ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ [ಕರ್ನಾಟಕಕ್ಕೆ ಹೀಗೆ ದೇವಗಣಗಳು ಅತ್ತಿತಣದ ಹರಟೆಯಲ್ಲಿ ಬೆಳಗಿನ 411 ಗಂಟೆಯ ವರೆಗೆ ಕಾಲ ಕಳೆಯಲು, ಪುಣೆಯ ಕಡೆಗೆ ಹೋಗುವ ಮೇಲ್ ಟ್ರೇನು ಬಂದಿತು. ಅದು ಬಂದು ಹೋದ ಕೂಡಲೆ ದೇವ ಗಣಗಳು ಶಿವಮೊಗ್ಗ ಯ ಕಡೆಗೆ ಹೋಗುವ ರೈಲನ್ನು ಆರೋಹಿಸಿ ದರು ಮುಂದೆ ಹತ್ತು ನಿಮಿಷಗಳ ತರುವಾಯ ಆ ಟೀನು ಮಂದ ಗತಿಯಿಂದ ಸಾಗಿತು, ಆ ಗಾಡಿ ಯು ೫ ಗಂಟೆಯ ಸಮಯಕ್ಕೆ ತರೀಕೇರಿಯ ಸ್ಟೇಶನ್ನಿಗೆ ಬಂದು ಸೇರಿತು ಅಲ್ಲಿ ಸಮೀಪದಲ್ಲಿ ಕಾಣುತ್ತಿದ್ದ ಚಿಕ್ಕ ಚಿಕ್ಕ ರೈಲ್ಡಬ್ಬಿಗಳನ್ನು ಕಂಡು ಬ್ರಹ್ಮನು:- ವರುಣಾ, ಇವೇನು? ಹುಡುಗರ ಆ ಟದೊಳಗಿನ ರೈಲ್ಡಬ್ಬಿಗಳಾಗಿ ತೋರುವವಲ್ಲ? ಈ ಚಿಕ್ಕ ರೈಲು ಎಲ್ಲಿಯ ವರೆಗೆ ಹೋಗುವದು? ಎಂದು ಪ್ರಶ್ನೆ ಮಾಡಿದನು. - ಆಗ ವರುಣನು:- ಈ ಚಿಕ್ಕ ರೈಲಿಗೆ ಟ್ರಾವವೇ ಅನ್ನು ವರು, ಈ ಟಾಮವೇ ಬಂಡಿಯು ತರೀಕೆರೆಯಿಂದ ನರಸಿಂಹರಾಜ ಪುರದ ವರೆಗೆ ಹೋಗುವದು ಆ ಇಪ್ಪತ್ತಾರು-ಇಪ್ಪತ್ತೇಳು ಮೈಲು ದಾರಿ ಹೋಗಲಿಕ್ಕೆ ಇದಕ್ಕೆ ಸಮಗ್ರ ನಾಲ್ಕು ತಾಸುಗಳು ಹಿಡಿಯು ತವೆ. ಈ ಟಾಮವೇ ಕಂಪನಿಗೆ ಪ್ರಯಾಣಿಕರ ಉತ್ಪನ್ನಕ್ಕಿಂತ ಸಾಗವಾನಿ ಮುಂಡಿಗೆಗಳ ಬಾಡಿಗೆಯೇ ಹೆಚ್ಚು ಬರುತ್ತಿರುತ್ತದೆ. ದೇವಗಣಗಳು ಕುಳಿತ ರೈಲು ತರೀಕೆರೆಯಿಂದ ಹೊರಟು, ಬೆಂಕಿಪುರ( ಭದ್ರಾವತಿಯು)ದ ಬಳಿಗೆ ಬಂದಿತು. ಅವರಲ್ಲಿ ನಿಚ4 ವಾಗಿ ಬೆಳಗಾಯಿತು. ಸ್ಟೇಶನ್ನದ ಆಚೆಮಗ್ಗಲಿರುವ ಕಾರಖಾನೆ ಯನ್ನೂ, ಅದರ ಪಕ್ಕದಲ್ಲಿರುವ ಹೊಸ ಊರನ್ನೂ, ಖಣಿಗಳನ್ನೂ ನೋಡಿ ಬ್ರಹ್ಮನು "ಇದೇನೆಂದು ಕೇಳಿದನು, “ಇಲ್ಲಿ ಉತ್ಕೃಷ್ಟ ವಾದ ಕಬ್ಬಿಣ ಕಣಿಗಳಿರುತ್ತವೆ ಮೈಸೂರಲ್ಲಿ ಮಾಜಿ ದಿವಾಣ ರಾಗಿದ್ದ ಸರ ವಿಶ್ವೇಶ್ವರಯ್ಯರೆಂಬ ಕುಶಾಗ್ರಬುದ್ದಿ ಯವರು ಈ ಪ್ರದೇಶವನ್ನು ಕಂಡು, ಇಲ್ಲಿಯೊಂದು ಕಬ್ಬಿಣ ತೆಗೆಯುವ ಕಾರಖಾ ನೆಯನ್ನಿಟ್ಟರೆ ಸಂಸ್ಥಾನದ ಉತ್ಪನ್ನವು ಬೆಳೆಯುವದಲ್ಲದೆ, ಸಂಸ್ಕಾ ನದ ಪ್ರಜೆಗಳಲ್ಲಿಯ '೧೦-೮ ಸಹಸ್ರ ಜನರಿಗೆ ಉದ್ಯೋಗವೂ ಹತ್ತು ವದು, ಅದರಿಂದ ಇಲ್ಲಿಯೊಂದು ಕಾರಖಾನೆಯನ್ನು ತೆಗೆಯಬೇ ಕಂದು ಯೋಚಿಸಿ, ಸಂಸ್ಥಾನದ ಖರ್ಚಿನಿಂದ ಈ ಬೆಂಕಿಪುರ ರೇಲ್ವೆ ಸ್ಟೇಶನ್ನಿನ ಬಳಿಯಲ್ಲಿ ಕಬ್ಬಿಣ ತೆಗೆಯುವ ಕಾರಖಾನೆಯನ್ನು