ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ 4 10 ಸಂಗಡಿಗರಲ್ಲಿ ಯಾರೂ ಏಳದ್ಧ ನ್ನು ಕಂಡು ಹಾಗು ಸಮೀಪದಲ್ಲಿಯೇ ಎಷ್ಟೋ ಜನ ವಿದ್ಯಾರ್ಥಿಗಳು ವೇದಪಾಠ ಮಾಡುವದನ್ನು ಕೇಳಿ ಬ್ರಹ್ಮನ ಭ್ರಾಂತಿಯು ನಿವಾರಣವಾಯಿತು.

  • ಬಳಿಕ ಬ್ರಹ್ಮಾದಿಗಳು ಎದ್ದು ಮುಖಮಾರ್ಜನಾದಿಗಳನ್ನು ತೀರಿಸಿ, ಸ್ನಾನ, ಅಗ್ನಿಕಗಳನ್ನು ಮಾಡಲಾರಂಭಿಸಿದರು. ಅಷ್ಟರಲ್ಲಿ ಬೆಳಗಿನ ಆರು ಗಂಟೆಯಾಗಲು, ಶ್ರೀ ಶೇಷಾಚಲೇಶ್ವರನ ಆರತಿಯ ಗಂಟೆಯಾಯಿತು, ಕೂಡಲೆ ಎಲ್ಲ ವಿದ್ಯಾರ್ಥಿಗಳೂ, ಆನಂದವನ ಸ್ಥರಾದ ಬಹುತರ ಎಲ್ಲ ಸ್ತ್ರೀ ಪುರುಷರೂ 11 ಸಿಂಹಾಸನ ಮನೆ ಯೆಂಬ ದೇವಮಂದಿರದಲ್ಲಿ ಸೇರಿ, ಆರತಿ, ಪ್ರಾತಃಕಾಲದ ಸ್ತುತಿಸೂತ್ರಗಳನ್ನು ಅಂದರು. ತದನಂತರ ವಿದ್ಯಾರ್ಥಿಗಳ ಪ್ರವಚನವೇದಘೋಷಗಳಾದವು. ಸ್ವರ್ಗವನ್ನು ಬಿಟ್ಟಾಗಿನಿಂದ ಕರ್ನಾಟ ಕದ ಯಾವ ಭಾಗದಲ್ಲಿಯೂ ಬ್ರಹ್ಮ ನಿಗೆ ಈ ಪರಿ ಸುಶ್ರಾವ್ಯವಾದ ವೇದಘAಷವು ಕೇಳಿಸಿದ್ದಿಲ್ಲ. ಅದರಿಂದ ಆಗ ಅವನಿಗೆ ಪರಮಾ ನಂದವಾಯಿತು. ದೇವತೆಗಳ ಆಯ್ಕೆ ಕವಾದನಂತರ ಅವರು ಆನಂ ದವನದಲ್ಲಿ ಅಡ್ಡಾಡಿ ಪ್ರತಿಯೊಂದು ಭಾಗವನ್ನು ಚೆನ್ನಾಗಿ ನಿರೀಕ್ಷಿ ಸಿದರು.” ನಂತರೆ ಮಹಾದ್ವಾರದ ಪ್ರಶಸ್ತವಾದ ಕಟ್ಟೆಯ ಮೇಲೆ ಕುಳಿತು, ವರುಣನಿಂದ ಆನಂದವನವನ್ನು ಸ್ಥಾಪಿಸಿದ ಶ್ರೀಶೇಷಾ ಚಲಸಾಧುಗಳ ಪುಣ್ಯಕರ ಜನ್ಮ ವೃತ್ತಾಂತವನ್ನೂ, ಅವರ ತಪಶ್ಚ ರ್ಯವನ್ನೂ, ಅವರ ಶಿಷ್ಯರ ಪ್ರಭಾವವನ್ನೂ ಅವರು ಸ್ಥಾಪಿಸಿದ ಶ್ರೀ ಶೇಷಾಚಲ ವೇದಶಾಲೆ, ಶ್ರೀ ಶೇಷಾಚಲ ವದಾಶಾಲೆ, ಶ್ರೀ ಶೇಷಾ ಚಲ ಸದ್ರೋಧ ಚಂದ್ರಿ, ಕೆ ಎಂಬ ಮಾಸಪತ್ರಿಕೆ ಮುಂತಾದವುಗಳ ಸಂಗತಿಗಳನ್ನೂ ತಿಳಿದರಲ್ಲದೆ, ಶ್ರೀಶೇಷಾಚಲಸಾಧುಗಳ ಅವತಾರ ಸಮಾಪ್ತಿಯ ನಂತರ ಅವರ ಈ ಆನಂದವನದ ವ್ಯವಸ್ಥೆಯು ಹೇಗೆ ಉತ್ಕರ್ಷಹೊಂದುತ್ತಿರುವದೆಂಬದನ್ನೂ ಕಣ್ಣಾರೆ ಕಂಡರು
  • ನಮ್ಮ ದೇವತೆಗಳು ಆನಂದವನವು ಪುಣ್ಯಪ್ರದಸ್ಥಳವೆಂದು ತಿಳಿದು, ಅಲ್ಲಿ ಮೂರು ದಿನಗಳ ವರೆಗೆ ವಾಸ ಮಾಡಿದ್ದರು. ಆ ಅವಧಿಯಲ್ಲಿ ಅವರು ಶ್ರೀ ಶೇಷಾಚಲ ಸಾಧುಗಳ ಜನ್ಮ ಸ್ಥಾನವನ್ನೂ, ಅಗಡಿಯ ಬಳಿಯ ಗವಿಮಠದ ಸಿದ್ದೇಶ್ವರ ಸ್ವಾಮಿಗಳ ಜಾಗೃತ ಸ್ಥಾನವನ್ನೂ ಸಂದರ್ಶಿಸಿ ಬಂದರಲ್ಲದೆ, ಒಂದು ದಿನ ಸಮೀಪದ ವರದಾತೀರಕ್ಕೆ ಹೋಗಿ ಸ್ನಾನ-ತರ್ಪಣಗಳನ್ನು ಮಾಡಿ, ನದಿಯ