ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸ ಮರ್ಪಕ ಕಮತಿ. ಎ ಲ ವ ಟ್ಟ ಜಿ. D ರಕೃತಿ ನೋಟಗಳ .(Lanciscapes) ಐತಿಹ್ಯವನ್ನು ಕುರಿತು ಏನೇ ಆ ಚಿಸುತ್ತಾ ಸರ್ ವಿಲಿಯಂ ಆರ್‌ ಪೆನ್ ಅವರು “ ಪ್ರಾಚ್ಯ ದೇಶಗಳಲ್ಲಿ ಪ್ರಕೃತಿ ದೃಶ್ಯಗಳಿಗೆ ಆರಂಭದಿಂದಲೂ ಚಿತ್ರಗಾರರು ಲಕ್ಷ ಕೊಟ್ಟರು. ಇದಕ್ಕೆ ಚೀನಾದೇಶದ ಕಲೆಯೇ ಸಾಕ್ಷಿ” ಎಂದು ಹೇಳಿದ್ದಾರೆ. ಆರ್ ಪೆನ್ನರ ಮಾತು ಅಜಂತೆಯ ಸಂಪ್ರದಾಯಕ್ಕೆ ಅನ್ವಯಿಸುವುದಿಲ್ಲ. ಬೋಧಿಸತ್ವನ ಪ್ರಭೆಯ ಹಿನ್ನೆಲೆಯಾಗಿಯೇ ಪ್ರಕೃತಿ ನಿಲ್ಲಬೇಕಾಯಿತು. ರಜಪೂತ, ಮುಘಲ ಸಂಪ್ರದಾಯಗಳಲ್ಲಿ ಪ್ರಕೃತಿಯನ್ನು ಒಂದು ವಿಶಿಷ್ಟ ವಸ್ತುವನ್ನಾಗಿ ಗಣಿಸುವ ಪರಿಪಾಠವಾರಂಭವಾಯಿತು. ಮುಫಲ ಸಂಪ್ರದಾಯದ ಮುಸ್ಲಿಮ ಚಿತ್ರಗಾರರು ಪ್ರಕೃತಿ ಹಾಗೂ ಪಶುಪ್ರಾಣಿಗಳ ಚಿತ್ರೀಕರಣಕ್ಕೆ ಹೆಚ್ಚು ಗಮನಕೊಟ್ಟರು. ಹಿಂದೂ ಚಿತ್ರಕಾರರಿಗಿದ್ದ ಪುರಾಣಬೆಂಬಲ ಮುಸ್ಲಿಮ ಚಿತ್ರಗಾರರಿಗಿಲ್ಲದಿದ್ದುದೇ ಕಾರಣವಾಗಿರಬಹುದು. ಆಧುನಿಕ ಭಾರತೀಯ ಚಿತ್ರೆತಿಹಾಸದಲ್ಲಿ ಶಾಂತಿನಿಕೇತನ, ಮುಂಬಯಿ ಸಂಪ್ರದಾಯಗಳೆರಡೂ ಪ್ರಕೃತಿ ದೃಶ್ಯಗಳ ಕಡೆ ವಿಶೇಷ ಗಮನ ನನ್ನಿತ್ತವು. ಮುಂಬಯಿ ಸಂಪ್ರದಾಯದ ಮೇಲೆ ಪಾಶ್ಚಾತ್ಯ ಪ್ರಭಾವ