ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ.] ೧೯ ನೃಸಿಂಹ ವಾಡಿ. ಬಳಿಕ ನಾರಾಯಣನು ಮರಳಿ ಬ್ರಹ್ಮಲೋಕಕ್ಕೆ ಬಂದು ಇಂದ್ರ, ವರುಣ, ಬ್ರಹ್ಮ ದೇವರೊಡನೆ ಕರ್ಣಾಟಕಕ್ಕೆ ಹೊರಡುವ ಸಿದ್ಧತೆ ಮಾಡಿದನು; ಆದರೆ ಮೊದಲು ಎಲ್ಲಿಗೆ ಹೋದರೆ ತವಲ್ಲ ರಿಗೆ ಅನುಕೂಲವಾಗಬಹುದೆಂಬದನ್ನು ಯೋಚಿಸಿ, ಬ್ರಹ್ಮ-ವಿಷ್ಣು - ಮಹೇಶ್ವರರ(ತ್ರಿಮೂರ್ತಿಗಳ) ಅ೦ಶಸಂಭತವಾದ ದತ್ತಾತ್ರಯರ ಅವತಾರಗಳಲ್ಲಿ ಶ್ರೀ ನರಸಿಂಹ ಸರಸ್ವತಿ ಸ್ವಾಮಿಗಳವರ ಕರ್ಣಾಟಕ ದೊಳಗಿನ ಅವತಾರ ಸ್ಥಾನವಾದ ನೃಸಿಂಹನಾಡಿಗೆ ಮೊದಲು ಹೋಗಬೇಕೆಂದು ನಿರ್ಧರಿಸಿಕೊಂಡರು; ಹಾಗು ಆ ಪ್ರಕಾರ ಆ ದೇವತೆಗಳು ದೇವಲೋಕದಿಂದ ಮರ್ತ್ಯಲೋಕ-ಕರ್ನಾಟಕ-ದೋಳ ಗಿನ ನೃಸಿಂಹನಾಡಿಗೆ ಎಲ್ಲಕ್ಕೂ ಮೊದಲು ಬಂದರು. ದೇವತೆಗಳು ಭೂಲೋಕಕ್ಕೆ ಅವತರಿಸುವಾಗ ಅಷ್ಟಭುಜ, ಚತುರ್ಮುಖ, ಸಹಸನಯನ ಮುಂತಾದ ವಿಶಿಷ, ಅ೦ಗಪ್ರತ್ಯಂಗ ಗಳಿಂದ ಕೂಡಿದ ಶರೀರಗಳನ್ನು ಧರಿಸಿರಲಿಲ್ಲ ಅವರು ದೊಡ್ಡ ವರ ವಾಣಿಯಂತೆ ಹಾಗೆ ದೇಶವೋ, ಹಾಗೆ ಕೋಶವೋ ಹಾಗೆ ಪರಿ ಸ್ಥಿತಿಗನುರೂಪವಾದ ಮಾನವೀ ರೂಪವನ್ನು ಧಾರಣಮಾಡಿಕೊಂಡು ಬಂದರು. ಪಿತಾಮಹನು ಮುಪ್ಪಿನ ಮ ದು ಕನಾದ ಕರ್ಮಠ ಹಾರುವನಾದನು. ನಾರಾಯಣನು ಚಂಗಿಬಿಂಗೀ ವೇಷದ ಬ್ರಾಹ್ಮಣ ನಾದನು. ಇಂದ್ರ-ವರುಣರಾದರೂ ಕಲವಂಶದಲ್ಲಿ ಬ್ರಹ್ಮನನ್ನೂ, ಕಲವಂಶದಲ್ಲಿ ನಾರಾಯಣನನೂ ಅನುಕರಣೆ ಮಾಡಿದಂಥ ಬ್ರಾಹ್ಮಣ ವೇಷಗಳನ್ನು ಧರಿಸಿದರು. ನಮ್ಮ ನಾರಾಯಣಾದಿ ದೇವತೆಗಳು ಭೂಲೋಕದಲ್ಲಿ ಕರ್ನಾ ಟಕದೊಳಗೆ ಎಲ್ಲಕ್ಕೂ ಮೊದಲು ಬಂದ ನರಸಿಂಹನಾಡಿ ಕ್ಷೇತ್ರವು ಬಹು ಮನೋಹರವಾದ ಪವಿತ್ರ ಸ್ಥಳವಿರುತ್ತದೆ. ನೃಸಿಂಹವಾ ಡಿಯ ಬಳಿಯಲ್ಲಿ ಕೃಷ್ಣಾ-ಪಂಚಗಂಗಾ ನದಿಗಳ ಸಂಗಮಸ್ಥಾನವು ಬಹು ಪುಣ್ಯಕರವೂ ಪ್ರೇಕ್ಷಣೀಯವೂ ಆಗಿರುತ್ತದೆ ಆ ಸ್ಥಾನದಲ್ಲಿ ಶ್ರೀ ನೃಸಿಂಹ ಸರಸ್ವತೀ ಸ್ವಾಮಿಗಳು ಅನೇಕ ಲೀಲೆಗಳನ್ನು ತೋ ರಿಸಿ ಭಕ್ತಕೋಟಿಯನ್ನು ಉದ್ಧರಿಸಿರುವರು; ಈಗಲೂ ಉದ್ದಾರ ಮಾಡುತ್ತಲಿರುವರು, `ನೃಸಿಂಹನಾಡಿಯು ಕೊಲ್ಲಾಪುರದ ಛತ್ರ