ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೨ ಕರ್ನಾಟಕದ ಕಲಾವಿದರು -ಎಳೆಎಳೆಯ ಕೆಲಸಮಾಡಲು ಚಿತ್ರಗಾರ ಪ್ರಯತ್ನಿಸಿಲ್ಲ. ನೋಡಿದ ಕೂಡಲೆ ಮನಸ್ಸಿನ ಮೇಲೆ ಪರಿಣಾಮ ಮಾಡುವುದೇ ಉದ್ದೇಶ. ಇದನ್ನು ಸ್ಕೂಲವರ್ಣಗಳಿಂದ ಚಿತ್ರಕಾರ ಸಾಧಿಸಿದ್ದಾನೆ. 1 ವಿಶ್ರಾಂತಿ ” ಚಿತ್ರದಲ್ಲಿ ಬೇರೆ ಬಗೆಯ ವರ್ಣನಿಯೋಜನೆಯನ್ನು ಗಮನಿಸಬೇಕು. ಈ ಚಿತ್ರದ ಮೂಲಭೂತವಾದ ಬಣ್ಣ ಹಳದಿ. ಹುಲ್ಲು ಗಾಡಿ ನಿಂತಿದೆ. ಅದರ ಮುಂದೆ ದಣಿದ ಎತ್ತುಗಳು ಮಲಗಿವೆ. ಗಾಡಿ `ಯೊಂದಿಗೆ ಬಂದ ಒಕ್ಕಲುಹೆಣ್ಣು ಚಕ್ರದ ಬಳಿ ಕುಳಿತು ವಿಶ್ರಮಿಸಿಕೊಳ್ಳು ತಿದ್ದಾಳೆ. ಹಿನ್ನಲೆಯಲ್ಲಿ ಒಂದು ಗುಡ್ಡ, ಅದರ ಮುಂದೆ ಒಂದು ಮನೆಯ ಮೇಲ್ಯಾಗ ಸೂಚಿತವಾಗಿದೆ. ಚಿತ್ರದಲ್ಲಿ ದಿವ್ಯಶಾಂತಿ ಮೂರ್ತಿಭವಿಸಿದೆ. ಆದರೆ ಶಾಂತಿಯ ಹಿಂದೆ ಕ್ರಾಂತಿ ಹೊಗೆಯಾಡುತ್ತಿದೆ. ಅಷ್ಟೊಂದು ಹುಲ್ಲನ್ನು ಎಳೆದು ತಂದ ದನಗಳು ಹಸಿದು ಕುಳಿತಿವೆ. ಒಂದೆತ್ತಿನ ಮುಖ ದಲ್ಲಿ ಎಂಥ ದುಃಖ !-ಎಂಥ ಅಶಾಂತಿ !-ಎಂಥ ಕ್ರೋಧ !! ಶ್ರಮ 'ಜೀವಿಗಳ ಅಂತರಂಗವನ್ನು ಎಲವಟ್ಟಿ ಯವರು ಬಿಚ್ಚಿ ನನ್ನ ಮುಂದಿಟ್ಟ ದ್ದಾರೆ. ಹಳದಿ, ಬೂದು, ಬಳಿ ಬಣ್ಣಗಳಿಂದ ಕೂಡಿದ ಚಿತ್ರಕ್ಕೆ ಹೆಣ್ಣಿನ ಉಡುಗೆಯ ಕೆಂಪು ಜೀವಕಳೆಯಿತ್ತಿದೆ. ಶ್ರೀರಂಗಪಟ್ಟಣದ ಬೆಂಗಳೂರು ದ್ವಾರ ”ದಲ್ಲಿ ' ಜಲದ್ವಾರ ' ಚಿತ್ರದ ತಂತ್ರವನ್ನೇ ಚಿತ್ರಗಾರ ಪ್ರಯೋಗಿಸಿದ್ದಾರೆ. ದ್ವಾರದಿಂದ ಒಬ್ಬ ಶ್ರಮಜೀವಿ ಹುಲ್ಲು ಹೊರೆ ಹೊತ್ತು ಬರುತ್ತಿದ್ದಾನೆ. ಅವನ ಮೇಲೆ ಸರಿಯಾಗಿ ಪುಷ್ಪಭರಿತ ಗೋಲ್ಡ್ ಮೊಹರ್ ಮರ. ಮುನ್ನೆಲೆಯಲ್ಲಿ ಪೌಳಿ ಗೋಡೆ, ಶ್ರಮಜೀವಿಯ ಶ್ವೇತ, ಪೀತವರ್ಣಗಳಿಗನುಗುಣವಾಗಿ ಪುಪ್ಪಗಳ ಕೆಂಪು ವರ್ಣ ನಿಯೋಜಿತವಾಗಿದೆ. ಪ್ರಕೃತಿ ತಾಯಿ ಶ್ರಮಜೀವಿಯನ್ನು ಹರಸಿ ಅವನ ಮೇಲೆ ಪುಷ್ಪವೃಷ್ಟಿ ಮಾಡುತ್ತಿದ್ದಾಳೆಯೇ ? ಚಿತ್ರ ತಂತ್ರದಲ್ಲಿ ಸಮತೋಲನೆಗೆ ವಿಶೇಷ ಗೌರವ. ಎಲವಟ್ಟಿಯರ 1 ತೋಡರ ಗುಡಿಸಲುಗಳು > ಚಿತ್ರದಲ್ಲಿ ಅದರ ವೈಭವವನ್ನು ಕಾಣ ಬಹುದು. ಮುನ್ನೆಲೆಯಲ್ಲಿ ಒಂದು ಪುರಾತನ ವೃಕ್ಷ. ಅದರ ಕೆಳಗೆ ತೋಡರ ಹೆಣ್ಣು ಕುಳಿತು ಹೊಲಿಗೆ ಕೆಲಸಮಾಡುತ್ತಿದ್ದಾಳೆ. ಚಿತ್ರದ ಮಧ್ಯದಲ್ಲಿ ಸರಿಯಾಗಿ ಅವಳ ಗುಡಿಸಲು, ಹಿನ್ನೆಲೆಯಲ್ಲಿ ಒಂದು ಮರ. , !