ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ಳ [ಕರ್ನಾಟಕಕ್ಕೆ ಬಳಿಕ ದೇವತೆಗಳು ಶಹಪೂರ ಪೇಟೆಯೊಳಗಿಂದ ಹಾದು ಸ್ನೇಶನ್ನಿನ ಕಡೆಗೆ ನಡೆದಿರಲು, ಅಲ್ಲಿ ಎಷ್ಟೋ ಜನ ಹಿಂದೂ ಬಾಲಬಾಲಕಿಯರು ವಿಚಿತ್ರ ವೇಷದಿಂದ ನಡೆದಿರುವದನ್ನು ಕಂಡರು. ಆಗ ಬ್ರಹ್ಮನು ವರುಣನಿಗೆ:-ವರುಣಾ, ಈ ಹುಡುಗರು ನಮ್ಮ ಹಿಂದುಗಳಂತೆ ತೋರಿದರೂ, ಅವರು ಹಾಕಿರುವ ಚಣ್ಣ, ಉಟ್ಟಿರುವ ಲುಂಗಿ ಇವುಗಳಿಂದಲೂ ತಲೆಗೆ ಹಾಕಿರುವ ಹೊಸ ಮಾದರಿಯ ಟೊಪ್ಪಿಗಗಳಿಂದಲೂ, ಇವರು ಮತಾಂತರ ತಾಳಿರುವಂತೆ ಕಾಣುವ ದಿಲ್ಲವೇ? ವರುಣ:-ಅಚ್ಯಾ, ನಿಮ್ಮ ಅನುಮಾನದಂತೆ ಇವರು ನಿಜ ವಾಗಿ ಕುಲಗೆಟ್ಟ ಪಾ೦ಗಳೇ, ಸನಾತನ ಧರ್ಮ ಹಾಸದ ಈ ಕಲಿಯುಗದಲ್ಲಿ ಬೌದ್ಧ, ಜೈನ ಹಾಗು ಮಹಮ್ಮದೀಯ ಧರ್ಮ ಗಳು ನಮ್ಮ ಹಿಂದೂ ಧರ್ಮವನ್ನು ಕೇವಲ ವಿರೋಧಭಕ್ತಿಯಿಂದ ಬೊಗ್ಗು ಬಡಿಯಲು ಪ್ರಯತ್ನಿಸಿ ಸಾವಿರಾರು ವರ್ಷಗಳಾದವು; ಆದರೆ ಆ ಧರ್ಮದವರಿಂದ ನಮ್ಮ ಧರ್ಮಕ್ಕೆ ಹಿ೦ದಾನೊಂದು ಕಾಲದಲ್ಲಿ ಕೆಲಕಾಲದ ವರೆಗೆ ಕುಂದು ಉಂಟಾಗಿತ್ತು ಮಾತ್ರ, ಈ ನೂತನ ಕ್ರಿಸ್ತ ಧರ್ಮದವರು ನಮ್ಮ ಧರ್ಮದವರ ಹೊಟ್ಟೆಯಲ್ಲಿ ಹೊಕ್ಕು ಬೆನ್ನಿನಲ್ಲಿ ಬಿರಿದು, ನಮ್ಮ ಜನಗಳನ್ನು ತಮ್ಮ ಜಾತಿಗೆ ಸೇರಿಸಿಕೊಳ್ಳುತ್ತಿರುವರು. ಈ * ಸ್ಟೇಶನ್ನಿನ ಬಳಿಯ ಬೆಟಗೇರಿ ಯಲ್ಲಿ ಕ್ರಿಸ್ತಿಧರ್ಮದ ಪ್ರಚಾರವು ಹೆಚ್ಚಾಗಿ ಆಗಿರುತ್ತದೆ

  • ಈ ಗದಗ ಪಟ್ಟಣವು ಈಗ ಕರ್ನಾಟಕ ಪ್ರಾಂತಿಕ ಕಾಂಗ ಸ್ಸಿನ ಮುಖ್ಯಸ್ಥಳವಾಗಿದ್ದು, ಇಲ್ಲಿ ಹಿಂದು ರಾಷ್ಟ್ರೀಯ ಶಾಲೆಯು ಸ್ಥಾಪಿಸಲ್ಪಟ್ಟಿರುವದು.
  • ಬಳಿಕ ದೇವಗಣಗಳು ಪುನಃ ತ್ರಿಕುಟೇಶ್ವರ ದೇವಾಲಯಕ್ಕೆ ಹೋಗಿ, ಪೂಜಾರಿಗಳಲ್ಲಿ ಆಯ್ಕೆ ಕ- ಊಟಗಳನ್ನು ತೀರಿಸಿಕೊಂಡು, ಅಲ್ಲಿಯೇ ಮಲಗಿ ರಾತ್ರಿಯನ್ನು ಕಳೆದರು; ಹಾಗು ಬೆಳಗಿನ ೪ ಗಂಟೆಯ ರೈಲಿನಲ್ಲಿ ಹಳ್ಳಿ ಹುಬ್ಬಳ್ಳಿಗೆ ನಡೆದರು. ಗಾಡಿಯು ಅಣ್ಣಿಗೇರಿಯ ಸ್ಟೇಶನ್ನಿನಲ್ಲಿ ಬಂದು ನಿಲ್ಲಲು, ಹಿಬ್ಬ ಗೃಹಸ್ಥನು ಲಗುಬಗೆಯಿಂದ ದೇವತೆಗಳು ಕುಳಿತ ಡಬ್ಬಿಗೆ ಬಂದನು. ಆಗ ವರುಣನು ಅವನನ್ನು ಕುರಿತು:- ನೀವು ಯಾವ ಊರವರು? ಎಲ್ಲಿಗೆ ನಡೆದಿರುವಿರಿ? ಎಂದು ಪ್ರಶ್ನೆ ಮಾಡಿದನು, ಆತನು--ನಮ್ಮ ಊರು