ಪುಟ:ಕರ್ನಾಟಕಕ್ಕೆ ದೇವತೆಗಳ ಆಗಮನ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ದೇವತೆಗಳ ಆಗಮನ? ଟ୍ ಬಂದ ಈ ಹಾರುವರು (ವೇಷಾಂತರ ತಾಳಿದ ದೇವತೆಗಳು) ಬೆಕ್ಕು ಹಾರದಷ್ಟು ಅನ್ನವನ್ನುಣ್ಣ ಬಹುದೆಂದು ಆ ಮನೆಯವಳು ಎಷ್ಟೊಂದು ಅನ್ನವನ್ನೂ ಎಷ್ಟೋ ತಂಹದ ಸಾಸುವ, ಗೊಜ್ಜು, ಪಲ್ಲೆ ಗಳನ್ನೂ ಮಾಡಿದ್ದಳು; ಆದರೆ ಇವರಲ್ಲಿಯ ಯಾರಿಗೂ ಆ ನಾಡಿನ ಊಟವು ಸೇರದ್ದರಿಂದ ಇವರು ಯಥಾ ಯಥಾ ಉಂಡು ಹೊರಬಿದ್ದ ರು. ಮರುದಿನ ಬೆಳಿಗ್ಗೆ ಬೆಟ್ಟವನ್ನು ಹತ್ತಿ ತಲಕಾವೇರಿಯ ಕೆ ತಕೆ ಹೋಗಿ, ಅಲಿಯ ಕಾವೇರಿಯ ಉಗಮದ ಹಿಂದು ಮೊಳ ಚಚ್ಾಕಾದ ಪುಟ್ಟ ಕುಂಡವನ್ನೂ ಬಳಿಯಲ್ಲಿಯೇ ಇರುವ ಆಗಸ್ಯ. ಋಷಿಗಳ ಆಶ್ರಮವನ್ನೂ ಸಪ್ತಗಿರಿಗಳನ್ನೂ ಕಂಡು ಅಲ್ಲಿ ಸ್ನಾನಾಕ್ಕೆ ಕಗಳನ್ನೂ ಕ್ಷೇತ್ರವಿಧಿಯನ ಮಾಡಿದರು. ನಂತರ ಕಾವೇರಿಯು ಅಗರ ಆಜ್ಞಾ ಭಂಗಮಾಡಿ ಅಲ್ಲಿಂದ ಹೊರಟಿದ್ದ ನ್ಯೂ, ಅವರ ಹೆದರಿಕೆಗಾಗಿ ಬಾಗುಮಂಡಲದವರೆಗೆ ಗುಪ್ತವಾಗಿ ಬಂದುದನ್ನೂ, ಬಾಗುಮಂಡಲದ ಬಳಿಯಲ್ಲಿ ಋಷಿಗಳು ತನ್ನನ್ನು ಬೆನ್ನಟ್ಟಿ ಬರುವ ರೇನೆಂದು ಇವಳು ಬಾಗಿ ನೋಡುವದರ ರಹಸ್ಯವನ್ನೂ ವರುಣನು ದೇವತೆಗಳಿಗೆ ಸಾದ್ಯಂತವಾಗಿ ತಿಳಿಸಿದನಲ್ಲದೆ, ಆ ಋಷಿಗಳ ಶಾಪ ದಿಂದಲೇ ಇವಳನ್ನು ಮುಂದೆ ಅಲ್ಲಲ್ಲಿ ಕಟ್ಟಿ ಬಂಧಿಸಿ ವಿಡಂಬನೆ ಮಾಡುತ್ತಿರುವರೆಂದು ಹೇಳಿದನು ದೇವತೆಗಳು ಆ ತಲೆಕಾವೇರಿ ಕ್ಷೇತ್ರದಲ್ಲಿ ತ್ರಿರಾತ್ರಗಳವರೆಗೆ ಆದ್ದು ನಾಲ್ಕನೇ ದಿನ ಮಡಿಕೇರಿ ಎಂಬ ಕೂರ್ಗದೇಶದ ಮುಖ್ಯ ಪಟ್ಟಣಕ್ಕೆ ಸಾಗಿದರು. ಹೋಗುವಾಗ ಬ್ರಹ್ಮನು ಕಾವೇರಿಗೆ:- ಅಮ್ಮಾ, ನಾನು ಈ ಕರ್ಣಾಟಕಕ್ಕೆ ಬಂದು ನಿನ್ನೆ ದುಃಖ ನಿವಾರಣ ಮಾಡುವ ಪ್ರಯತ್ನ ಮಾಡದೆ ಹಾಗೆಯೇ ಹೋಗುವದಿಲ್ಲ ನಿನ್ನನ್ನು ದಾರಿಯಲ್ಲಿ ಎಲ್ಲೆಲ್ಲಿ ಬಂಧಿಸಿರುವರೋ ಅದನ್ನೆಲ್ಲ ಕಣ್ಣು ನೋಡಿ, ಆ ಬಂಧನದಿಂದ ನಿನ್ನನ್ನು ಮುಕ್ತ ಮಾಡುವ ಆಲೋಚನೆ ಮಾಡು ತೇನೆ, ಎಂದು ಹೇಳಿದನು ಮಡಿಕೇರಿ. ತಲಕಾವೇರಿಯಿಂದ ಮಡಿಕೇರಿಯು ೨೪ ಮೈಲುಗಳಾಗಬಹುದು. ಆ ದೀರ್ಘದಾರಿಯನ್ನು ದೇವಗಣಗಳು ನಡೆದೇ ಬರಬೇಕಾಯಿತು.