ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಕರ್ನಾಟಕಕ್ಕೆ ಇಂದಿನಮಟ್ಟಿಗಾದರೂ ಬಿಡಬೇಕಾಗಿತ್ತೆಂದು ಮನದಲ್ಲಿಯೇ ಅಂದು ಕೊಂಡು ಬಚ್ಚಲವನ್ನು ಬಿಟ್ಟು ಲಗುಬಗೆಯಿಂದ ಎದ್ದು ಬಂದನು. ಎಲ್ಲರೂ ಪ್ರಾತರಾಗ್ನಿಕಗಳನ್ನು ತೀರಿಸಿಕೊಂಡು ಊರಲ್ಲೆಲ್ಲ ಅಡ್ಡಾಡಿ ಬಂದರು. ಮಧ್ಯಾಹ್ನದಲ್ಲಿ ಆ ಗೃಹಸ್ಥ ನಲ್ಲಿ ಸಮೀಚೀನ ವಾದ ಊಟ ತೀರಿಸಿಕೊಂಡು ತುಸ ವಿಶ್ರಮಿಸಿ, ಸಾಯಂಕಾಲದ ಮರು ಗಂಟೆಗೆ ಹಿಂದು ಬಾಡಿಗೆಯ ಮೋಟಾರನ್ನು ಗೊತ್ತು ಮಾಡಿಕೊಂಡು, ಶ್ರೀ ಚಿದಂಬರನ ಜನ್ಮಸ್ಥಾನವಾಗಿದ್ದ ಮುರುಗೊ ಡಿಗೆ ತೆರಳಿದರು, ಮುರಗೋಡ. ಬೆಳಗಾವಿಯಿಂದ ಹೊರಟ ಮೋಟಾರು ನಡುವೆ ಬೈಲಹೊಂಗಲ ದಲ್ಲಿ ತುಸ ಹೊತ್ತು ವಿಶ್ರಮಿಸಿ, ಮುರಗೋಡಿಗೆ ಸಾಯಂಕಾಲದ ೫ ಗಂಟೆಗೆ ಬಂದು ತಲುಪಿತು, ದೇವಗಣಗಳು ಊರ ಹತ್ತರ ಮೋಟಾರಿನಿಂದಿಳಿದು, ಊರೊಳಗೆ ನಡೆದರು ಸರಾಸರಿ ಹಿಂದೂ ವರೆ ನೂರು ವರುಷಗಳ ಹಿಂದೆ ಇಲ್ಲಿ ಮಹಾದೇವನ ಅಂಶದಿಂದ ಶ್ರೀ ಚಿದಂಬರ ಮಹಾಸ್ವಾಮಿಯು ಅವತರಿಸಿದ್ದನು ಈ ಮಹಾ ತನು ತನ್ನ ಸತ್ವಗುಣಪ್ರಭಾವದಿಂದ ಲೋಕವಿಖ್ಯಾತನಾಗಿ ಭಕ್ಷ ಕೋಟಿಯನ್ನುದ್ದರಿಸಿದನು. ದೇವಗಣಗಳು ಮುರಗೋಡದೊಳಗಿನ ಮಹಾ ಸ್ವಾಮಿಯ ಹಾಳು ಮನೆಯನ್ನು ನೋಡಿಕೊಂಡು, ಸಂಜೆಯ ವಸತಿಗಾಗಿ ಸಮೀಪದಲ್ಲಿಯ ಕಂಗೇರಿಗೆ ಹೋದರು, ಅಲ್ಲಿ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿಳಕೊಂಡು ಸಾಯಾಸ್ಮಿಕಗಳನ್ನು ತೀರಿಸಿದರು, ರಾತ್ರಿ ಅಲ್ಲಿಯ ಶ್ರೀ ಚಿದಂಬರ ವಂಶಜರಲ್ಲಿ ಊಟ-ಪಾಟಗಳನ್ನು ಮಾಡಿ ಕಂಡರು, ದೇವತೆಗಳು ಆ ಮಹಾಖಾ ನದಲಿ ಮೂರು ದಿವಸ ವಾಸ ಮಾಡಿದರು, ಕೆಂಗೇರಿಯಲ್ಲಿಯ ಶ್ರೀ ಮಹಾಸ್ವಾಮಿಯ ಸಮಾಧಿಯನ್ನೂ, ಶ್ರೀ ಮಹಾಸ್ವಾಮಿಯ ತಂದೆ-ತಾಯಿಗಳ ಸಮಾಧಿ-ದೇವಾಲಯಗಳನ್ನೂ, ಶ್ರೀ ಮಾರ್ತಾ೦ಡೇಶ್ವರ, ಶ್ರೀ ಸೀತಾ-ರಾಮರ ದೇವಸ್ಥಾನಗಳನ್ನೂ ಕಣ್ಣಾರೆ ಕಂಡರು, ಕಂಗೇರಿ