ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩ ದೇವಶಗಳ ಆಗಮನ ಪೈರುಗಳು ಬಹಳ ಸರಸವಾಗಿ ಬರುತ್ತವೆ, ಎಂದು ಹೇಳಿದನು. ಅದನ್ನು ಕೇಳುತ್ತ ನಾರಾಯಣ-ಬ್ರಹೇಂದ್ರರು ಪ್ರಾತರ್ವಿಧಿಗ ಇನ್ನು ತೀರಿಸಿಕೊಂಡು, ಹಂಪಿಗೆ ಹೂಗುವದಕ್ಕಾಗಿ ಸ್ನೇಶನ್ನಿನ ಬಳಿಗೆ ಬಂದರು. ಆಗ ಅವರಿಗೆ ಹಿಂದೂ ವಾಹನಗಳು ಸಿಗಲಿಲ್ಲಾ ದ್ದರಿಂದ, ವರುಣನು ಅವರನ್ನು ಅಲ್ಲಿಯೇ ಕೂಡ್ರಿಸಿ, ಹೊಸಪೇಟೆಯ ಊರಲ್ಲಿ ಹೋಗಿ ಎರಡು ಝಟಕಾಬಂಡಿಗಳನ್ನು ಮಾಡಿಕೊಂಡು ಬಂದನು. ಆ ವಾಹನಗಳಲ್ಲಿ ಕುಳಿತು ಏಳುಮೈಲು ದೂರವಿರುವ ಹಂಪಿಯನ್ನು ಸೇರಬೇಕಾದರೆ ಅವರಿಗೆ ಸಾಕುಸಾಕಾಗಿ ಹೋಯಿತು. ಯಾಕಂದರೆ, ಝಟಕಾಬಂಡಿಯ ಧಡಿಕಿಯಿಂದ ಅವರ ಮೈ ನುಗ್ಗು ನುಗ್ಗಾಗಿತ್ತು, ಅದರಿಂದ ಅವರು ಝಟಕಾವಾಹನವನ್ನು ಬಹಳ ವಾಗಿ ತಿರಸ್ಕರಿಸಿದರು. ಹಂಪಿಯ ಅಗಸೇ ಬಾಗಿಲಕ್ಕೆ ಹೋದ ಕೂಡಲೆ ಅವರಿಗೆ (ಸಾಸುವೆಯ ಗಣಪತಿ' ಎಂಬ ಶಿಲಾಮೂರ್ತಿಯ ದರುಶನವಾ ಯಿತು. ತುಸ ಮುಂದಕ್ಕೆ ಹೋಗಲು ಅದಕ್ಕೂ ಅದ್ಭುತವಾಗಿ ರುವ ಕಡಲೆಯ ಗಣಪತಿಯ ಗುಡಿಯು ಹತ್ತಿತು. ಬಹು ದೊಡ್ಡ ಪ್ರಮಾಣದಿಂದಿರುವ ಇವರಡು ಮೂರ್ತಿಗಳನ್ನು ನೋಡಿ ಅವರು ವಿಸ್ಮಯ ಪಟ್ಟರು. ಬಳಿಕ ಅವರು ತರಬೀದಿಯ ಹಾಳು ಪೌಳಿ ಗಳನ್ನು ನೋಡುತ್ತ ಶ್ರೀ ವಿರೂಪಾಕ್ಷೇಶ್ವರನ ಗುಡಿಗೆ ನಡೆದರು. ಗುಡಿಯ ಹೆಬ್ಬಾಗಿಲ ಮೇಲಿರುವ ಗೋಪುರವು ಕ್ಷಣಹೊತ್ತು ಅವ ರನು ಕೌತುಕದಲ್ಲಿ ಕೆಡವಿತು. ಫರಸುಗಳಿನ ಒಳ ಅಂಗಳದಲ್ಲಿ ತುಂಗಭದ್ರೆಯ ಕಾಲುವೆಯು ಹರಿಯುತ್ತಿರುವದನ್ನು ಕಂಡು, ಬ್ರಹ್ಮಾದಿಗಳು ಅದರಲ್ಲಿ ಪಾದಪ್ರಕ್ಷಾಲನ ಮಾಡಿಕೊಂಡು ದೇವ ದರುಶನಕ್ಕೆ ಹೋದರು ಬೆಳಗಿನ ಪೂಜೆ ಮುಗಿಸಿ ಪೂಜಾರಿಯು ಬಾಗಿಲ ಹಾಕಿಕೊಂಡು ಹೋದದ್ದರಿಂದ, ಆಗ ಬ್ರಹ್ಮಾದಿಗಳಿಗೆ ಶ್ರೀ ವಿರೂಪಾಕ್ಷನ ದರುಶನವಾಗಲಿಲ್ಲ ಬಳಿಕ ಅವರು ಹಾಗೆಯೇ ನದಿಗೆ ಸ್ನಾನಕ್ಕೆ ದಯಮಾಡಿಸಿದರು. ತುಂಗಭದ್ರೆಯ ಪ್ರಶಸ್ಟ್ ವಾದ ಉಸುಬಿನ ಪಾತ್ರೆಯಲ್ಲಿ ಅವರು ಹೊಲಸಾದ ತನ್ನ ಬಟ್ಟೆ ಬರೆಗಳನ್ನು ಒಗೆದು ಒಣಗಹಾಕಿದರು. ಸ್ನಾನಾಗ್ನಿಕಗಳನ್ನು ತೀರಿಸಿ ಕೊಳ್ಳುತ್ತಿರಲು, ಬಿಸಿಲಿನ ಪ್ರಖರತೆಯು ಹೆಚ್ಚಾಗಿ ಮೈಗೆ ಚುರುಕು ಹತ್ತಲಾರಂಭಿಸಿತು. ಆಗ ಅವರು ಆ ಸ್ಥಳವನ್ನು ಬಿಟ್ಟು, ಶ್ರೀ