ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎಲವಟ್ಟ, ಮುನ್ನೆಲೆಯಲ್ಲಿರುವ ಮರಕ್ಕೂ ಹಿನ್ನೆಲೆಯಲ್ಲಿರುವ ಮರಕ್ಕೂ ಸಾಮ್ಯ ಕಲ್ಪಿಸಿ ನಮ್ಮ ಗಮನವೆಲ್ಲಾ ಮಧ್ಯದಲ್ಲಿರುವ ಗುಡಿಸಲ ಕಡೆಗೆ ಎಳೆದಿದ್ದಾನೆ ಚಿತ್ರಗಾರ, ಹಸಿರು, ಕಪ್ಪು, ಕೆಂಪು, ಬೂದು ವರ್ಣಗಳನ್ನು ಚಿತ್ರಗಾರ ಸಮಸಮವಾಗಿ ಬಳಸಿ ಒಂದು ಬಗೆಯ ಸೌಮ್ಯತೆಯನ್ನು ತಂದೊಡ್ಡಿದ್ದಾನೆ. ಅನವಶ್ಯಕ ವರ್ಣವಾಗಲಿ, ವಸ್ತುವಾಗಲಿ, ರೇಖಾಚಮತ್ಕಾರವಾಗಲಿ ಕಂಡುಬರುವುದಿಲ್ಲ, ಪ್ರಕೃತಿ ಚಿತ್ರಗಾರ ಪ್ರಕೃತಿಯನ್ನು ಕೋರೋನಂತೆ (Corot) ಸೌಮ್ಯ ಸುಹಾಸಿನಿಯನ್ನಾಗಿ ನೋಡಬಹುದು ; ಟರ್ನರನಂತೆ (Turner) ರುದ್ರ ಸಿಂಹಿಣಿಯನ್ನಾಗಿಯೂ ನೋಡಬಹುದು. ಎರಡು ಗುಣಗಳನ್ನೂ ಆವಿರ್ಭವಿಸಿರುವುದೇ ಪ್ರಕೃತಿಯ ವೈಶಿಷ್ಟ ಎಲವಟ್ಟಿಯವರ ಚಿತ್ರಗಳಲ್ಲಿ ಎರಡು ಗುಣಗಳೂ ಕಂಡುಬರುತ್ತವೆ. ಪ್ರಕೃತಿಯ ವೈವಿಧ್ಯವನ್ನು ಸರಳ ವಾಗಿ, ಕುಶಲವಾಗಿ, ಸಂಪೂರ್ಣವಾಗಿ ಎಲವಟ್ಟಿ ಯವರು ಕಾಣಲೆತ್ನಿ ಸಿದ್ದಾರೆ. ಉತ್ತಮ ಕಲಾವಿದರಲ್ಲಿರಬೇಕಾದ " ದಿವ್ಯ ಅತೃಪ್ತಿ' ಎಲವಟ್ಟಿಯ ವರಲ್ಲಿ ತುಂಬಿ ತುಳುಕುತ್ತಿದೆ. ತಮ್ಮ ಚಿತ್ರಗಳಲ್ಲಿ ತಮಗೇ ಅತೃಪ್ತಿ! ಇವಕ್ಕೂ ಒಳ್ಳೆಯವುಗಳನ್ನು ರಚಿಸಬೇಕೆಂಬ ಆಕಾಂಕ್ಷೆ ! ಸೂರ್ಯಾಸ್ತ್ರ, ಸೂರ್ಯೊದಯಗಳ ವಿವಿಧ ವರ್ಣವೈಖರಿ ಈಗ ಅವರ ಚಿತ್ರವನ್ನು ಸೆಳೆದಿದೆ. ಎಲವಟ್ಟಿ ಯವರ ಕಲಾ ಪರಿಣತಮತಿಗೆ ಅವರ ನಿರಾಡಂಬರ, ನಿರಭ್ರ ಜೀವನವೇ ಕಾರಣ. ಪ್ರಕೃತಿಯಷ್ಟೆ ಸರಳ ಈ ಪ್ರಕೃತಿ ಪುತ್ರನ ನಡೆ ನುಡಿ, “ ನನ್ನ ಪ್ರಗತಿಯ ದಾರಿ ತೋರಿ' ಎಂದು ಮೊರೆಯುತ್ತಿದೆ ಈತನ ಆತ್ಮ, ಪ್ರಕೃತಿ ಎಲವಟ್ಟಿಯವರನ್ನು ತನ್ನ ವಾಣಿಯಾಗಿ ಆರಿಸಿಕೊಳ್ಳುವು ದರಲ್ಲಿ ಏನಾದರೂ ಸಂಕೇತ ಅಡಕವಾಗಿರಬಹುದೇ ? ಹಿಂದೂಸ್ಥಾನದಲ್ಲಿ ಕಲಾಜಾಗೃತಿಯನ್ನು ಮೂಡಿಸಬೇಕೆಂದು ಅವನೀಂದ್ರ ಠಾಕೂರ, ನಂದಲಾಲಬಸು, ಜೆ. ಎಚ್. ಕಸಿನ್ಸ್, ಡಾ|| ಕ್ಯಾಮರಿಷ್, ಜಿನರಾಜದಾಸ್, ಅರ್ಧ ಶತಮಾನದಿಂದ ಪ್ರಯತ್ನಿಸುತ್ತಿ ದ್ದಾರೆ. ಜನತೆಗೂ ಲಲಿತಕಲೆಗಳಿಗೂ ನಿಕಟ ಸಂಪರ್ಕವೇರ್ಪಟ್ಟಿಲ್ಲ. ಇಂದಿಗೂ ಕಲೆ ಶ್ರೀಮಂತರ ಮನೆಯ ಊಳಿಗದಾಳಾಗಿದೆ. ಉತ್ತಮ ಚಿತ್ರ