ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಲಿ ದೇವತೆಗಳ ಆಗಮನ ಸ್ವರ್ಗದಲ್ಲಾಗಲಿ, ವೈಕುಂಠದಲ್ಲಾಗಲಿ ಇಂಥ ಅನ್ನದ ರಾಶಿಯನ್ನು ಅವರು ಕಂಡೇ ಇರಲಿಲ್ಲ ಇರಲಿ, ಊಟಕ್ಕೆ ಕೂಡುವಾಗ ಸ್ತ್ರೀಪುರು ಷರು ಬೇರೆ ಬೇರೆ ಪಂಗಿಗಳಲ್ಲಿ ಕುಳಿತುಕೊಳ್ಳದೆ ಹಿಂದೇ ಸಾಲಿನಲ್ಲಿ ಕಡುವದನ್ನು ನೋಡಿ ನಾರಾಯಣನಿಗೆ ಅಸಮಾಧಾನವಾಯಿತು ದೇವತೆಗಳ ನಡ ನಡುವೆ ಸ್ಥಳವುಳಿದಲ್ಲಿ ಹೆಂಗಸರು ಬಂದು ಕೂಡ್ರಲು. ಮಡಿವಂತನದ ಬ್ರಹ್ಮನು ಚಚಸಸಹತ್ತಿದನು; ಆದರೆ ಮಾಡು ತಾನೇನು? ಬೇರೆ ಕಡೆಗೆ ಸ್ಥಳವಿದ್ದಿಲ್ಲ; ಅಲ್ಲಿಯೇ ಹಾಗಾದರೂ ಮಾಡಿ ಉಂಡೆದ್ದ ನು ಕೃಷ್ಣ ಪರಮಾತ್ಮನ ಸ್ಥಳದಲ್ಲಿ ಹೆಚ ಕಡಿವು ನೋಡಬಾರದೆಂದು ವರುಣನು ಹೇಳುತ್ತಿದ್ದನು, ಸಂಜೆಯ ಮುಂದೆ ದಿನಾಲು ರಥೋತ್ಸವವಾಗುವದು. ಆಗ ಮದ್ಧ ನ್ನು ಸುಡುವರು. ಆ ಮದ್ದಿ ನ ಚಮತ್ಕಾರವನ್ನು ನೋಡಿ ಇಂದ್ರನು ಸ್ವರ್ಗದಲ್ಲಿ ಹೀಗೆಯೇ ಮದ್ದು ಸುಡಬೇಕೆಂದು ಅಂದನು. - ಅನಂತೇಶ್ವರ, ಚಂದ್ರಮೌಳೇಶ್ವರ, ಹಿಡಬಂಡೇಶ್ವರ ಮೊದ ಲಾದ ದೇವಸ್ಥಾನಗಳನ್ನು ದೇವತೆಗಳು ನೋಡಿದರು ಈ ಸುಪ್ರಸಿದ್ಧ ಶೈವ ದೇವಾಲಯಗಳಲ್ಲಿಯೇ ಶ್ರೀಮನ್ ಮಧ್ಯಾಚಾರ್ಯರವರು ಅನುಷ್ಠಾನ ಮಾಡಿದರೆಂದು ವರುಣನು ಹೇಳಿದನು. ಈಗಲೂ ಆ ಎಂಟು ಮಠದ ಶ್ರೀಗಳವರು ದಿನಾಲು ಈ ದೇವಾಲಯಗಳಿಗೆ ಹೋಗಿ ಶಿವದರ್ಶನವನ್ನು ಹೊಂದುತ್ತಿರುವರು. ಉಡುಪಿಯು ಎನ್ನು ಪವಿತ್ರ ಸ್ಥಳವೆಂಬದನ್ನು ಪಾಚೀನ ಪುರಾಣಗಳ ಆಧಾರ ದಿಂದ ವರುಣನು ನಾರಾಯಣಾದಿಗಳಿಗೆ ಸಿದ್ಧ ಮಾಡಿ ತೋರಿಸಿದನು. ಈ ಪವಿತ್ರ ಸ್ಥಳದಲ್ಲಿ ದೇವತೆಗಳು ೧೫ ದಿವಸಗಳವರೆಗೆ ಇದ್ದು, ಪರ್ಯಾಯವನ್ನು ತೀರಿಸಿಕೊಂಡು ಮುಂದೆ ಪ್ರಯಾಣ ಬೆಳಿಸಿದರು. ತಲೆಕಾವೇರಿ. ಉಡುಪಿಯ ಕ್ಷೇತ್ರದಿಂದ ಕಾವೇರಿ ಹೊಳೆಯ ಉಗಮವು ೪೦-೫೦ ಮೈಲುಗಳಾಗಬಹುದು, ದೇವಗಣಗಳು ಉಡುಪಿಯಿಂದ ಮಡಿಕೇರಿಯ ಕಡೆಗೆ ಹೋಗುವ ಮೋಟಾರನ್ನು ಆರೋಹಿಸಿ ಕಾವೇರೀ ಉಗಮಕ್ಕ (ತಲಕಾವೇರಿಗೆ) ನಡೆದರು. ಅಲ್ಲಿಯ ಘಟ್ಟಗಳ ಏರಿಳಿತದ ಹಾಗು ಹಿಡ್ಕು ಮುರಿಯ ಮಾರ್ಗದಲ್ಲಿ ಮೋಟಾರ