ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ ಮಹಾಸ್ಥಾನವು ಬಹು ರಮಣೀಯವಾಗಿದೆ ಅಲ್ಲಿ ವರ್ಷಕ್ಕೊಂದ ರಡು ಸಾಕಿ ಮಹೋತ್ಸವಗಳು ನಡೆಯುತ್ತವೆ. ದೇವಗಣಗಳು ನಾಲ್ಕನೆಯ ದಿನ ನಸಕಿನಲ್ಲಿ ಕಂಗೇರಿಯ ಕಂಪು ನೀರಿನ ಹೊಂಡದಲ್ಲಿ ಜಳಕ ಮಾಡಿಕೊಂಡು ಮುರಗೋಡಿಗೆ ಬಂದು, ಮೋಟಾರಿನ ನಿರೀಕ್ಷಣೆ ಮಾಡಲಾರಂಭಿಸಿದರು, ಅಂದು ಬೆಳಿಗ್ಗೆ ೮ಕ್ಕೆ ಅಲ್ಲಿಗೆ ಬರಬೇಕಾಗಿದ್ದ ಮೋಟಾರು ಬಂಡಿಯು ನಡುವೆ ನಾದುರಸ್ತಾದ್ದರಿಂದ, ಮಧ್ಯಾಹ್ನ ೧೨ಕ್ಕೆ ಬಂದಿತು. ಆ ಸಮಯದಲ್ಲಿ ಅವರೆಲ್ಲರೂ ಅವಸರದಿಂದ ಮೋಟಾರಿನಲ್ಲಿ ಕುಳಿತು ಕೊಂಡರು.” ಇನ್ನುಳಿದ ಪ್ರಯಾಣಿಕರೂ ಗಡಿಬಿಡಿಯಿಂದ ಹತ್ತಿ ಕೊಳ್ಳಲು, ಆ ರಬ್ಬರಿನ ಗಾಲಿಯ ಬಂಡಿಯು ಭರದಿಂದ ಓಡಲಾ ರಂಭಿಸಿತು. ಬಡಲಿ. ಹೀಗೆ ಓಡತೊಡಗಿದ್ದ ಮೋಟಾರ ಬಂಡಿಯು ಬೈಲಹೊಂಗಲಕ್ಕೆ ಬಂದು ಗಕ್ಕನೆ ನಿಂತುಕೊಂಡಿತು, ಮುರುಗೂಡಕ್ಕೆ ಹೋಗು ವಾಗ ದಾರಿಯಲ್ಲಿ ಈ ಊರು ಹತ್ತಿದ್ದರಿಂದ ಬ್ರಹ್ಮನು ನಾರಾ ಯಣನನ್ನು ಕುರಿತು:« ನಾರಾಯಣಾ, ಇದೇನು? ಬಂದ ದಾರಿಗೆ ಸುಂಕವಿಲ್ಲವೆಂಬಂತ ತಿರುಗಿ ಮೊದಲಿನ ದಾರಿಗೆ ಬಂದೆವಲ್ಲ! ಎಂದು ನುಡಿಯಲು, ನಾರಾಯಣನೂ ತುಸ ಗೊಂದಲದಲ್ಲಿ ಬಿದ್ದ ನು. ಅಷ್ಟರಲ್ಲಿ ವರುಣನು ಏನೂ ಜ್ಞಾಪಿಸಿಕೊಂಡು ನುಡಿದನೇನಂ ದರೆ:- ನಾವು ಇಲ್ಲಿಗೆ ಬಂದದ್ದು ಯೋಗ್ಯವಾಯಿತು; ಯಾಕಂದರ ಇನ್ನೊಂದು ಕ್ಷಣ ಇಲ್ಲಿ ಕುಳಿತುಕೊಂಡರೆ, ಬೆಳಗಾವಿಯಿಂದ ಸವ ದತಿಗೆ ಹೋಗುವ ಮೋಟಾರ ಬಂಡಿಯು ಬರುವದು, ಅದರಲ್ಲಿ ಕುಳಿತುಕೊಂಡು ಹೋದರೆ, ನನಗೆ ದಾರಿಯಲ್ಲಿ ಉತ್ತಮೋತ್ತಮ ಸ್ಥಳಗಳು ನೋಡಲಿಕ್ಕೆ ಸಿಗುವವು.”

  • ವರುಣನ ಈ ಮಾತು ಕೇಳಿ ಬ್ರಹ್ಮ ನು ಸುಮ್ಮನಾದನು. ಅಷ್ಟರಲ್ಲಿ ಮೋಟಾರಿನ ಕಿರೆಂಬ ಕರ್ಕಶಧ್ವನಿಯು ಕೇಳಿಬರತೊಡ ಗಿತು. ಆಗ ವರುಣನು ಎಲ್ಲರಿಗೂ ತಮ್ಮ ತಮ್ಮ ಸಾಮಾನುಗಳನ್ನು