ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ದೇವತೆಗಳ ಆಗಮನ ಹೋಗಿವೆ ಅವನ ತರುವಾಯದ ಬಾದಶಹರಲ್ಲಿ ಹೊಸ ಇಮಾರ ತುಗಳನ್ನು ಕಟ್ಟಿಸುವ ಹುರುಪೂ, ರಾಜ್ಯದಲ್ಲಿ ಶಾಂತತೆಯ ಇರದ್ಧ ರಿಂದ ಆ ಕೆಲಸಗಳು ಅಲ್ಲಿಗೇ ನಿಂತು ಹೋದವು ಆದಿಲ್‌ಶಾಹೀ ರಾಜ್ಯವು ದಕ್ಷಿಣಹಿಂದುಸ್ತಾನದೊಳಗಿನ ಮಹಮ್ಮದೀರಾಜ್ಯಗಳಲ್ಲಿ ಮಲರದ್ದಾಗಿದ್ದರಿಂದ, ಅವನ ರಾಜಧಾನಿಯಲ್ಲಿ ಹಿಂದುಗಳಿಗಿಂತ ಸ್ವಧರ್ಮದವರಿಗೇ ಹೆಚ್ಚಾಗಿ ಮನ್ನಣೆಯಿತ್ತೆಂದು ಬೇರೆ ಹೇಳಬೇಕಾ ಗಿರುವದಿಲ್ಲ; ಹಾಗು ಅದರಿಂದಲೇ ಅವನು ತನ್ಸಿ ಪಟ್ಟಣದಲ್ಲಿ ಎಷ್ಟೋ ಹೊಸ ಮಸೀದೆ-ಮಕಾನುಗಳನ್ನು ಕಟ್ಟಿಸಿರುವನಲ್ಲದೆ, ನಮ್ಮ ಹಳೆಯ ಹಿಂದೂ ದೇವ-ದೇವತೆಗಳ ಪುರಾತನ ಮಂದಿರ ಗಳಲ್ಲಿಯ ವಿಗ್ರಹಗಳನ್ನು ಕಿತ್ತೊಗೆದು, ಅವುಗಳಿಗೂ ಅವೇ ಸ್ವರೂ ಪವನ್ನೇ ಕೊಟ್ಟಿರುತ್ತಾನೆ ಆದರಿಂದ ಈ ಊರಲ್ಲಿ ಎಲ್ಲ ಕಡೆಗೂ ಈ ಮಸೀದೆ-ಮಕಾನುಗಳ ಸಾಮ್ರಾಜ್ಯವೇ ನೆಲೆಗೊಂಡಿರುತ್ತದೆ! ನಮ್ಮ ದೇವತಗಳು ರಾತ್ರಿ ಒಂಬತ್ತು ಗಂಟೆಗೆ ವಿಜಾಪೂರ ಸ್ಟೇಶನ್ನಿಗ ಬರಲಿ, ಹುಟಗಿ ಕಡೆಯಿಂದೆ ಗದಗಿಗೆ ಹೋಗುವ ಗಾಡಿಯು ಬಂದು ನಿಲ್ಲಲಿಕ್ಕೂ ಗಂಟೆ ಬಿದ್ದಿತು. ಕೂಡಲೆ ನಾರಾಯಣನು ತ್ವರೆಮಾಡಿ ಹೊಸಪೇಟೆಯ ತಿಕೀಟುಗಳನ್ನು ಖರೀದಿ ಮಾಡಿದನು; ಹಾಗು ಅವರೆಲ್ಲರೂ ಹಿಂದು ವಿರಾಮವಾದ ಡಬ್ಬಿ ಯಲ್ಲಿ ಹತ್ತಿ ಕುಳಿತರು. ಬಳಿಕ ಎಸ ಹೋ ನ ಮೇ * ಬಂಡಿಯು ತನ್ನ ಸ್ವಾಭಾವಿಕವಾದ ಮಂದಗತಿಯಿಂದ ಸಾಗಿತು. ನಿನ್ನೆ ರಾತ್ರಿ ಸರಿಯಾಗಿ ನಿದ್ರೆಯಾಗದ್ದರಿಂದಲೂ ಇಂದು ಹಗಲೆಲ್ಲ ರಣಗುಟ್ಟುವ ಬಿಸಿಲಲ್ಲಿ ಹಿಂದೇನವನೆ ತಿರುಗಾಡಿದ್ದರಿಂದಲೂ ದೇವ ಗಣಗಳಿಗೆ ಇಂದು ಬಹಳ ಶ್ರಮವಾಗಿತ್ತು, ಮೇಲಾಗಿ ರೈಲುಬಂಡಿ ಯಲ್ಲಿ ವಿರಾಮವಾದ ಸ್ಥಳವೂ ಸಿಕ್ಕಿತ್ತು, ಅದರಿಂದ ಅವರಿಗೆ ಗಾಢವಾದ ನಿದ್ರೆ ಹತ್ತಿತು. ಬೆಳಗಿನ ೫ ಗಂಟೆಗೆ ನಸುಗಾಳಿಯ ಹೊಡೆತದಿಂದ ಬ್ರಹ್ಮನಿಗೆ ಮೊದಲು ಎಚ್ಚರವಾಯಿತು. ಆಗ ಅವನು ಬಾಕಿನ ಕೆಳಗೆ ತುಂಬಿ ಟಿದ್ದ ತನ್ನ “ ತಂಬಿಗೆಯನ್ನು ತಕ್ಕೊಂಡು ಬಾಯಿ ಮುಕ್ಕಳಿಸ ಹೋದನು; ಆದರೆ ಅಲ್ಲಿ ಅವನ ಆ ತಂಬಿಗೆ ಇರದೆ, ಬೇರೆಯವರ ತಂಬಿಗೆಗಳೂ ಇರಲಿಲ್ಲ ಇಷ್ಟೇ ಅಲ್ಲ, ಎಲ್ಲರ ಉಳಿದ ಸಾಮಾನು ಗಇರಲಿಲ್ಲ. ಆಗ ಅವನು ಎಲ್ಲರನ್ನೂ ಎಬ್ಬಿಸಿ ಅವರಿಗೆ ಆ