ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ಕೊಂಡು ತನ್ನದನ್ನಾಗಿ ಮಾಡಿಕೊಳ್ಳಬಲ್ಲದೆಂಬುದಕ್ಕೆ ಹಿಂದೂಸ್ಥಾನಿ ಪದ್ದತಿ ಯನ್ನು ಗಮನಿಸಬಹುದು. ಅಖಾರ ಖುಸೂ, ತಾನಸೇನರು ತಮ್ಮ ಅಮಾನುಷಪ್ರತಿಭೆಯಿಂದ ಈ ಸಾಂಸ್ಕೃತಿಕ ಸಂಗೋಪನವನ್ನು ಸಂಗೀತದಲ್ಲಿ ಸಾಧಿಸಿದ್ದಾರೆ. ಎರಡು ಸಂಪ್ರದಾಯಗಳೂ ಸ್ವತಂತ್ರವಾಗಿ ವಿಶಿಷ್ಟವಾಗಿ ಬೆಳೆಯುವುದರಿಂದ ನಾಡಿಗೆ ಲಾಭವಿದೆ. ಆದರೆ ಕೆಲವಂಶಗಳಲ್ಲಿ ಎರಡು ಸಂಪ್ರದಾಯಗಳೂ ಏಕೀಭವಿಸುವುದನ್ನು ನಾವು ನೋಡುತ್ತಿದ್ದೇವೆ. ಉದಾಹರಣೆಗಾಗಿ ಶಂಕರಾಭರಣ, ಬಿಲಾವಲ್; ಕಲ್ಯಾಣಿ, ಯಮನ್; ಶುದ್ಧ ಸಾವೇರಿ, ದುರ್ಗಾ ; ಶ್ರೀರಂಜಿನಿ, ಭಾಗ್ಯಶ್ರೀ; ಆಭೇರಿ, ಭೀಮ ಪಲಾಸ್. ಈ ರಾಗಗಳವಿಸ್ತರಣದಲ್ಲಿ ಸ್ವರಸಂಯೋಜನೆ ಒಂದೇ ಆಗಿದ್ದರೂ ಕಲ್ಪನಾವೈಖರಿ ಹಾಗೂ ಭಾವನೆ ವ್ಯತ್ಯಾಸ ಹೊಂದುತ್ತವೆ. ಕರ್ನಾಟಕ ಪದ್ದತಿಯ ವೈಶಿಷ್ಠ ಹೋಗ ದಂತೆ ತದ್ರೂಪವಾದ ಹಿಂದೂಸ್ಥಾನಿ ರಾಗಛಾಯೆಯನ್ನು ತಮ್ಮ ಹಾಡಿಕೆಯಲ್ಲಿ ನೀಲಮ್ಮನವರು ಬಹು ಜಾಣೆಯಿಂದ ತಂದುಕೊಳ್ಳುತ್ತಾರೆ. ಈ ಸಮರಸ ಅವರ ಸಂಗೀತಕ್ಕೊಂದು ಅಪೂರ್ವ ಮಾರ್ದವತೆಯನ್ನು ಕೊಡುತ್ತದೆ. ವೀಣೆಯ ನಾದಪ್ರಮಾಣಕ್ಕೆ ಅನುವರ್ತಿಸಿಕೊಂಡು ಹಾಡುವುದು ಬಹಳ ಕಷ್ಟ ಸಾಧ್ಯ. ಅದಕ್ಕೆ ದೈವದತ್ತವಾದ ಕಂಠಬೇಕು. ನೀಲಮ್ಮನವರು ವೀಣೆನುಡಿಸಿ ಕೊಂಡು ಹಾಡುವಾಗ ವಾದ್ಯ-ಶಾರೀರ ಹಾಸುಹೊಕ್ಕಾಗಿ ಹೊಂದಿಕೊಳ್ಳುತ್ತವೆ. ನೀಲಮ್ಮನವರ ಪ್ರಯಾಸವಿಲ್ಲದ ಹಾಡುಗಾರಿಕೆ, ಕಣ್ಮನ ತಣಿಸುವ ರಸಾತ್ಮಕತೆ, ಶಾಂತಿರಸದ ಕಡೆಗೆ ಲಕ್ಷವಿಟ್ಟ ಮನೋಭಾವ ರಸಋಷಿ ಗೊಂದು ಹಿರಿಹಬ್ಬ, ಈಚೆಗೆ ಒಂದೆರಡು ಚಲನಚಿತ್ರಗಳಿಗೆ ನೀಲಮ್ಮನವರು ಸಂಗೀತ ದಿಗ್ಧರ್ಶನ ಮಾಡಿ ಕೀರ್ತಿಶಾಲಿಗಳಾಗಿದ್ದಾರೆ. ಸಂಗೀತವನ್ನು ಉಪಾಸನೆಯ ದೃಷ್ಟಿಯಲ್ಲಿ ರೂಢಿಸಿಕೊಂಡು ಅದು. ಭಗವದಾರಾಧನೆಯ ಸಾಧನವೆಂದು ಭಾವಿಸಿ ರಸಿಕವೃಂದಕ್ಕೆ ನಿರ್ಮಲಾನಂದ ಒದಗಿಸುತ್ತಿರುವ ನೀಲಮ್ಮನವರಲ್ಲಿ ಕಲಾದೀಧಿತಿ ಅನಂತವಾಗಿ ಬೆಳಗಲೆಂದೇ ನನ್ನ ಹಾರೈಕೆ.