ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶಂಕರ ದೀಕ್ಷಿತರು ೭೫ ಶಂಕರರಾವ್ ಜೋಶಿ, ಸುಶೀಲಾ ತೇಂಬೆ, ವಿಜಯಾ ದೇಸಾಯಿ, ಸರೋಜಿನಿ ನಾಡಕರ್ಣಿ ಮೊದಲಾದವರೂ, ದೀಕ್ಷಿತರ ಮಗ ರಾಮಚಂದ್ರ ದೀಕ್ಷಿತ, ಸೊಸೆ ವಸಂತಾದೇವಿಯವರು ಉತ್ತಮ ಗಾಯಕರಾಗಿದ್ದಾರೆ. ತೋಟಗಾರ ಬಸಪ್ಪನೆಂಬ ಅಸ್ಪೃಶ್ಯನೂ, ರಾಮದುರ್ಗದ ಇಮಾಮಸಾಹೇಬನೂ ದೀಕ್ಷಿತರ ಶಿಷ್ಯವರ್ಗಕ್ಕೆ ಸೇರಿದವರು.

  • ಶಂಕರ ದೀಕ್ಷಿತರು ಸಂಗೀತೋಪಾಸಕರು ಮಾತ್ರವೇ ಅಲ್ಲ ; ಸಾಹಿತ್ಯ ಪಾಸಕರೂ ಆಗಿದ್ದಾರೆ. ನಾಟಕಗಳನ್ನೂ, ಕವಿತೆಗಳನ್ನೂ ಬರೆದಿದ್ದಾರೆ.

ಇಂಥ ವಿದ್ವನ್ಮಣಿಗಳ ಸದುಪಯೋಗವನ್ನು ಕನ್ನಡ ಜನ ಮಾಡಿಕೊಳ್ಳ ಬೇಕು. ಹಿಂದೂಸ್ತಾನಿ ಸಂಗೀತ ಪದ್ಧತಿಯನ್ನು ವಿವರಿಸುವ ಗ್ರಂಥ ಕನ್ನಡದಲ್ಲಿ ಈವರೆಗೆ ಪ್ರಕಟವಾಗಿಲ್ಲ. ದೀಕ್ಷಿತರು ಈ ಕೊರತೆಯನ್ನು ತುಂಬಲೆತ್ನಿಸಬೇಕು.