ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦ ಕರ್ನಾಟಕದ ಕಲಾವಿದರು ಹೆಚ್ಚು ಮೂಡಿದುದರಿಂದ ಅದು ತಂತ್ರದೃಷ್ಟಿಯಿಂದ ಪ್ರಾಗಕ್ಕೆ ಬರಲು ಕಾರಣವಾಯಿತು. ಪ್ರಕೃತಿಯ ವೀರ ಹಾಗೂ ಲಲಿತ ಶ್ರೀ ಭಾರತೀಯರಿಗೆ ಹೊಸದಲ್ಲ. ವೇದದ ಋಷಿಗಳು ಪ್ರಕೃತಿಯಾರಾಧಕರು. ಮಹಾಕವಿ ಕಾಳಿದಾಸ ತನ್ನ * ಮೇಘಸಂದೇಶ ” “ ಋತು ಸಂಹಾರ'ಗಳಲ್ಲಿ ಪ್ರಕೃತಿಯ ಅಮರಲೀಲಾ ವಿಲಾಸವನ್ನು ಸೂರೆಗೊಂಡಿದ್ದಾನೆ. ಪಂಪನ ಪ್ರಕೃತಿವರ್ಣನೆ ನಿತ್ಯ ನೂತನವಾಗಿದೆ. ಮಲೆನಾಡಿನ ವೈಭವವನ್ನು ಪುಟ್ಟಪ್ಪನವರಿಗಿಂತ ಚೆನ್ನಾಗಿ ವರ್ಣಿಸಲು ಸಾಧ್ಯವೇ ? ಕಾವ್ಯದಲ್ಲಿ ಪ್ರಕೃತಿಗೆ ದೊರೆತಿರುವ ಸ್ಥಾನ ಚಿತ್ರ ಕಲೆಯಲ್ಲಿ ದೊರೆಯದಿರುವುದು ಸೋಜಿಗ. ಭಾರತೀಯರಿನ್ನೂ ದೇವರುಗಳ ಉಕ್ಕಿನ ಹಿಡಿತದಿಂದ ಪಾರಾಗಿ ರವಿವರ್ಮ ಬೆಳಸಿದ ಕೀಳು ಅಭಿರುಚಿಯನ್ನು ನೀಗಿಕೊಳ್ಳ ಬೇಕಾದರೆ ಬಹಳ ಕಾಲಬೇಕು. ಪ್ರಕೃತಿಯನ್ನೇ ಏಕಮನಸ್ಕರಾಗಿ ಆರಾಧಿಸಿಕೊಂಡು ಆಕೆಯ 'ಚಿರಂತನ ಸೌಂದರ್ಯವನ್ನು ಪಾಲಿಸುತ್ತಿರುವವರಲ್ಲಿ ಎಫ್. ಜಿ. ಎಲವಟ್ಟ ಯವರು ಅಗ್ರಗಣ್ಯರಾಗಿದ್ದಾರೆ. ಅವರ ಸಜೀವ ಕುಂಚಕ್ಕೆ ಸಿಕ್ಕಿ ಜಡ ಪ್ರಕೃತಿ ಕೂಡ ಚೇತೋಹಾರಿಯಾಗುತ್ತದೆ; ಮೂಕ ಪಶುಗಳು ಮನುಷ್ಯ ರಿಗಿಂತಲೂ ಚೆನ್ನಾಗಿ ಮಾತನಾಡುತ್ತವೆ. ಕಣ್ಣು, ಕರುಳೆರಡನ್ನೂ ಸೆರೆ ಹಿಡಿಯುವ ಕಲೆ ಎಲವಟ್ಟಿಯವರಿಗೆ ಕರತಲಾಮಲಕ. ಎಲವಟ್ಟಿಯವರಿಗೆ ಈಗ ೫೨ ವರ್ಷ ವಯಸ್ಸು, ಕಾಲು ಶತಮಾನ ಕಾಲ ಪ್ರಕೃತಿ ಪೂಜೆ ಮಾಡುತ್ತಾ ಬಂದಿದ್ದಾರೆ. ನೂರಾರು-ಸಾವಿರಾರು ಚಿತ್ರಗಳನ್ನು ಬರೆದಿದ್ದಾರೆ ಬರೆಯುತ್ತಿದ್ದಾರೆ. ಮೆಟ್ರಿಕ್ ಪರೀಕ್ಷೆಯವರೆಗೆ ಇವರ ಶಿಕ್ಷಣ ಪುಣೆಯಲ್ಲಿ ಸಾಗಿತು. ವಿದ್ಯಾರ್ಥಿಗೆ ಪಾಠಕ್ಕಿಂತ ಚಿತ್ರಕಲೆಯ ಕಡೆ ಹೆಚ್ಚು ಲಕ್ಷ, ಪುಣೆಯ ಒಬ್ಬ ಕುಲಕರ್ಣಿ ಇವರಿಗೆ ಚಿತ್ರಕಲೆಯ ಪ್ರಥಮ ಪಾಠ ಹೇಳಿಕೊಟ್ಟರು. ಮುಂದೆ ಮುಂಬಯಿಯ ಜೆ. ಜೆ. ಸ್ಕೂಲ್ ಸೇರಿ ಅಭ್ಯಾಸ ಮಾಡಿದರು.

  • ಜೆ. ಜೆ. ಕಲಾಶಾಲೆಯಲ್ಲಿ ಆಗಾಗ್ಗೆ ಸಿಸಿಲ್ ಬನ್ಸ್ ಅವರ ಬೋಧವೂ ದೊರಕುತ್ತಿತ್ತು, ಮಧ್ಯೆ ಕೆಲಕಾಲ ಎಸ್. ಎಲ್. ಹಲ್ದಾನ್ಕರ್ ಅವರಲ್ಲಿ ಎಲವಟ್ಟಿಯವರು ಅಭ್ಯಾಸಮಾಡಿದರು.