ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭. == = = = == sansaarad→ ದೇವತೆಗಳ ಆಗಮನ.] ೨೭ ಕುರಿತು:- ವರುಣಾ, ಇದೇನು? ಡೇರೆದಂಥ ಆಕಾರದ ಶುಭ ವರ್ಣದ ಈ ಕಟ್ಟಡವು ಯಾರದು? ಇದಕ್ಕೇನೆನ್ನುವರು? ವರುಣ:-ಇಂದ್ರಾ, ಇದು ಒಬ್ಬ ಪ್ರಸಿದ್ಧ ಮಹಮ್ಮದೀಯ ಪುರುಷನ ಕಬರಸ್ತಾನವು, ಇದನ್ನು ಕಟ್ಟಿಸಿ, ಕೆಲವು ಶತಮಾನಗೆ ಳಾಗಿರುವವು ಈ ಪ್ರಾಂತದಲ್ಲಿ ಈ ಸಾಧುವರ್ಯನ ಪ್ರಸಿದ್ದಿ ಯು ವಿಶೇಷವಾಗಿದೆ. ಅದರಿಂದ ಪ್ರತಿವರ್ಷ ಚಳಿಗಾಲದಲ್ಲಿ " ಇಲ್ಲಿ ಉರುಸು ಆಗುತ್ತಿರುತ್ತದೆ. ಆ ಉರುಸಿಗೆ ಹತ್ತು ಸಾವಿರಗಟ್ಟೆ ಪರಸ್ಥಳೀಕರು ನೆರೆಯುತ್ತಾರೆ.

  • ಅದೇ ದಾರಿಯಿಂದ ಸಾಗಿರಲು, ಎಡ ಬದಿಗೆ ಕೆಲವು ಗಿಡಗಳು ಕಾಣಿಸಿಕೊಂಡವು ಅವುಗಳಿಗೆ ಕೈ, ಕಟ್ಟದ ಅರಿವೆಗಳು ಎಲ್ಲಿ ಲ್ಲಿಯ ತೂಗಹಾಕಲ್ಪಟ್ಟಿದ್ದವು ಮತ್ತೆ ಕೆಲವರು ಅಳು ಮೋರೆಯ ಜನರು ಧಾವಿಸುತ್ತ ಬಂದು, ಅವಕ್ಕೆ ಪುನಃ ಅಂಥ ಕಲ್ಲು ಕಟ್ಟಿದ ಅರಿವ ಗಳನ್ನು ಕಟ್ಟಿ ಕಟ್ಟಿ ಹೋಗುತ್ತಿದ್ದರು ಈ ವಿಚಿತ್ರ ಸ್ಥಿತಿಯನ್ನು ಕಂಡು ಬ್ರಹ್ಮನು ವರುಣನಿಗೆ:ವರುಣಾ, ಇದೇನು ಸೋಜಿಗ! ಜನರು ಈ ಗಿಡಗಳಿಗೆ ಹೀಗೇಕೆ ಮಾಡುತ್ತಿರುವರ? ಇದರಿಂದ ಅವರಿಗಾಗುವ ಪ್ರಯೋಜನವೇನು?

ವರುಣ:-ಅಜ್ಞಾ, ಹಿಂದಕ್ಕೆ ಈ ಊರಲ್ಲಿ ಒಬ್ಬ ಪ್ರಸಿದ್ಧ ಮಾಂತ್ರಿಕನಿರುತ್ತಿದ್ದನು ಅವನು ತನ್ನ ಮಂತ್ರಬಲದಿಂದ ಹಾವುಚೇಳು ಮುಂತಾದ ವಿಷಯಕ್ಕೆ ಪ್ರಾಣಿಗಳ ಕಾಟದಿಂದ ಮಾನವ ರನ್ನು ರಕ್ಷಿಸುತ್ತಿದ್ದನು. ಜನರ ಉಪಟಳದಿಂದ ಬರಬರುತ್ತ ಅವ ನಗೆ ನಿದ್ದೆ -ನೀರಡಿಕೆಗಳಿಗೆ ಕೂಡ ಅವಕಾಶ ಉಳಿಯದಾಯಿತು ಆಗ ಆ ಮಹಾಪುರುಷನು ಯೋಚಿಸಿ, ಈ ಮರಗಳನ್ನೇ ಮಂತ್ರ ಪೂತಗಳನ್ನಾಗಿ ಮಾಡಿದನು; ಹಾಗು ವಿಷಬಾಧಿತರಾದವರಾಗಲಿ, ಅವರ ಆಪ್ಲೆಷ್ಟರಾಗಲಿ ಕೂಡಲೆ ಬಂದು, ತಮ್ಮ ಹೆಸರಿನದೊಂದು ಕಲ್ಲನ್ನು ಅರಿವೆಯಲ್ಲಿ ಕಟ್ಟ ಈ ಗಿಡಗಳಿಗೆ ಕಟ್ಟಿ ದರೆ, ತಾನು ಮಂತ್ರ ಉಚ್ಛರಿಸಿ ಹಾಕುವ ನೀರಿನಷ್ಟೇ ಇದರಿಂದಲೂ ಗುಣವಾಗುವದೆಂದು, ಆ ಮಾಂತ್ರಿಕನು ಜನರ ನಿದರ್ಶನಕ್ಕೆ ತಂದು ಕೊಟ್ಟನು, ಅ೦ದಿ ನಿಂದಲೂ ಇದೇ ಕ್ರಮವು ನಡೆದಿರುತ್ತದೆ. ಈಗಲಾದರೂ ಆ ಮಹಾತ್ಮನ ಆ ಮಂತ್ರದ ಪ್ರಭಾವವು ಬಹು ಜನರಿಗೆ ಫಲಿಸು ತಿರುತ್ತದೆ.