ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ಳ [ಕರ್ನಾಟಕಕ್ಕೆ ಗಳ ವರೆಗೆ ಇದ್ದು, ಕುರಂದವಾಡದೊಳಗಿನ ಶ್ರೀವಿಷ್ಣುವಿನ ಮಂದಿರ ವನ್ನೂ, ಶ್ರೀನರಸಿಂಹ-ಸರಸ್ವತೀ ಸ್ವಾಮಿಗಳವರ ಭಕ್ತವೃಂದದಿಂದ ಶೋಭಿಸುವ ದಾನವಾಡ, ದತ್ತವಾಡ ಮೊದಲಾದವುಗಳನ್ನೂ ನೋಡಿ, ಅಲ್ಲಿಯ ಮಾಹಾತ್ಮವನ್ನೂ ತಿಳಿದರು. ನಾಲ್ಕನೆಯದಿನ ಎಲ್ಲರೂ ಬೆಳಗಿನ ಝಾವದಲ್ಲಿದ್ದು ಕೋಟಿತೀರ್ಥದಲ್ಲಿ ಸ್ನಾನಾಕ ಗಳನ್ನು ತೀರಿಸಿಕೊಂಡು, ಶ್ರೀದತ್ತಾತ್ರಯರ ಪಾದುಕಗಳಿಗೆರಗಿ, ಅಲ್ಲಿಂದ ಹೊರಟು ಶಿರೋಳಕ್ಕೆ ಬಂದರು. ಅಲ್ಲಿ ಶ್ರೀದತ್ತಾತ್ರಯರ ಪ್ರಾಚೀನ ಸ್ಥಾನವನ್ನು ಸಂದರ್ಶಿಸಿ, ರೈಲಗಾಡಿಯನ್ನೇರಿ ಮಿರಜ ಸ್ಟೇಶನ್ನಿಗೆ ನಡೆದರು. ಮಿರಜ. ಗೆಬಂಡಿಯು ಮಿರಜ ಸ್ಟೇಶನ್ನಿಗೆ ಬಂದು ನಿಲ್ಲಲು, ಹಬ್ಬ ಪಾದ್ರಿಯವನು ಅನೇಕ ಪ್ರಕಾರದ ಪುಸ್ತಕಗಳನ್ನು ಕೈಯಲ್ಲಿ ಹಿಡಿ ಕೊಂಡು ಯೇಸುವಿನ ಧರ್ಮ! ಯೇಸುವಿನ ಶ್ರೇಷ್ಠ ಆಚರಣೆ ! ಜಗ ತಿನಳಗಿನ ಇತರ ಧರ್ಮಗಳಿಗಿಂತ ಕಸ್ತಧರ್ಮವೇ ಶ್ರೇಷ್ಠ ವು!!! ಎಂದು ಕೂಗುತ್ತ, ಆ ಪುಸ್ತಕಗಳನ್ನು ಗಾಡಿಯೊಳಗೆ ಏರುವವರಿಗೂ ಗಾಡಿಯಿಂದ ಇಳಿಯುವವರಿಗೂ ತೋರಿಸುತ, 4 ಬೆಲೆ ಹಿಂದೇ ದು”ಡು ಎಂದು ಚೀರುತ್ತ ನಡೆದಿದ್ದನು, ಅದನ್ನು ನೋಡಿ ಬ್ರಹ್ಮನು ವರುಣನಿಗ:-ವರುಣಾ, ಇವನಾರು? ಹೀಗೇಕೆ ಕೂಗುತ್ತಿರುವನು? ಇವನ ಕೈಯೊಳಗಿನ ಆ ಚಿಕ್ಕ-ಪುಟ್ಟ ಹೊತ್ತಿಗೆಗಳಾವವು? ವೇದ ಖಂಡಗಳಲ್ಲವಷ್ಟೇ? ಎಂದು ಕೇಳಿದನು | ವರುಣ:-ಆಜ್ಞಾ, ಇವನು ಕ್ರಸಧರ್ಮೋಪದೇಶಕನು. ಕ್ರಿಸ್ತ ಧರ್ಮವನ್ನು ಹಬ್ಬಿಸುವ ಮುಖ್ಯ ಉದ್ದೇಶದಿಂದಲೇ ಆ ಧರ್ಮದವರು ಈ ಊರಲ್ಲಿ ಹಿಂದು ಜಗತ್ಪಸಿದ್ದ ದವಾಖಾನೆಯನ್ನಿ ಟೈರುತ್ತಾರೆ ಆ ದವಾಖಾನೆಯಲ್ಲಿ ಬಡಬಗ್ಗರಿಗೆ ಪುಕ್ಕಟೆಯಾಗಿ ಔಷಧೋಪಚಾರಗಳು ನಡೆಯುತ್ತಿರುವವೇನೋ ನಿಜ, ಆದರೆ ಆ ಕ್ರಿಸ್ಟಿ ಧರ್ಮದವರು ಭಯಂಕರ ಜಾಲದವರಿರುವದರಿಂದ, ಅವರು ಎಡ-ಬಗ್ಗರ ಮೇಲೆ ಔಷಧೋಪಚಾರಗಳಿಂದ ಅತಿಶಯ ದಯ ತೋರಿಸಿದಂತೆ ನಟಿಸಿ, ಅವರನ್ನು ಸದ್ದಿಲ್ಲದೆ ತಮ್ಮ ಅನು