ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವತೆಗಳ ಆಗಮನ. ಆ ಪ್ರಾರಂಭಿಸಿದರು, ಬೆಂಕಿಪುರವು ಸಾಮಾನ್ಯ ಹಳ್ಳಿಯ ಹೊಸದಾಗಿ ಬಂದ ಸಾವಿರಾರು ಹೊಸ ಕುಟುಂಬಗಳಿಗೆ ಊರಲ್ಲಿರಲು ಸ್ಥಳವಲ್ಲಿ ದೊರೆಯಬೇಕು? ಆಗ ಸಂಸ್ಥಾನದವರೇ ಈ ಹೊಸನಗರವನು ಕಟ್ಟಿಸಿದರು; ಹಾಗು ಸಮೀಪದಲ್ಲಿಯೇ ಹರಿಯುವ ಭದ್ರಾವತಿ ಹಳೆಯ ಹೆಸರನ್ನು ಈ ಊರಿಗೆ ಇಟ್ಟಿರುವರು' ಎಂದು ವರ ಣನು ಹೇಳುತ್ತಿರಲು, ಆ ರೈಲು ಶಿವಮೊಗ್ಗೆಯ ಸ್ಟೇಶನ್ನಿಗೆ ಬಂದು ತಲುಪಿತು. ಶಿವಮೊಗ್ಗೆ. ಆಗ ಸರಾಸರಿ ೭ ಗಂಟೆಯ ಸಮಯವಾದ್ದರಿಂದ ದೇವಗಣಗಳು ಊರೊಳಗೆ ಹೋಗುವ ಎತ್ತುಗಡೆ ಮಾಡದೆ ರೇಲ್ವೆ ಸ್ಟೇಶನ್ನಿನ ಬಳಿಯಲ್ಲಿಯ ಶ್ರೀ ಅರ್ಕಶ್ವರನ ಮಂದಿರದಲ್ಲಿಳಿದು, ಪಾತಃಕೃತ್ಯ ಗಳನ್ನೂ, ಸ್ನಾನ-ಆಯ್ಕೆ ಕಗಳನ್ನೂ ತೀರಿಸಿಕೊಂಡರು; ಹಾಗು ಅಲ್ಲಿಯ ಭಾವಿಕ ಅರ್ಚಕನಲ್ಲಿಯೆ ಅಂದಿನ ಮಧ್ಯಾಹ್ನವನ್ನು ತೀರಿ ಸಿಕೊಂಡರು. ಭಜನಾನಂತರ ದೇವಗಣಗಳು ತುಂಗಾನದಿಯು ಆಚೆಯ ಪಕ್ಕದಲ್ಲಿ ವಿಸ್ತಾರವಾಗಿ ಹಬ್ಬಿರುವ ಶಿವಮೊಗ್ಗೆಯ ಪಟ್ಟಿ ಣವನ್ನು ನಿರೀಕ್ಷಿಸಹೊದರು ಉತ್ತರ ಮೈಸೂರ ಪ್ರಾಂತದಲ್ಲಿ ಸರಾಸರಿ ಡಾವಣಗೇರಿಯಷ್ಟೇ ಜನಸಂಖ್ಯೆಯುಳ್ಳ ಶಿವಮೊಗ್ಗ ಯ ಊರು ಅಷ್ಟೊಂದು ಪ್ರೇಕ್ಷಣೀಯವಲ್ಲ ಇಲ್ಲಿಯ ದೊಡ್ಡ ಬ್ರಾಹ್ಮ ಣರ ಕೇರಿ, ಚಿಕ್ಕ ಬ್ರಾಹ್ಮಣರ ಕೇರಿ, ಮಂಡಿ, ಕೂರ್ಪಾಲಿಯಂ ಛತ್ರ, ಹಾಯಸ್ಕೂಲ, ಡಿಸ್ನಿ ಕೋರ್ಟ, ಸಿನ್ಸಿಲ್‌ ಆಸ್ಪ, ಪೋಪ್ಪ ಮತ್ತು ತಾರ ಆಫೀಸ ಮುಂತಾದವುಗಳನ್ನು ನೋಡಿ, ಸಂಜೆಗೆ ದೇವತೆಗಳು ಪುನಃ ಶ್ರೀ ಅರ್ಕಶ್ವರನ ದೇವಾಲಯಕ್ಕೆ ಬಂದರು, ಅವರು ಮರುದಿನ ತೀರ್ಥಹಳ್ಳಿಯ ಮಾರ್ಗವಾಗಿ ಶ್ರೀ ಶೃಂಗೇರಿಗೆ ಹೋಗುವದನ್ನು ಗೊತ್ತು ಮಾಡಿಕೊಂಡರು. ಶೃಂಗೇರಿ. ಶಿವಮೊಗ್ಗೆಯಿಂದ ಹೊರಟ ದೇವತೆಗಳು ಮಾರ್ಗದಲ್ಲಿ ಹತ್ತುವ ತೀರ್ಥಹಳ್ಳಿಯೆಂಬ ಪ್ರಾಚೀನ ಕ್ಷೇತ್ರವನ್ನು ಕಂಡು, ಆ ದಿನ