ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ (೬ರ್ನಾಟಕಕ್ಕೆ ಪತಿಗಳ ಜಹಗೀರಿನ ವುಲುಖವಾಗಿದ್ದು, ವಾಡಿಯ ಸುತ್ತಮು ತಲು ದಕ್ಷಿಣ ಮಹಾರಾಷ್ಟ್ರ ದೊಳಗಿನ ಬೇರೆ ಬೇರೆ ಪಟವರ್ಧನ ಸಂಸ್ಥಾನಗಳ ಹದ್ದೂ, ಬಿ, ಟಿಶ ಸೀಮೆಯ ಇರುತ್ತದೆ. ಶೀದತ್ತ ತ್ರಯರ ಪಾದುಕೆಗಳಿಂದ ಪರಿಶೋಭಿತವಾದ ಚಿಕ್ಕ ದೇವಸ್ಥಾನವು ಕೃಷ್ಣಾ ತಟಾಕದಲ್ಲಿದ್ದು, ಅದರ ಸುತ್ತ ಮುತ್ತಲು ಪ್ರಶಾಂತವಾದು ಚಿಕ್ಕ ದೊಡ್ಡ ಪೌಳಿಗಳು ಮರೆಯುತ್ತಲಿರುವವು.

  • ವರುಣನು ಅವುಗಳನ್ನು ನೋಡಿ ಬ್ರಹ್ಮದೇವನನ್ನು ಕುರಿತು:.. “ಅಜ್ಞಾ, ವಾಡಿಯೊಳಗಿನ ಶ್ರೀ ದತ್ತ ಜಯಂತಿಯ ಮಹೋತ್ಸವವು ನೆರವೇರಿ ಹೋಗಿರುವದರಿಂದ ಎಲ್ಲ ಪೌಳಿಗಳೂ ತೆರವಿರುತ್ತವೆ. ನಾವು ಇಲ್ಲಿಯೆ ವಿಶ್ರಮಿಸಿ, ಸ್ನಾನ-ಸಂಧ್ಯಾದಿಗಳ ಉದ್ಯೋಗಕ್ಕೆ ಹತ್ತೊಣ. ನಡೆಯಿರಿ ಎಂದನು.

ಕರ್ನಾಟಕದೊಳಗಿನ ಬೇರೆ ಭಾಗಗಳಿಗಿಂತ ಕೃಷ್ಣಾ ತಟಾಕ ದಲ್ಲಿ ಚಳಿಯು ಹೆಚ್ಚು ಮೊದಲೇ ವೃದ್ಧನಾದ ಸಿತಾಮಹನೆ ಹಲ್ಲು ಗಳು ಆ ಅಸಹ್ಯ ಶೀತದಿಂದ ಗಿಟಗರಿಸತೊಡಗಿದವು « ತಮ್ಮಗಳಿರಾ, ನನ್ನಿಂದ ಈ ಚಳಿಯನ್ನು ಸಹಿಸಲಾಗುವದಿಲ್ಲ. ಬೇಗನೆ ಬೆಂಕಿಹೂ ತ್ರಿಸಿ ನನ್ನ ಕೈಕಾಲುಗಳನ್ನು ಬೆಚ್ಚಗೆ ಮಾಡಿರಿ' ಎಂದು ಬ್ರಹ್ಮನು ಆರ್ತಧ್ವನಿಯಿಂದ ನುಡಿಯಲು, ನಾರಾಯಣನು ಇಂದ್ರನ ನೆರವಿ ನಿಂದ ಎಡ-ಬಲದಲ್ಲಿದ್ದ ಕಟ್ಟಿಗೆಗಳನ್ನು ಸಂಚಯಿಸಿ, ಅವಕ್ಕೆ ಬೆಂಕಿಯ ಕಡ್ಡಿ ಯಿಂದ ಅಗ್ನಿ ಸಂಸ್ಕಾರಮಾಡಿ, ಬ್ರಹ್ಮದೇವನನ್ನು ಆ ಅಗ್ನಿಯ ಬಳಿಯಲ್ಲಿ ಕುಳ್ಳಿರಿಸಿದನು; ಹಾಗು ತಾವೂ ಅದನ್ನು ಸುತ್ತುವರೆದು ಕುಳಿತರು ಆಗ ಬ್ರಹ್ಮನು ನಾರಾಯಣನನ್ನು ಕುರಿತು:-ತಮ್ಮಾ, ಅರಣಿಯನ್ನು ಮಥಿಸದೆ, ಬಕ್ಕಣದೊಳಗಿನ ಯಾವದೋ ಒಂದು ಚಿಕ್ಕ ಪೆಟ್ಟಿಗೆಯಿಂದ ಅಗ್ನಿಯನ್ನು ಹೊತ್ತಿಸಿದೆಯಲ್ಲ? ಅದು ಹೇಗೆ? ಆದಕ್ಕೇನೆನ್ನುವರು? ನಾರಾಯಣನು ಬೆಂಕಿಯ ಪೆಟ್ಟಿಗೆಯನ್ನು ಕೈಯಲ್ಲಿ ಹಿಡಿದು:- ಅಣ್ಣಾ, ಇದಕ್ಕೆ ಮಾಚ್‌ಬಾಕ್ಸ್ ಅನ್ನು ವರು. ಇದು ಈ ನವೀನ ಯುಗದ ಶೋಧಗಳಲ್ಲಿ ಹಿಂದು ಅತ್ಯುಪಯುಕ್ತ ಶೋಧವಾಗಿರು ತದೆ. ಪೂರ್ವದಲ್ಲಿ ಅಗ್ನಿ ಸಂಸ್ಕಾರ ಮಾಡಬೇಕಾದರೆ, ಅರಣಿ ಮಥನವನ್ನು ಮಾಡಿ ಇಲ್ಲವೆ ಚಕಮಕಿಯನ್ನು ಉಪಯೋಗಿಸಿ ಬಹು