ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫9 [ಕರ್ನಾಟಕ ಸಂಗತಿಯನ್ನು ತಿಳಿಸಿದನು. ಆಗ ವರುಣನು:-ಅಜ್ಜಾ, ಇದು ಹೇಳಿ ಕೇಳಿ ರೈಲು ಬಂಡಿಯು; ಇದರಲ್ಲಿ ಹೀಗೆ ಮೈಮರೆತು ಮಲಗುವದು ಸರಿಯಲ್ಲ; ಆಗ, ನಾನು ನನ್ನ ಎಲ್ಲ ಸಾಮಾನುಗಳನ್ನು ಹೇಗೆ ಗಂಟು ಕಟ್ಟಿ ತಲೆಗಿಂಬಿಗೆ ಇಟ್ಟುಕೊಂಡಿರುವೆನು ನೋಡಿರಿ, ನೀವೂ ಮೊದಲೇ ಎಚ್ಚರ ಪಟ್ಟಿದ್ದರೆ, ಹೀಗೆ ಹಳಹಳಿಸುವ ಕಾರಣ ಬೀಳುತ್ತಿರಲಿಲ್ಲ.

  • ಬಳಿಕ ದೇವಗಣಗಳು ಬೆಳಿಗ್ಗೆ ಬಾಗಲಕೋಟೆಯಲ್ಲಿಳಿದು, ಅಲ್ಲಿ ಘಟಪ್ರಭಾ ನದೀತೀರದಲ್ಲಿ ಸ್ನಾನ-ಆಸ್ತಿಕಗಳನ್ನು ತೀರಿಸಿ, ಯಾವನೊಬ್ಬ ವೈಷ್ಣ ವನಲ್ಲಿ ತಾವೂ ವೈಷ್ಣ ವರೇ ಎಂದು ಹೇಳಿ ಭೋಜನ ಆರಿಸಿಕೊಂಡು, ಸ್ಟೇಶನ್ನಿಗೆ ಬಂದು ಗದಗಿಗೆ ಬರುವ ಮಧ್ಯಾಹ್ನದ ಗಾಡಿಯನ್ನು ಹಿಡಿದರು; ಹಾಗು ಅಂದೇ ರಾತ್ರಿ ೯ಕ್ಕೆ ಗದಗಿಗೆ ಬಂದು, ಸ್ಟೇಶನ್ನದ ಬಳಿಯ ಧರ್ಮಶಾಲೆಯಲ್ಲಿ ಸಾಯಾಗ್ನಿಕಗಳನ್ನು ತೀರಿಸಿ, ಅಲ್ಲಿಯೇ ಕಪಾಳಕ್ಕೆ ಕೈಕೊಟ್ಟು ಮಲ ಗಿದರು, ಅವರು ಬೆಳಗಿನ ಝಾವದ ೨ ಗಂಟೆಗೆ ಸೈಶಸ್ಸಿಗೆ ಬಂದು ಹೊಸಪೇಟೆಗೆ ಹೋಗುವ ರೈಲನ್ನು ಹತ್ತಿದರು; ಆ ರೈಲು ನಸಕಿ ನಲ್ಲಿ ಆ ಸ್ಟೇಶನ್ನಿಗೆ ಬರಲು, ದೇವಗಣಗಳು ರೈಲಿನಿಂದ ಇಳಿದರು.

ಶ್ರೀ ಹಂಸೀಕ್ಷೇತ್ರ. ಬಳಗಾದ ಬಳಿಕ ಬ್ರಹ್ಮ-ದೇವೇಂದ್ರರು ಪ್ರಾತರ್ವಿಧಿಗೆ ಹ್ಯಾಗೆ ಮಾಡಬೇಕೆಂದು ವರುಣನನ್ನು ಕುರಿತು ಕೇಳಿದರು ಆಗ ವರು ಣನು ಮೌನದಿಂದ ಅವರನ್ನು ಸ್ಟೇಶನ್ನದಲ್ಲೆಲ್ಲ ಅಡ್ಡಾಡಿಸಿದನು. ಮನುಷ್ಯನ ಮೈಯಲ್ಲಿ ನರಗಳು ಇರುವಂತೆ ಆ ಸ್ಟೇಶನ್ನದಲ್ಲಿ ಎಲ್ಲಿ ನೋಡಿದಲ್ಲಿ ಸೊಗಸಾದ ನೀರಿನ ಕಾಲುವೆಗಳು ಹರಿಯುತ್ತಿದ್ದವು. ಆ ಕಾಲುವೆಗಳ ತಿಳಿನೀರನ್ನು ನೋಡಿ, ಬ್ರಹ್ಮನು ಸಂತಸಬಟ್ಟು:- « ವರುಣಾ, ಇಲ್ಲಿ ಭಾಗೀರಥಿಯ ಪ್ರತ್ಯಕ್ಷಳಿರುವಳೇನು? ನೀರಿನ ವಿಷಯವಾಗಿ ಇಲ್ಲಿ ಎಷ್ಟು ಅನುಕೂಲವಿದೆಯಲ್ಲ?” ಎಂದನು. ವರು ಣನು:- ಇಲ್ಲಿಯ ಸಮೀಪದಲ್ಲಿ ತುಂಗಭದ್ರಾ ನದಿಗೆ ಹಿಡು ಹಾಕಿ, ಹೀಗೆಯೇ ಬೇಕಾದಲ್ಲಿಗೆ ನೀರಿನ ಕಾಲುವೆಗಳನ್ನು ತಂದಿರು ತ್ತಾರೆ. ಈ ಕಾಲುವೆಗಳಿಂದ ಇಲ್ಲಿ ಭತ್ತ, ಕಬ್ಬು ಮೊದಲಾದ