ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುನ್ನುಡಿ vil ಸಂಗೀತದಲ್ಲಿ ಔತ್ತರೇಯ ಸಂಪ್ರದಾಯ, ನೃತ್ಯದಲ್ಲಿ ಕಥಕ್ ಸಂಪ್ರದಾಯ ಮಾತ್ರ ಪಟ್ಟಣಗಳಲ್ಲಿ ಆರಸರ, ಶ್ರೀಮಂತರ ಪೋಷಣೆಗೊಳಗಾಗಿ ಹುಟ್ಟಿ ಬೆಳೆದವು. ಕರ್ನಾಟಕ ಸಂಗೀತ, ಭರತನಾಟ್ಯ, ಪಹಡಿಚಿತ್ರ ಕಲೆ ಹಳ್ಳಿಗಳ ಗಡಿದಾಟಿ ಪಟ್ಟಣ ಸೇರಿದಾಗ ಅವು ತಮ್ಮ ಸಹಜಸ್ವರೂಪ ನೀಗಿಕೊಂಡು ಕೃತಕರೂಪ ತಳೆದುದನ್ನೂ ನಾವು ಕಂಡಿದ್ದೇವೆ. ಅಕ್ಟರ್‌ ಹೇಳಿದಂತೆ “ದೈವಶಕ್ತಿಯ ಅರಿವು ಮೂಡಲು ಕಲೆ ಉತ್ತಮ ಸಾಧನ. ಪೂರ್ಣ ಮಾನವತೆಯ ನಿರ್ಮಾಣಕ್ಕೆ ಬೌದ್ದಿಕ ಹಾಗೂ ಆಧ್ಯಾತ್ಮಿಕ ಉತ್ರಾಂತಿಯ ಮೂಲಕ ಪೂರ್ಣಮಾನವತೆಯನ್ನು ನಿರ್ಮಾಣಮಾಡುವ ದೈವೀಸಂಕಲ್ಪಕ್ಕೆ ಕಲೆ ಸಹಕಾರಿಯಾಗುತ್ತದೆ.'+ ಎಲ್ಲಿ ಸತ್ಯ, ಶಿವ, ಸೌಂದರ್ಯದ ತ್ರಿವೇಣಿ ಸಂಗಮವಾಗುವುದೋ ಅಲ್ಲಿಯೇ ಪೂರ್ಣ ಮಾನವನ ಅವತಾರವಾಗುವುದು. ಪೂರ್ಣ ಮಾನವತೆ ಕೇವಲ ಆಧ್ಯಾತ್ಮಿಕ ಶ್ರೇಷೆಯೋ ಜೀವಂತ ಸತ್ಯವೋ ? ಭಗವಂತನನ್ನು * ರಸ 'ವೆಂದು (ರಸೋ ವೈ ಸಹ) ಉಪನಿಷತ್ತು ಆರಾಧಿಸಿತು. ರಸಾನುಭವ, ಭಗವದಾನುಭವಕ್ಕೆ ಸಮಾನವಾದುದು. ಋಷಿ, ಕವಿ, ಕಲಾವಿದ ಒಂದೇ ಅನುಭವವನ್ನು ವಿವಿಧ ಮಾರ್ಗಗಳಲ್ಲಿ ಪಡೆಯುತ್ತಾರೆ. ಋಷಿಯನ್ನೂ ಕವಿಯನ್ನೂ ಸಮಾನಸ್ಥಾನದಲ್ಲಿ ಕೂಡಿಸಿದ ಭಾರತ ಸಂಸ್ಕೃತಿ ಕಾವ್ಯ, ಕಲೆಗಳ ಮಹೋನ್ನತಿಯನ್ನು ಚೆನ್ನಾಗಿ ಗ್ರಹಿಸಿತ್ತು,* - ಕಲೆಯನ್ನು ರಾಜಮಹಾರಾಜರ, ಶ್ರೀಮಂತರ, ರಾಜಕೀಯ ಪಕ್ಷ ಪ್ರತಿಪಕ್ಷಗಳ ವಜ್ರಮುಷ್ಠಿ ಯಿಂದ ಬಿಡಿಸಬೇಕಾದುದು ಕೇವಲ ಕಲಾ ವಿಕಾಸದ of " Art properly employed, is, as the great Akbar said, an aid to the understanding of the divine nature; its proper use is to fulfil the divine purpose in the intellectual and spiritual evolution of the perfect human state." -IBID * 14...Art, if it is to be reckoned as one of the great values of life, must teach men humility, tolerance, wisdom and magnanimity. The value of art is not beauty, but right action." - Somerset Maugham "SUMMING UP” (Page 310)