ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ [ಕರ್ನಾಟಕಕ್ಕೆ ಬಂತು, ಅಲ್ಲಿ ನಿಲ್ಲದೆ ಒಂದು ಬಾಡಿಗ ಝಟಕಾ ಬಂಡಿಯನ್ನು ಗೊತ್ತು ಮಾಡಿಕೊಂಡು ಅಂದೇ ಅವರು ಆನಂದವನಕ್ಕೆ ಬಂದು ಬಿಟ್ಟರು. ಆನಂದನನ. -@e... ಆನಂದವನವು ಹಾವೇರಿಯಿಂದ ಪೂರ್ವಕ್ಕೆ ೫ ಮೈಲಿನಮೇಲೆ ಇರುತ್ತದೆ ಶ್ರೀ ಚಿದಂಬರನ ದ್ವಿತೀಯಾವತಾರಿಕರೆಂದು ಕರ್ನಾ ಟಕ-ಮಹಾರಾಷ್ಟ್ರ ಪ್ರಾಂತಗಳಲ್ಲಿ ಪ್ರಖ್ಯಾತರಾಗಿದ್ದ “ ಶ್ರೀ ಶೇಷಾಚಲ ಸಾಧುವರ್ಯರು ತಮ್ಮ ಅವತಾರ ಸಮಾಪ್ತಿಯ ಮೊದಲು ೧೨ ವರ್ಷಗಳಿಂದ ಈ ನೂತನ ಸ್ಥಾನದಲ್ಲಿದ್ದು, ತಮ್ಮ ಧರ್ಮರಕ್ಷಣೆಯನ್ನು ಮಾಡುತ್ತಿದ್ದರು. ಇದು ಮೊದಲು ಸ್ಮಶಾನೆ ದಂಥ ಭಯಾನಕ ಸ್ಥಾನವಾಗಿದ್ದು , ಕಕ್ರರ ಕಾಕರ ಭಯವು ಇಲ್ಲಿ ವಿಶೇಷವಾಗಿದ್ದಿ ತು; ಆದರೆ ಸಾಧುವರ್ಯರು ಇಲ್ಲಿ ವಾಸ ಮಾಡ ಹತ್ತಿದಂದಿನಿಂದ ಆ ಘೋರಾರಣ್ಯವು ಆನಂದವನವಾಗಿ ಜನರ ಚಿತ್ತ ಗಳನ್ನು ಪ್ರಸನ್ನ ಗೊಳಿಸಲಾರಂಭಿಸಿತು. ದೇವತೆಗಳು ಬಂದೊಡನೆಯೆ ಆನಂದವನ ಸೇವಕರು ಅವ ರನ್ನು ಆದರದಿಂದ ಬರಮಾಡಿಕೊಂಡರು; ಹಾಗು ಅವರ ಆಹಿಕ ಭೋಜನಗಳ ಸಿದ್ಧತೆ ಮಾಡಿದರು ಭೋಜನೋತ್ತರ ದೇವತೆ ಗಳು ಆನಂದವನದ ಪ್ರಶಸ್ತವಾದ ಚಂದ್ರಶಾಲೆಯಲ್ಲಿ ಪವಡಿಸಿದರು. ಇಡಿ ದಿವಸ ಪ್ರವಾಸ ಮಾಡಿ ಬಂದುದರಿಂದ ಆಗ ಅವರಿಗೆ ನಿದಾ ದೇವಿಯ ಹೊರತು ಮತ್ಯಾವ ವಸ್ತಗಳೂ ಪ್ರಿಯಕರವಾಗಲಿಲ್ಲ ಆನಂದವನದಲ್ಲಿ ಬೆಳಗಿನ ಜಾವೆದ ೪ ಗಂಟೆಗೆ ವಾಡಿಕೆಯಂತೆ ಏಳುವ ಗಂಟೆಯಾಯಿತು, ಕರ್ನಾಟಕಕ್ಕೆ ಬಂದಾಗಿನಿಂದ ವಿಶೇಷ ವಾಗಿ ರೈಲುಪ್ರವಾಸ ಮಾಡಿದ ಹಾಗು ರೈಲಿನಗಂಟೆ ಕೇಳಿದ್ದ ಬ್ರಹ್ಮ ನಿಗೆ ನಸಕಿನಲ್ಲಿಯ ಆನಂದವನದ ಆ ಗಂಟೆಯ ಸಪ್ಪಳವನ್ನು ಕೇಳಿ, ತಾವು ಯಾವುದೋ ಒಂದು ರೇಲ್ವೆಯ ಸ್ಟೇಶನ್ನಿ ನಲ್ಲಿದ್ದು, ತಾವು ಹೊರಡುವ ಗಾಡಿ ಬಂತೆಂದು ತಿಳಿದು, ಸಂಗಡಿಗರನ್ನು ಲಗುಬಗೆ ಯಿಂದ ಎಬ್ಬಿಸತೊಡಗಿದನು. ನಾರಾಯಣನಿಗೆ ಬ್ರಹ್ಮನ ಆ ಚಟು ವಟಿಕೆಯನ್ನು ನೋಡಿ ನಗುವು ಬಂದಿತು. ಎಷ್ಟು ಕೂಗಿದರೂ