ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ ಹರ ಕಟ್ಟಡಗಳು ಮಾತ್ರ ಉಳಿದಿರುತ್ತವೆ, ಉಳಿದವುಗಳೆಲ್ಲ ನಿರ್ನಾ ಮಗಳಾಗಿರುತ್ತವೆ. ಈ ಗೋಲಗುಮುಟ, ಆಸಾರ ಮಹಾಲ, ಜುಮ್ಮಾ ಮಸೀದೆ ಮುಂತಾದ ಪ್ರಖ್ಯಾತ ಇಮಾರತುಗಳೂ, ತಾಜ ಬಾವಡಿ, ಚಾಂದಬಾವಡಿ ಮುಂತಾದ ವಿಸ್ತೀರ್ಣವಾದ ಬಾವಿಗಳೂ ಉಪ್ಪಲಿ ಬುರುಜು, ಮುಲಖ ಮೈದಾನ ತೋಫು ಮುಂತಾದವು ಗಳೂ ಈಗ ಉಳಿದಿರುತ್ತವೆ. ಈ ಗೋಲಗುಮುಟ ಕಟ್ಟಡವು ನಮ್ಮ ಪ್ರಾಚೀನ ಹಿಂದೀಜನರ ಕೌಶಲ್ಯದ ಪ್ರದರ್ಶನವಾಗಿದೆ. ಅಂತ ಎಷ್ಟೋ ದ್ವೀಪಾಂತರದ ಜನರು ಕೂಡ ಬಂದು, ಇದನ್ನು ನೋಡಿ ಬೆರಗಾಗಿ ಹೋಗುತ್ತಿರುವರು, ಎಂದು ಹೇಳುತ್ತಿರುವಷ ರಲ್ಲಿ ಅವರೆಲ್ಲರೂ ಆ ಗುಮಟದ ಹತ್ತರವೇ ಹೊದರು ಆಗ. ಅವರು ಎದುರಿಗಿರುವ ಉದ್ದುದ್ದನ್ನ ಪಂಚಧಾತುಗಳ ಪೊಳ್ಳು ನಳಿ ಗಳನ್ನು ಕಂಡರು. ಆಗ ಇಂದ್ರನು ವರುಣನನ್ನು ಕುರಿತು:- ಗೆಳೆಯಾ, ಈ ಊಳಿವೆಗಳು ಯಾತರವು ಇಲ್ಲಿ ಹೀಗ ಕ್ರಮಗೊಳಿಸಿ ಇಟ್ಟಿರುವುದೇಕೆ? ಎಂದು ವಿಚಾರಿಸಲು, “ಇವು ಬಾದಶಾಹೀ ಕಾಲದ ತೋಫುಗಳು; ಇಂಗ್ಲಿಷರಾಯಭಾರಿಗಳು ಇವನ್ನೆಲ್ಲ ಒಟ್ಟು ಗೂಡಿಸಿ ಇಲ್ಲಿ ಜನರ ಕಣ್ಣಿಗೆ ಬೀಳುವದಕ್ಕಾಗಿ ಇಟ್ಟಿರುವರು' ಎಂದು ವರುಣನು ಉತ್ತರವಿತ್ತನು, ನಂತರ ಅಲ್ಲಿಯೇ ಬಳಿಯಲ್ಲಿದ್ದ ಪ್ರಾಚೀನ ಶಿಲಾಲೇಖ, ಮೂರ್ತಿ ಮುಂತಾದವುಗಳನ್ನು ಕಂಡುಕೊಂಡು, ದೇವತಗಳು ಆ ಪ್ರಚಂಡವಾದ ಗೋಲುಗುಮಟದ ಪಶ್ಚಿಮದಿಕ್ಕಿಗೆ ಹೋಗಿ, ಅಲ್ಲಿ ರುವ ನೆಲಮನೆಯನ್ನು ಪ್ರವೇಶಿಸಿದರು; ಹಾಗು ಅಲ್ಲಿಯ ಆ ಭಯಾ ನಕ ಗಂಜ್ವರವನ್ನು ದಿಟ್ಟಿಸಿ ನೋಡಲಾರದೆ, ಕೂಡಲೆ ಹಿಂದಿರುಗಿ ವರು ಬಳಿಕ ಮುಖ್ಯದ್ವಾರವನ್ನು ಪ್ರವೇಶಿಸಿ ಎದುರಿಗೆ ಕಾಣುವ ವಿಶಾಲವಾದ ಗೋರಿಯನ್ನೂ, ಮೇಲೆ ಎತ್ತರದಲ್ಲಿ ಕಾಣುವ ಗುಮು ಟದ ಒಳಭಾಗವನ್ನೂ ನಿರೀಕ್ಷಿಸಿ ಬೆರಗಾದರು ಆ ಮೇಲೆ ಅವ ರೆಲ್ಲರೂ ಅಲ್ಲಿಯೇ ಕುಳಿತಿದ್ದ ಕಾವಲುಗಾರನ ಕೈಯಲ್ಲಿ ಕೆಲವು ದುಡು ದಕ್ಷಿಣೆಯನ್ನು ಕೊಟ್ಟು, ಅವನಿಂದ ಮೇಲೆ ಏರಿ ಹೋಗುವ ಬಾಗಿಲವನ: ತರೆಯಿಸಿಕೊಂಡು ಮೇಲೆ ಹತ್ತಿದರು, ಅವರು ಆ ಗುಮುಟದ ಒಳಭಾಗದ ವರ್ತುಲಾಕಾರ ಭವ್ಯವಾದ ಪ್ರದೇಶ ವನ್ನು ನೋಡಿ, ಅಲ್ಲಿಂದ ಕೆಳಗೆ ಬೊಗ್ಗಿ ನೋಡಿದರು, ಆಗ ಮುದಿ