ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುನ್ನುಡಿ ಒಂದು ರಾಷ್ಟ್ರದ ಪ್ರಗತಿಯನ್ನಳೆಯುವ ಮಾನದಂಡ ಕೇವಲ ಅದರ ರಾಜಕೀಯ, ಆರ್ಥಿಕೋನ್ನತಿಯಲ್ಲ. ರಾಷ್ಟ್ರದಲ್ಲಿ ಕಲೆ, ಸಾಹಿತ್ಯ ಯಾವ ಮ ಟ್ಟ ದಲ್ಲಿ ದೆ ಯ ನ್ನು ವು ದ ನ್ನು ನೋಡಿದರೆ ರಾಷ್ಟ್ರದ ಸಂಸ್ಕೃತಿಯ ಮಟ್ಟ ದರಿವಾಗುತ್ತದೆ. ಜನತೆಗಿರುವ ಸಾಹಿತ್ಯ, ಕಲಾಭಿರುಚಿಯ ರೀತಿ, ನೀತಿ ರಾಷ್ಟಜೀವನದ ಸತ್ಯ ಚಿತ್ರವಾಗಿರುತ್ತದೆ. ನಮ್ಮ ಎಲ್ಲ ಸಮಸ್ಯೆಗಳು, ಕಷ್ಟಗಳು, ಸೋಲುಗಳಿಗೂ ಪಾರತಂತ್ರವೇ ಕಾರಣವೆಂದು ನಾವು ದೃಢವಾಗಿ ನಂಬಿದ್ದೆವು. ಬ್ರಿಟಿಷರು ಭಾರತ ಬಿಟ್ಟು ತೊಲಗಿದಕೂಡಲೆ ನಮ್ಮ ಜೀವನಕ್ಕೆ ನವಚೇತನ ಬಂದು ಎಲ್ಲ ರಂಗಗಳಲ್ಲಿಯೂ ನಾವು ತಲೆಯೆತ್ತಿ ನಿಲ್ಲುತ್ತೇವೆಂಬ ಕನಸು ನಮ್ಮನ್ನು ಆವರಿಸಿತ್ತು. ಬ್ರಿಟಿಷರು ಭಾರತ ಬಿಟ್ಟು ತೊಲಗಿ ಐದು ವರ್ಷಗಳಾದವು. ನಮ್ಮ ರಾಷ್ಟಜೀವನ ಸುಧಾರಿಸದಿರುವುದು ಮಾತ್ರವೇ ಅಲ್ಲ, ಅದು ಮತ್ತಷ್ಟು ಅಧೋಗತಿಗಿಳಿದಿದೆ. ನಮ್ಮ ರಾಷ್ಟಜೀವನದ ಅವನತಿ ಬ್ರಿಟಿಷರಿಂದ ಆರಂಭವಾಗಲಿಲ್ಲ. ಅವರು ಬರುವುದಕ್ಕೆ ಬಹಳ ವರ್ಷ ಮುಂಚಿನಿಂದಲೂ ಅದು ಸಾವು-ಬದುಕುಗಳ ಮಧ್ಯೆ ತೂಗಾಡುತ್ತಿತ್ತು. ಭಾರತೀಯ ರಾಷ್ಟ್ರಜೀವನವೆಂಬ ತಡಿಕೆಗೆ ಗೆದ್ದಲು ಹತ್ತಿತ್ತು. ಬ್ರಿಟಿಷರು ಬಂದು ಕೊನೆಯ ಆಘಾತವನ್ನು ದಯಪಾಲಿಸಿ ಆ ತಡಿಕೆಯನ್ನು ಉರುಳಿಸಿದರು. ನಮ್ಮ ರಾಷ್ಟ್ರಜೀವನ ಅಪಗತಿ ಹೊಂದುವುದಕ್ಕೆ ನಮ್ಮ ಸಾಮಾಜಿಕ ಜೀವನದ ಅಭದ್ರತೆ, ಧಾರ್ಮಿಕ ಭಿನ್ನ ವಿಭಿನ್ನತೆ, ವ್ಯಕ್ತಿವಾದ ಕಾರಣವಾದಂತೆ ಸಾಂಸ್ಕೃತಿಕ ವಿಪನ್ಯಾವಸ್ಥೆಯೂ ಕಾರಣವಾಯಿತು. ಅರ್ಥ ರಾಷ್ಟ್ರಜೀವನದ ಹೊರಮೈಯಾದರೆ ಸಂಸ್ಕೃತಿ ಅದರ ಆತ್ಮವೆನ್ನುವುದನ್ನು ನಾವು ಮರೆತವು. - ಸಾಂಸ್ಕೃತಿಕ ಅಸಗೆತಿಗೆ ಯಾಂತ್ರಿಕ ಯುಗಧರ್ಮವೂ ನೆರವು ನೀಡಿತು ಹಳ್ಳಿಗಳು ಬರಿದಾಗಿ ಪಟ್ಟಣಗಳು ಬೆಳೆದುದರಿಂದ ಹಳ್ಳಿಗಳಲ್ಲಿ ಪರಂಪರಾಗತ ವಾಗಿ ಬೆಳೆದು ಬಂದಿದ್ದ ಲಲಿತ ಕಲೆಗಳು, ಕುಶಲ ಕಲೆಗಳು ಮರೆಯಾದವು. ಪ್ರಯಾಣ ಸೌಕರ್ಯವೂ ಯಂತ್ರಯುಗದ ವಿಹಾರಸಾಧನಗಳೂ ಹಳ್ಳಿಗಳ ಮೇಲೆ ಪ್ರಭಾವ ಮೂಡಿ ಹಳ್ಳಿಗರಲ್ಲಿ ಒಂದು ಬಗೆಯ ಕೃತ್ರಿಮ ಅಭಿರುಚಿಯನ್ನು