ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

11) ನೀಲಮ್ಮ ಕಡಾಂಬಿ ಹಿತ್ಯೋತ್ಸವದ ಸಲುವಾಗಿ ನಾನೊಮ್ಮೆ ಗದುಗಿಗೆ ಹೋಗಿದ್ದೆ. ನನ್ನ ಈ ಕಾಠ್ಯಕ್ರಮ ಮುಗಿದ ಮಾರನೆಯ ದಿನ ಸಂಜೆ ಕೆಲವು ಗೆಳೆಯ ರೊಂದಿಗೆ ತಿರುಗಾಡಿಕೊಂಡು ಬರಲು ಹೊರಟೆ. ಏಳು ಗಂಟೆ ಆಗಿರಬಹುದು. ಒಬ್ಬ ಗೆಳೆಯರು ಊರೊಳಗೆ ಉಭಯಮಿತ್ರರ ಒಂದು ಗ್ರಾಮರ್ಫೋ-ರೇಡಿಯೊ ಅಂಗಡಿಗೆ ಕರೆದೊಯ್ದರು. ಚಹಾ ಮುಗಿದ ಮೇಲೆ ನಾನು (ಇದೇಕೆ ಇಷ್ಟು ಅವಸರವಾಗಿ ಇಲ್ಲಿಗೆ ಕರೆತಂದಿರಿ. ಇನ್ನೂ ಒಂದೆರಡು ಗಂಟೆ ಸುಖವಾಗಿ ಊರ ಹೊರಗೆ ಸುತ್ತಾಡಿಕೊಂಡು ಬರಬಹುದಾಗಿತ್ತು' ಎಂದೆ. ಗೆಳೆಯರು (ಈಗ ೭.೪೫ಕ್ಕೆ ಮದರಾಸಿನ ರೇಡಿಯೋನಿಲಯದಲ್ಲಿ ನೀಲಮ್ಮ ಕಡಾಂಬಿಯವರ ಸಂಗೀತ ಇದೆ. ಅದಕ್ಕಾಗಿ ಇಲ್ಲಿಗೆ ಬರಬೇಕಾಯಿತು' ಎಂದರು. ನನ್ನ ಕುತೂಹಲ ಕೆರಳಿತು. ಕರ್ನಾಟಕ ಸಂಗೀತ ಪದ್ಧತಿಯ ಪರಿಶ್ರಮವಿಲ್ಲದ ಈ ಗೆಳೆಯರು ನೀಲಮ್ಮನವರ ಸಂಗೀತದ ಬಗ್ಗೆ ಯಾವ ಅಭಿಪ್ರಾಯ ವ್ಯಕ್ತಗೊಳಿಸುತ್ತಾರೆಂದು ತಿಳಿಯಲು ಉತ್ಸುಕನಾದೆ. ರಾತ್ರಿ ೯ ಗಂಟೆಯವರೆಗೆ ನೀಲಮ್ಮನವರ ಹಾಡುಗಾರಿಕೆ, ವೀಣಾವಾದನ ನಡೆಯಿತು. 5