ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಗೆಳೆಯರು ಭಿತ್ತಿಚಿತ್ರಗಳಂತೆ ಕುಳಿತು ನಾದಸೌರಭದಲ್ಲಿ ಮನಸೋತಿದ್ದರು. ಮಧ್ಯೆ ಮಧ್ಯೆ ಅವರ ಬಾಯಲ್ಲಿ 'ವಹವ್ವಾ-ಶಹಭಾಸ್.'

  • ಸಂಗೀತ ವಿಶ್ವಭಾಷೆ (universal language) ಎನ್ನುವುದಕ್ಕೆ ಈ ನಿದರ್ಶನ ಸಾಕು. ನೀಲಮ್ಮನವರ ಕಲಾವೈಭವಕ್ಕೂ ಈ ನಿದರ್ಶನ ಸಲ್ಲುತ್ತದೆ.

ನೀಲಮ್ಮನವರು ಜನಿಸಿದ್ದು ೧೯೧೧ನೆಯ ಇಸವಿಯಲ್ಲಿ - ಮೇಲುಕೋಟೆ ಯಲ್ಲಿ - ಪ್ರಥಮ ಏಕಾದಶಿ ದಿನ. ಇವರ ತಂದೆ ವಿದ್ಯಾನ್ ವೆಂಕಟಾಚಾ ರ್ಯರು ಮೈಸೂರಿನಲ್ಲಿ ಪೋಲೀಸ್ ಇನ್ಸ್ಪೆಕ್ಟರಾಗಿದ್ದರು. ನಿವೃತ್ತಿ ಹೊಂದಿದ ಮೇಲೆ ಮೇಲುಕೋಟೆ ದೇವಾಲಯದ ಪೇಷ್ಕಾರರಾಗಿದ್ದರು. ವೆಂಕಟಾಚಾರ್ಯ ರಿಗೆ ವೀಣಾವಾದನದ ಮೇಲೆ ಅಪರಿಮಿತ ಅಭಿಮಾನ. ಅವರು ವೈಕುಂಠವಾಸಿ ಗಳಾದಾಗ ನೀಲಮ್ಮನವರಿಗೆ ಎಂಟೇ ವಯಸ್ಸು, ಆ ವೇಳೆಗೇ ತಂದೆ ಮಗ ಳಿಗೆ ವೀಣೆ ನುಡಿಸುವುದನ್ನೂ ಬಾಯಿ ಹಾಡುಗಾಕೆಯನ್ನೂ ಅಭ್ಯಾಸಮಾಡಿಸಿ ದ್ದರು. ವಿವಾಹಾನಂತರ ಸುಮಾರು ಆರು ತಿಂಗಳು ನೀಲಮ್ಮನವರಿಗೆ ಆಸ್ಥಾನ್ ವಿದ್ವಾನ್ ಲಕ್ಷ್ಮೀನಾರಣಪ್ಪನವರಲ್ಲಿ ವೀಣಾಪಾಠವಾಯಿತು. ಕೆಲವು ದಿನಗಳಲ್ಲಿ ಮೈಸೂರು ಬಿಟ್ಟು ನಂಜನಗೂಡಿಗೆ ಹೋಗಬೇಕಾಗಿ ಬಂತು. ಅಲ್ಲಿ ತಾವೇ ಸ್ವಂತಶ್ರಮದಿಂದ ಸಂಗೀತಾಭ್ಯಾಸವನ್ನು ಮುಂದುವರಿಸಿದರು. ಮೈಸೂರಿಗೆ ದಕ್ಷಿಣದಿಂದ ಬರುತ್ತಿದ್ದ ಪ್ರಸಿದ್ದ ವಿದ್ವಾಂಸರ ಗಾಯನವಾದನ ಗಳನ್ನು ತಪ್ಪದೆ ಕೇಳಿ, ಅಭಿರುಚಿ ಸುಧಾರಿಸುವುದಕ್ಕೆ ಇಂಬುಗೊಡುತ್ತಿದ್ದರು. ೧೯೩೯ನೆಯ ಇಸವಿ ನೀಲಮ್ಮನವರ ಕಲಾಜೀವನದಲ್ಲಿ ಮಹತ್ವದ ವರ್ಷ ವಾಯಿತು. ಅವರ ಸಂಗೀತವನ್ನು ಮೈಸೂರಿನಲ್ಲಿ ಕೇಳಿ ಆನಂದಿಸಿದ್ದ ಕೆಲವು ಅಭಿಮಾನಿಗಳ ಸಲಹೆಯ ಮೇರೆ ಮದರಾಸು, ತಿರುಚನಾಪಳ್ಳಿ ಎ. ಐ. ಆರ್. ರೇಡಿಯೋ ಸ್ಟೇಷನ್‌ಗಳಲ್ಲಿ ಹಾಡುವ, ನುಡಿಸುವ ಅವಕಾಶ ಸಿಕ್ಕಿತು. ಮದ ರಾಸು, ತಿರುಚನಾಪಳ್ಳಿ ಗಾಯನ ಸಮಾಜಗಳು ಹಿಂದುಳಿಯಲಿಲ್ಲ. ಮೇಲಿಂದ ಮೇಲೆ ಆಹ್ವಾನಗಳು ಬರತೊಡಗಿದವು. ನೀಲಮ್ಮನವರು ಈ ಸ್ಥಳಗಳಲ್ಲಿ ಅಲ್ಲದೆ ಬೆಜವಾಡ, ಕಾಕಿನಾಡ, ಹೈದರಾಬಾದು, ಪುಣೆ, ಮುಂಬಯಿ, ಉದಕ ಮಂಡಲ, ನಾಗಪಟ್ಟಣ ಮೊದಲಾದ ಸ್ಥಳಗಳಲ್ಲಿ ಕಛೇರಿಮಾಡಿ ವಿದ್ವಜ್ಜನರ ಗೌರವಾದರಗಳನ್ನು ದೊರಕಿಸಿಕೊಂಡಿದ್ದಾರೆ. ದೆಹಲಿ, ಸಿಲಾನ್, ಕಲ್ಕತೆ, ಬಲ್ಮಾ ದೇಶಗಳಿಂದ ಆಹ್ವಾನಗಳು ಬಂದವು. ದೇಶದ ಅಶಾಂತಸ್ಥಿತಿಯ