕರಾಗಿರಿ. ಆ ಹೊಸಪಟ್ಟಣಗಳ ಮಿಠಾ ಯಿಯ ಅಂಗಡಿಗಳಲ್ಲಿ ಅಖಾದ ಖಾದ್ಯ, ಆಪೇರು ಪೇಯಗಳನ್ನು ಭಕ್ಷಿಸಬೇಡಿರಿ, ಅದರಿಂದ ಶೀಲಭ್ರಷ್ಟತೆಗೆ ಕಾರಣವಾಗುವದಲ್ಲದೆ,