ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೭ ದೇವತೆಗಳ ಆಗಮನ ಗಳವರ ಮಠವೂ ಇರುತ್ತದೆ. ಫಕೀರಸ್ವಾಮಿಗಳ ಮೂಲ ಕರ್ತೃವು ೩೦೦-೪೦೦ ವರ್ಷಗಳ ಮೊದಲು ಅಂದರೆ ವಿಜಾಪೂರದ ಆದಿಲ್ಕಾ ಹಿಯ ಕಾಲಕ್ಕೆ ಅವತಾರ ತಾಳಿದನು, ಆ ಮಹಾತ್ಮನ ಕೃಪೆಯಿಂದ ಆ ಫಕೀರಮಠದ ಗದ್ದು ಗೆಯ ಎಲ್ಲ ಹಿಡೆಯದೂ ಒಳ್ಳೇ ತೇಜಸ್ವಿಗ ೪ಾಗಿ ಮೆರೆಯುತ್ತಿರುವರು ಇಲ್ಲಿಂದ ಶಿರಹಟ್ಟಿಗೆ ಹೋಗುವಾಗ ದಾರಿಯಲ್ಲಿ ಬೆಳಧಡಿ ಎಂಬಲ್ಲಿ ಶ್ರೀ ಬ್ರಹ್ಮಾನಂದ ಸಾಧುಗಳಿಂದ ಸ್ಥಾಪಿಸಲ್ಪಟ್ಟ ಶ್ರೀ ರಾವ ದೇವಾಲಯವೂ, ಅಲ್ಲಿಂದ ಮುಂದೆ ಶುರ ದೂರದಲ್ಲಿ ಕಬ್ಬಲಗಿತ್ತಿಯ ಚಿನ್ನದ ಹಾಳುಖಣಿಯ ಹತ್ತುತ್ತಿದ್ದು, ಶಿರಹಟ್ಟಿಯ ಸಮೀಪಕ್ಕೆ ಶ್ರೀ ಬ್ರಹ ನಂದರಿಂದಲೇ ಸ್ಥಾಪಿಸಲ್ಪ ೬೦ಥ ವೆಂಕಟಾಪುರವೆಂಬ ಗ್ರಾಮದಲ್ಲಿ ಶ್ರೀ ವೇಂಕ ದೇಶಸ ಪ್ರಸಿದ್ಧ ದೇವಾಲಯವು ಇರುತ್ತದೆ. - "ಇಷ್ಟರಲ್ಲಿ ದೇವಗಣಗಳು ಆ ವಿಶಾಲವಾದ ಶ್ರೀ ತೋಟದ ದೇವರ ಮಠದಲ್ಲಿ ಪ್ರವೇಶಿಸಿದರು ಪ ಚಲಿತ ಜಾತಿಮತ್ಸರದ ನೆಳ ಲಿಗೆ ಕೂಡ ನಿಲ್ಲದ ಅಲ್ಲಿಯ ಆಗಿನ ಸತ್ವಸ್ಥ ಪೀಠಸ್ಥರು ನಮ್ಮ ದೇವ ಗಣಗಳನ್ನು ಭೇದಭಾವವಿಲ್ಲದೆ ಬರಮಾಡಿಕೊಂಡರು. ಇವರಾದರೂ ಆಪ-ಪರ ಭೇದವೆಣಿಸದೆ, ಅವರಲ್ಲಿ ಕೆಲವು ವೇಳೆ ವಿಶ್ರಮಿಸಿ, ನನಾ ನಂದವನ್ನುಂಟು ಮಾಡಿಕೊಂಡು ಪುನಃ ತಮ್ಮ ಗಂತವ್ಯಸ್ಥಳಕ್ಕೆ ನಡೆದರು. ನಂತರ ವರುಣನು ದೇವಗಣಗಳನ್ನು ಅಲ್ಲಿಯ ಮಹಾಲಕ್ಷ್ಮಿ ಗಿರಣಿಗೆ ಕರೆದೊಯ್ದ ನು, ಬ್ರಹ್ಮಾದಿಗಳು ಹತ್ತಿಯಿಂದ ನೂಲು, ನೂಲಿನಿಂದ ಅರಿವಯಾಗುವ ಆ ಪ್ರಚಂಡ ಕಾರಖಾನಯನೂ, ಅಲ್ಲಿ ದುಡಿಯುವ ಅಸಂಖ್ಯ ಹುಡುಗರು, ಹೆಂಗಸರು, ಗಂಡಸರು ಇವ ರನ್ನೂ ನೋಡಿ ಚಕಿತರಾದರು ನಂತರ ಅವರು ಸಮೀಪದಲ್ಲಿಯೇ ಇರುವ ನೂತನ ಥೇಅಟರ(ನಾಟಕಶಾಲೆ)ವನ್ನು ನೋಡಹೋದರು. ಆ ಸುಸಜ್ಜಿತ ನಾಟ್ಯ ಶಾಲೆಯನ್ನು ಕಂಡು, ದೇವರಾಜನಾದ ಇಂದ್ರ ನಿಗೆ ಹೇಗೆ ಹೇಗೂ ಅನಿಸಿತು. ತನ್ನ ಸಭೆಯಲ್ಲಿಯೂ ಅಪ್ಪರಾದಿ ಗಳ ನಾಟ್ಯವನ್ನು ಮಾಡಿಸಲಿಕ್ಕೆ ಇಂಥದೊಂದು ನೂತನ ಪದ್ಧತಿಯ ನಾಟ್ಯಶಾಲೆಯನ್ನು ಕಟ್ಟಿಸುವದಕ್ಕೆ ನಿಶ್ಚಯಿಸಿ, ಅವನು ಆ ಶಾಲೆಯ ಉದ್ದ ಅಗಲ-ಎತ್ತರ ಹಾಗು ಇತರ ಸೂಕ್ಷ್ಮ ವ್ಯವಸ್ಥೆಯನ್ನು ನಿರೀಕ್ಷಿಸಿದನು.