ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶಿವರುದ್ರಪ್ಪನವರು ೫೭ ಅವರ ವಾದ್ಯದಲ್ಲಿ ಮಾನವೀಯತೆ ಇದೆ. ಶ್ರುತಿ ಸಮಾಧಿಯಲ್ಲೊರಗಿ ಶಿವ ರುದ್ರಪ್ಪನವರು ಅತ್ಯಂತ ಕೋಮಲವಾಗಿ ನುಡಿಸುತ್ತಾರೆ. ದುರಿತದಲ್ಲಿ ಸ್ವರ ನುಡಿಸುವಾಗಲೂ ರವೆಯಷ್ಟು ಅಪಸ್ವರವಾಗಲಿ, ಅಪಶ್ರುತಿಯಾಗಲಿ ನುಡಿಸುವುದಿಲ್ಲ. ಶ್ರಾವಕರನ್ನು ಭಾವಪರವಶರನ್ನಾಗಿ ಮಾಡುವ ಮೋಡಿ ಇವರ ವಾದ್ಯವಾದನದಲ್ಲಿದೆ. ಈ ತಲ್ಲೀನತೆಗೆ ಶಿವರುದ್ರಪ್ಪನವರ ಶುದ್ಧಾಂತಃಕರಣವೇ ಕಾರಣ. ವಿನಯ, ಸೌಜನ್ಯಗಳು ಒಂದು ದೋಷವೆನಿಸುವಷ್ಟು ಇವರಲ್ಲಿ ಬೆಳೆದು ನಿಂತಿದೆ. ಒಂದು ಸಲ ಒಬ್ಬ ಪ್ರಸಿದ್ದ ವಿದ್ವಾಂಸರ ಹಾಡುಗಾರಿಕೆಗೆ ಪಕ್ಕ ವಾದ್ಯ ನುಡಿಸುವ ಪಾಳಿ ಶಿವರುದ್ರಪ್ಪನವರಿಗೆ ಬಿತ್ತು. ವಿಳಂಬಕಾಲದ ರಾಗ ಹಾಡುತ್ತ ವಿದ್ವಾಂಸರು ಓಡುತ್ತಿದ್ದರು. ಆದರೆ ವಾದ್ಯಗಾರರನ್ನು * ಓಡಬೇಡಿ' ಎಂದು ಹೀಯಾಳಿಸುತ್ತಿದ್ದರು. ಸಂಗೀತ ಕೇಳುತ್ತಿದ್ದ ಇತರ ವಿದ್ವಾಂಸರು ಹಾಡುಗಾರರ ದೌರ್ಜನ್ಯಕ್ಕೆ ಕೆರಳಿ ಅವರನ್ನು ಛೇಡಿಸಿದರು. ಕಛೇರಿ ಮುಗಿದ ಮೇಲೆ ಶಿವರುದ್ರಪ್ಪನವರನ್ನು ಕುರಿತು ' ಹಾಡುವವರೇ ತಪ್ಪು ಮಾಡುತ್ತಾ ನಿಮ್ಮ ಮುಖಭಂಗಮಾಡುತ್ತಿದ್ದರೆ ಹೇಗೆ ಸುಮ್ಮ ನಿದ್ದಿರಿ' ಎಂದು ಕೇಳಿದಾಗ ಶಿವರುದ್ರಪ್ಪನವರು ' ನನ್ನ ಗುರುಗಳ ಆಜ್ಞೆ ಸ್ವಾಮಿ. ಯಾರೇ ಹೀಯಾಳಿಸಲಿ, ತೇಜೋವಧೆ ಮಾಡಲಿ ಅದಕ್ಕೆ ಪ್ರತೀ ಕಾರ ಮಾಡಬೇಡ ಎಂದು. ಅದನ್ನು ಹೇಗೆ ಉಲ್ಲಂಘಿಸಲಿ ' ಎಂದರು. ವಿದ್ವಾಂಸರು ತಮ್ಮ ಅಹಂಕಾರಕ್ಕೆ ನಾಚಿ ಶಿವರುದ್ರಪ್ಪನವರ ಕ್ಷಮೆ ಬೇಡಿದರು. ಶಿವರುದ್ರಪ್ಪನವರ ವಾದ್ಯದಲ್ಲಿ ಶಂಕರಾಭರಣ, ಕಲ್ಯಾಣಿ, ಬೇಹಾಗ್, ಭೈರವಿ ರಾಗಗಳನ್ನು ಕೇಳಬೇಕು. ವಾದ್ಯ ನುಡಿಸುತ್ತ ಶಿವರುದ್ರಪ್ಪನವರೇ * ಆಹಾ !' ಎಂದುಕೊಳ್ಳುವುದುಂಟು. ಹೃದಯಸ್ಪರ್ಶಿಯಾದ ಇವರ ಸಂಗೀತ ಎಲ್ಲರ ಹೃದಯವನ್ನು ಸೂರೆಗೊಳ್ಳುತ್ತದೆ. ವಾದ್ಯ ನುಡಿಸುವಷ್ಟೇ ಸುಖವಾಗಿ ಶಿವರುದ್ರಪ್ಪನವರು ಹಾಡಬಲ್ಲರು. ಒಂದು ಕಡೆ ಅಂಗಹೀನತೆ, ಮತ್ತೊಂದು ಕಡೆ ಮಿತಿಮೀರಿದ ಸರಳತೆ ಗಳಿಂದ ಶಿವರುದ್ರಪ್ಪನವರು ಸಂಗೀತ ಪ್ರಪಂಚದಲ್ಲಿ ಯಾವ ಸ್ಥಾನದಲ್ಲಿರ ಬೇಕೋ ಆ ಸ್ಥಾನದಲ್ಲಿಲ್ಲ. ಕಣ್ಣಿರುವ ಕನ್ನಡ ರಸಿಕರು ಕಣ್ಣು ಬಿಟ್ಟು,