ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೩ada+ ದೇವತೆಗಳ ಆಗಮನ ೬೯ ಮುಂದೆ ಬರುವ-ಹೋಗುವ ಪ್ರಯಾಣಿಕರಿಗೆ ತನ್ನ ಆಗಮನದ ಸೂಚನೆಯನ್ನು ಕೊಡುತ್ತ ಮಂದಗತಿಯಿಂದ ಸಾಗಿತ್ತು, ಬೆಳಿಗ್ಗೆ ೧೦ ಗಂಟೆಗೆ ಹೊರಟ ಆ ತೈಲಶಕಟವು ಸಾಯಂಕಾಲದ ೫ ಗಂಟೆಗೆ ಗೋಕರ್ಣಕ್ಷೇತ್ರಕ್ಕೆ ತಲುಪಿತು. ದೇವತೆಗಳಿಗೆ ಅಂದು ಹ್ಯಾಗೂ ಏಕಾದಶಿಯ ಉಪವಾಸವಿದ್ದ ದರಿಂದ, ಭೋಜನ ಮುಂತಾದವು ಗಳಿಗೆ ನಡುದಾರಿಮ್ಮಲ್ಲಿ ಎಲ್ಲಿಯ ವಿಶೇಷವಾಗಿ ತಡೆಯುವ ಕಾರಣ ಬೀಳಲಿಲ್ಲ, ದೇವತೆಗಳು ಗೋಕರ್ಣ ಕ್ಷೇತ್ರದಲ್ಲಿ ಒಬ್ಬ ಸಾತ್ವಿಕ ಹವ್ಯಕ ಬ್ರಾಹ್ಮಣನಲ್ಲಿ ಉಳಿದರು ವರುಣನು ಕರ್ನಾಟಕದಲ್ಲೆಲ್ಲ ಸಂಚಾರ ಮಾಡಿ ಇಲ್ಲಿಯ ಭಾಷೆ ಹಾಗು ನಡಾವಳಿಗಳನ್ನು ಬಲ್ಲವ ನಾಗಿದ್ದರೂ, ಅವನಿಗೆ ಆ ಹವ್ಯಕ ಬ್ರಾಹ್ಮಣರ ಆರೆಗನ್ನಡ ಭಾಷೆಯ ವಿಚಿತ್ರ ನಡವಳಿಕೆಗಳೂ ಕ್ಷಣಹೊತ್ತು ಆಶ್ಚರ್ಯವನ್ನುಂಟುಮಾಡದೆ ಬಿಡಲಿಲ್ಲ. - ಸಾಯಂಕಾಲಕ್ಕೆ ಬ್ರಹ್ಮಾದಿಗಳನ್ನು ಕರಕೊಂಡು ಆ ಹವ್ಯಕ ಬಾಹ್ಮಣನ- ಪುರೋಹಿತನು-ಸದಾಶಿವನ ಧೂಲಿದರ್ಶನಕ್ಕಾಗಿ ಕರ್ಣೆಶ್ವರನ ಮಂದಿರಕ್ಕೆ ನಡೆದನು; ಆದರೆ ರಾಜಸಭೆ, ದೊಡ್ಡ ಮನುಷ್ಯರ ಭೇಟಿ ಮುಂತಾದ ಕಾರ್ಯಗಳಿಗೆ ಹೋಗುವಾಗ ಹ್ಯಾಗ ಕೆಲವು ಮಧ್ಯಸೃಜನರ ಶಿಫಾರಸು ಬೇಕಾಗುತ್ತದೆಯೋ, ಹಾಗೆ ಆ ಮಹೇಶ್ವರನ ದರ್ಶನ ಕಾಲಕ್ಕೂ ಮೊದಲು ಅಲ್ಲಿಯ ದ್ವಾರಸಮೀಪದಲ್ಲಿರುವ ಗಣಪತಿಯನ್ನು ಸಂದರ್ಶಿಸಿ ಖಾದ್ಯಕ್ಕಾಗಿ ಅವನಿಗೆ ಕೆಲವು ದುಡ್ಡು ಲಂಚ ಕೊಡಬೇಕಾಗುತ್ತದೆ. ಪುರೋಹಿ ತನು ಇವರನ್ನು ಗಣಪತಿಯ ದರ್ಶನಕ್ಕೆ ಪಶ್ಚಿಮದ್ವಾರದಿಂದ ಕರೆ ದೊಯ್ದು, ಉತ್ತರದಾರದಿಂದ ಹೊರಗೆ ಕರೆತಂದನು. ನಂತರ ಮಹೇಶನ ಧೂಲಿದರ್ಶನವಾಯಿತು ಮರುದಿನ ದೇವತೆಗಳು ಕ್ಷೇತ್ರೋಪವಾಸವನ್ನು ಮಾಡಿ, ಮಧ್ಯಾಹ್ನದಲ್ಲಿ ಸ್ನಾನಾನಂತರ ಮಹಾದೇವನ ದರ್ಶನಕ್ಕೆ ಹೊರ ಟರು ಆಗ ಅಂಬಿಕಾಧವನು ಊಟ ಮಾಡಿ ತುಸ ವಿಶ್ರಮಿಸಿದ್ದ ನು. ಮೈ ಡಾನಿಯು ಆತನ ಪಾದಸೇವೆಯನ್ನು ಮಾಡುತ್ತ ಕುಳಿತಿದ್ದ ಕು. ನಾರಾಯಣ- ಬ್ರಹ್ಮಾದಿಗಳನ್ನು ಕಂಡು ಅವಳು ಚಟಕ್ಕನೆ ಎದ್ದು ನಿಂತು, ಅವರನ್ನು ಒಳಗೆ ಬರಮಾಡಿಕೊಂಡು ಸಮೀಪದಲ್ಲಿಯೆ ಹಾಸಿಟ್ಟಿದ್ದ ಆಸನಗಳಲ್ಲಿ ಕೂರಲಿಕ್ಕೆ ವಿನಂತಿ ಮಾಡಿಕೊಂಡಳು.