ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪ ಕರ್ನಾಟಕದ ಕಲಾವಿದರು ಗಳನ್ನು ಅಂದವಾಗಿ ಮುದ್ರಿಸಿ ಹಂಚುವ ಪ್ರಯತ್ನವೂ ನಡೆದಿಲ್ಲ. ಹೀಗಾಗಿ, ದೇಶದ ಕಲಾ ಸಂಪನ್ನರ ಪ್ರತಿಭೆ ಪ್ರಕಾಶಕ್ಕೆ ಬರುವುದಕ್ಕೆ ಮಾರ್ಗವಿಲ್ಲ. ವಾಗಿದೆ. ಹಳೆಯವಕ್ಕೆ ಜೋತುಕೊಳ್ಳುವ ಅಭ್ಯಾಸದಲ್ಲಿ ಪ್ರಾಗತಿಕ ಕಲೆ ಬೆಳೆಯಲು ಅನುವೇ ಇಲ್ಲದಂತಾಗಿದೆ. ಜಾಗೃತ ಜನಾಂಗದಲ್ಲಿ ಕಲೆ, ಸಾಹಿ ತ್ಯಗಳಿಗೆ ಹಿರಿಯ ಸ್ಥಾನವಿರಬೇಕು. ದೇಶ ಕಲಾವಿದನನ್ನು ಸಾಹಿತಿಯನ್ನು ಮಾರ್ಗದರ್ಶಕನೆಂದು ಗೌರವಿಸಬೇಕು. ಅಂಥ ಸಾಧನೆ ಸಾಗಿಸಿ ಭಾರತೀಯ ಕಲೆಗಳ ಬಗ್ಗೆ ಭಾರತದಲ್ಲಿ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಗೌರವ ದೊರಕಿ ಸಲು ಸತತವಾಗಿ ಶ್ರಮಿಸುತ್ತಿರುವವರಲ್ಲಿ ಎಲವಟ್ಟಿಯವರೊಬ್ಬರು. ಇವರ ವೀರ ಪ್ರಯತ್ನದ ಕಡೆಗೆ ಜನತಾ ಜನಾರ್ಧನನ ಲಕ್ಷ ಹೋಗಲಿ.