ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ ದೇವತೆಗಳ ಆಗಮನ.] ಬ್ರಹ್ಮನೇ, ಈ ಗುಡ್ಡದ ಪುಣ್ಯವನ್ನು ಏನು ಹೇಳಲಿ? ಸಾಕ್ಷಾತ್ ಕೈಲಾಸದಷ್ಟು ಯೋಗ್ಯತೆಯು ಇದಕ್ಕೆ ಬಂದದೆ. ಯಾಕಂದರೆ ಕೈಲಾಸದಲ್ಲಿ ತಪಸ್ಸು ಮಾಡುವ ಶಂಕರನೇ ಇಲ್ಲಿ ಮನುಷ್ಯನಾಗಿ ತಪಸ್ಸು ಮಾಡಿರುವನು, ಎಂದು ಹೇಳಲು, ಬ್ರಹ್ಮ ನು:-ಕರ್ನಾ ಟ ಕದ ಪುಣ್ಯವು ದೊಡ್ಡದಿರುವದು ಈಶ್ವರನೇ ಇಲ್ಲಿ ಆಟವಾಡದಿ ದ್ದರೆ, ನಾವೇಕ ಇಲ್ಲಿಗೆ ಬರುತ್ತಿದ್ದೆವು ಎಂದು ಹೇಳಿದನು.

  • ಅನಂತರ ಅವರು ಸಾಯಂಕಾಲದ ಆಯ್ಕೆ ಕಗಳನ್ನು ತುಂಗ ಭದ್ರೆಯಲ್ಲಿ ಮುಗಿಸಿಕೊಂಡು ವಿರೂಪಾಕ್ಷನಿಗಾಗುವ ಸಂಧ್ಯಾಕಾ ಲದ ಪೂಜೆ, ಮಂಗಳಾರತಿಗಳನ್ನು ನೋಡಿ ಅಲ್ಲಿಯೇ ಹಿತ ಮೃಗ ಮಲಗಿಕೊಂಡರು ಮರುದಿನ ಅವರು ರು.ಟಕಾ ಬಂಡಿಯಲ್ಲಿ ಕುಳಿತು ಹೊಸಪೇಟೆಗೆ ಬಂದು, ಅಲ್ಲಿ ತಮಗೆ ಬೇಕಾದ ಪದಾರ್ಥ 1ಳನ್ನು ಕೊಂಡುಕೊಂಡು, ಅಲ್ಲಿಯ ಹೋಟಲಿನಲ್ಲಿ ಉಂಡು ಮಧ್ಯಾ ಹ್ನದ ಒಂದು ಗಂಟೆಯ ರೈಲುಬಂಡಿಯಲ್ಲಿ ಗದಗಿನ ಕಡೆಗೆ ನಡೆದರು.

ಗದಗ. ಗೆಬಂಡಿಯು ಗದಗಿನ ಜಂಕ್ಷನ್ನಿಗೆ ಬಂದಾಗ ರಾತ್ರಿ ಎಂಟು ಹೊಡೆದಿತ್ತು. ರೈಲಿನಿಂದ ಇಳಿದವರೇ ದೇವತೆಗಳು ಪೂರ್ವ ಪರಿಚಿ ತವಾದ ಧರ್ಮಶಾಲೆಗೆ ಹೋಗಿ ಆಯ್ಕೆ ಕಗಳನ್ನು ತೀರಿಸಿಕೊಂಡು, ಹೊಸಪೇಟೆಯಿಂದ ತಂದಿದ್ದ ಕಬ್ಬುಗಳನ್ನು ತಿಂದು ಮಲಗಿಕಂ ಡರು. ಮರುದಿನ ಬೆಳಿಗ್ಗೆ ಎದ್ದು* ಪ್ರಾತರ್ವಿಧಿಗಳನ್ನು ತೀರಿಸಿ ಕೊಂಡು ಊರೊಳಗೆ ನಡೆದರು ಆಗ ವರುಣನು ಬ್ರಹ್ಮನನ್ನು ಕುರಿತು:-ಅಜ್ಞಾ, ಗದಗು ಅರ್ವಾಚೀನ ಕಾಲದಲ್ಲಿ ರಾಜಕೀಯ-ಸಾಮಾಜಿಕ, ವ್ಯಾಪಾರೋ ದ್ರೋಗ ಮುಂತಾದವುಗಳಲ್ಲಿ ಪ್ರಸಿದ್ಧಿ ಪಡೆದಿರುವಂತೆ, ಐತಿಹಾಸಿಕ ಕಾಲದಲ್ಲಿಯ ಈ ಊರ ಮಹತ್ವವು ಹೆಚ್ಚಾಗಿದ್ದಿತು. ಇಲ್ಲಿ ಶ್ರೀ ತ್ರಿಕುಟೇಶ್ವರ, ಶ್ರೀ ವೀರನಾರಾಯಣ ವಂತಾದ ಪ್ರಾಚೀನಜಕಣಾಚಾರ್ಯರಿಂದ ಕಟ್ಟಲ್ಪಟ್ಟ-ದೇವಾಲಯಗಳು ಪ್ರಖ್ಯಾತ ವಾಗಿರುತ್ತವೆ.