ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ ೨೧ ಪ್ರಯಾಸ ಪಡಬೇಕಾಗಿದ್ದಿತು; ಆದರೆ ಈ ಗೌರಾಂಗದವರ ಆಢಳಿ ತದ ಯುಗದಲ್ಲಿ ಸಹಜವಾಗಿ ಅಗ್ನಿ ಸಂಚಯಿಸಬಹುದಾದ ಈ ಬೆಂಕಿಯ ಪೆಟ್ಟಿಗೆಗಳು ಬಹು ಸುಲಭವಾಗಿ ದುಡ್ಡಿಗೆ ಮೂರು ದೀಪದ ಪಟ್ಟ ಮೇಲೊಂದು ಸೂಜಿ-ದೊರೆಯುವವಲ್ಲದೆ. ಹಿಂದೊಂದು" ಪೆಟ್ಟಿಗೆಯಲ್ಲಿ ನೂರಾರು ಸಾರೆ ಅಗ್ನಿಯುತ್ರನ ಮಾಡುವಂಥ ಸಣ್ಣ ಸಣ್ಣ ಕಡ್ಡಿಗಳಿರುತ್ತವೆ, ಎಂದನು ಬೆಂಕಿಕಾಸಿ ಚಳಿಯ ಬಾಧೆಯು ತುಸ ಹಿಮ್ಮೆಟ್ಟಲು, ಬ್ರಹ್ಮನು ವರುಣನನ್ನು ಕುರಿತು:-ವರುಣಾ, ಇಲ್ಲಿಯ ಶ್ರೀದತ್ತ ಜಯಂತಿಯ ಉತ್ಸವವು ನೆರೆವೇರಿತ೦ದೆಯಲ್ಲ? ದತ್ತ ಜಯಂತಿಯಂದರೇನು? ಅದು ಯಾವಾಗ ಆಗುವದು? ಎಂದು ಪ್ರಶ್ನೆ ಮಾಡಲು, ವರುಣನು:-ಅಜ್ಜಾ, ದತ್ತ ಜಯಂತಿಯಂದರೆ, ಹಿಂದಕ್ಕೆ ಬ್ರಹ್ಮ-ವಿಷ್ಣು -ಮಹೇಶ್ವರರು ಅತ್ರಿ ಋಷಿಯ ಪತ್ನಿಯಾದ ಅನಸೂಯಾ ಸತಿಯ ಸತ್ವ ಪರೀಕ್ಷೆಗೆಂದು ಭಿಕ್ಷುಕ ವೇಷಧಾರಣ ಮಾಡಿ ಭೂಲೋಕಕ್ಕೆ ಬಂದಿದ್ದರು, ಆದರೆ ಆ ಸತಿಯ ಸತ್ಯಾತಿ! ಯದ ಮುಂದೆ ಅವರ ಆಟವು ಸಾಗದಾಗಲು, ಅವರು ಶಿಶು ರೂಪಿ ದಿಂದ ಅವಳಲ್ಲಿ ವಾಸ ಮಾಡಿದರು. ಮುಂದೆ ಅತ್ರಿಷಿಯ ಅನುಗ್ರಹದಿಂದ ಅವರು ಸ್ವಕರ್ಮರತರಾಗುವದಕ್ಕಾಗಿ ದೇವಲೋ ಕಕ್ಕೆ ತೆರಳುವಾಗ ತಮ್ಮ ತ್ರಿವರ್ಗರ ಅಂಶಸಂಭೂತವಾದ ದತ್ತಾ ತೇಯ ಎಂಬ ಮೂರ್ತಿಯನ್ನು ಆ ಅನಸೂಯಾ ಸತಿಯಲ್ಲಿರಿಸಿ ಹೋದರು. ಅದೇ ಆ ದತ್ತ ಮುನಿಯ ಜಯಂತಿಯು ಮಾರ್ಗ ಶೀರ್ಷ ಶುದ್ಧ ಚತುರ್ದಶಿಗೆ ಇದ್ದು, ಆ ಉತ್ಸವವನ್ನು ಪ್ರತಿವರ್ಷ ಈ ನೃಸಿಂಹವಾಡಿಯಲ್ಲಿ ಬಹು ವಿಜೃಂಭಣೆಯಿಂದ ಮಾಡುತ್ತಾರೆ. ಆ ಉತ್ಸವಕ್ಕೆ ಕರ್ನಾಟಕ ಪ್ರಾಂತದೊಳಗಿನವರಷ್ಟೇ ಅಲ್ಲ, ವಾಹ ರಾಷ್ಟ್ರ, ಮದ್ಯ ಪ್ರಾಂತ, ಉತ್ತರಹಿಂದುಸ್ತಾನ ಮುಂತಾದ ರ್ಪ ಪ್ರಾಂತಗಳ ಭಕ್ತರೂ ಇಲ್ಲಿ ಕಲೆಯುವರು. ಆಜ್ಞಾ, ನಡೆಯಿರಿನ್ನು. ನಾವು ಆ ಪಾಪವಿನಾಶಿನಿ ತೀರ್ಥದಲ್ಲಿ ಸ್ನಾನ ಮಾಡಿ, ಆಸ್ಮಿಕಗಳನ್ನು ತೀರಿಸಿಕೊಂಡು ಊರೋಳಗ ಭವತಿ ಬೇಡಿಕೊಂಡು ಬರುವಾ ಇಲ್ಲಿಗೆ ಬರುವವರೆಲ್ಲರು ಬಹುಶಃ ಭಿಕ್ಷಾ ನವನ್ನೇ ಉಣ್ಣು ವದರಿಂದ ಶಕ್ಯವಿದ್ದಷ್ಟು ತೀವ್ರ ಭವತಿಗೆ ಹೋಗಬೇಕು; ತಡವಾದರೆ ನಿರ ಹಾರ ಮಾಡುವ ಪ್ರಸಂಗ ಬಂದೀತು.